ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೮೨ ಶ್ರೀಮದ್ರಾಮಾಯಣವು [ಸರ್ಗ, ೮, ಹುಚ್ಚು ಹಿಡಿದವನಂತೆ ಇಲ್ಲಿ ಸುತ್ತುತ್ತಿರುವೆನು ನಮ್ಮಣ್ಣನಿಗೂ, ನನಗೂ ಸಂಪೂರ್ಣವಾದ ವೈರವು ಬೆಳೆದುಹೋಗಿರುವುದು ಆ ವಾಲಿಯ ಭಯದಿಂ ದಲೇ ನಾನು ಅನವರತವೂ ತಳಿಸುತ್ತಿರುವೆನು ಎಲೈ ಮಹಾತ್ಮನೆ' ನೀನು ಸಮಸ್ತಲೋಕಗಳಿಗೂ ಅಭಯವನ್ನು ಕೊಟ್ಟು ಕಾಪಾಡತಕ್ಕವನು ಅನಾಥ ನಾದ ನನ್ನ ಕ್ಲಿಯೂ ಈಗ ನೀನು ಅನುಗ್ರಹವನ್ನು ತೋರಿಸಬೇಕು” ಎಂದನು ಇದನ್ನು ಕೇಳಿ ಮಹಾತೇಜಸ್ವಿಯಾಗಿಯೂ, ಧರಾತ್ಮವಾಗಿಯ, ಧಮ್ಮವ ತೃಲನಾಗಿಯೂ ಇರುವ ರಾಮನು, ಮುಗಳ್ಳ ಗೆಯೊಡನೆ ಆ ಸುಗ್ರೀವನನ್ನು ಕುರಿತುಎಲೈ ಕಪೀಂದ್ರನೆ' ಇದೀಗ ಚೆನ್ನಾ ಯಿತು' ಇದೇನು?ನೀನು ಹೀಗೆ ಪುನಃಪುನಃ ಪ್ರಾರ್ಥಿಸುತ್ತಿರುವೆ ? ಮಿತ್ರನಾದುದಕ್ಕೆ ಉಪಕಾರಮಾಡುವು ದೇ ಫಲವು' ಆಪಕಾರಮಾಡುವುದೇ ಶತ್ರುವಿನ ಲಕ್ಷಣವು ಆದುದರಿಂದ ಮಿ ತ್ರನಾದ ನಿನ್ನ ಉಪಕಾರಕ್ಕಾಗಿ,ನಿನ್ನ ವೈರಿಯಾದ ಮತ್ತು ನಿನ್ನ ಪತ್ನಿ ಯನ್ನ ಪ ಹರಿಸಿದ ವಾಲಿಯನ್ನು ನಾನು ಸತ್ಯವಾಗಿ ವಧಿಸುವನು ಮೊದಲೇ ನಾನು ಆಣೆಯಿಟ್ಟು ನಿನಗೆ ಪ್ರತಿಜ್ಞೆ ಮಾಡಿ ಕೊಟ್ಟಿರುವಾಗಲೂ, ನೀನು ಹೀಗೆ ಸಂ ದೇಹಿಸುವುದೇಕೆ' ಎಲೆ ಮಿತ್ರನ'ಇದೊ' ಮಹಾವೇಗವುಳ್ಳ ಈ ನನ್ನ ಬಾಣ ಗಳನ್ನು ನೋಡಿದೆಯಾ?ಇವುಗಳ ತೇಜಸ್ಸು ಆತಿತೀಕವಾದುದು ಇವು ಷ ಣ್ಮುಖನು ಹುಟ್ಟಿದ ಶರವಣದಲ್ಲಿ ಹುಟ್ಟಿದುವುಗಳು ಇವುಗಳ ಚಿನ್ನ ದಕಟ್ಟು ಗಳನ್ನೂ,ಇವುಗಳಿಗೆ ಕಟ್ಟಿರುವ ಕಂಕಪತ್ರಗಳನ್ನೂ ನೋಡು' ಇವು ಇಂದ್ರನ ವಜ್ರಾಯುಧಕ್ಕೆ ಸಮಾನವಾದುವೆಂದು ತಿಳಿ' ಇವುಗಳ ಋಜುವಾದ ಗಿಣ್ಣು ಗಳನ್ನೂ, ತೀಕ್ಷವಾದ ಅಲಗುಗಳನ್ನೂ ನೋಡು' ರೋಷದಿಂದ ಕೂಡಿ ದ ಸರ್ಪಗಳಂತೆ ಇವು ಅತಿಕ್ರಗಳಾಗಿರುವುವು ಎಲೆ ಸುಗ್ರೀವಾ ' ಹೆಸ ರುಮಾತ್ರಕ್ಕೆ ನಿನಗೆ ಸಹೋದರನೆನಿಸಿಕೊಂಡು ನಿನ್ನಲ್ಲಿ ಪಾಪಬುದ್ದಿಯನ್ನಿ “ು ನಿನಗೆ ವೈರಿಯಾಗಿರುವ ಆ ವಾಲಿಯನ್ನು , ಇದೊ' ಈ ಬಾಣಗಳಿಂದಲೇ ಬೆಟ್ಟವನ್ನು ರುಳಿಸುವಂತೆ ಹೊಡೆದು, ಕೆಡಹುವುದನ್ನು ನೋಡು” ಎಂದನು ಇದನ್ನು ಕೇಳಿ ಸುಗ್ರೀವನಿಗೆ ಪರಮಸಂತೋಷವುಂಟಾಗಲು • ಭಲೆ ಭಲೆ!” ಎಂದು ರಾಮನನ್ನು ಕೊಂಡಾಡುತ್ತ,ಪುನಃ ಆತನನ್ನು ಕುರಿತುರಾಮಾ'ಮು ಖ್ಯವಾಗಿ ನಾನು ದುಃಖಕ್ಕೀಡಾಗಿರುವೆನು' ದುಖಿತರಾದವರಿಗೆ ನೀನೇ ದಿಕೆ ನಿಸಿಕೊಂಡಿರುವೆಯಾದುದರಿಂದ, ನಾನು ಪ್ರಾರಿಸಿಕೊಂಡರೂ, ಪ್ರಾರ್ಥಿಸಿ