ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೮ ಸರ್ಗ, ೮ | ಕಿಷಿಂಧಾಕಾಂಡವು. ಕೊಳ್ಳದಿದ್ದರೂ, ನನ್ನನ್ನು ಕಷ್ಟದಿಂದ ಬಿಡಿಸುವ ಭಾರವು ನಿನ್ನ ದಾಗಿದೆ ಆದರೂ ನಾವಿಬ್ಬರೂ ಈಗ ಅಗ್ನಿ ಸಾಕ್ಷಿಕವಾಗಿ ಕೈಹಿಡಿದು ಮಾಡಿ ಕೊಂಡ ಸ್ನೇಹದ ಸಲಿಗೆಯಿಂದ, ನಾನು ನಿನ್ನನ್ನು ಹೆಚ್ಚಾಗಿ ನಿರ್ಬಂ ಥಿಸಿ ನಿನ್ನಲ್ಲಿ ಮೊರೆಯಿಡುತ್ತಿರುವೆನು ನೀನು ಈಗ ನನಗೆ ಪ್ರಾಣಕ್ಕಿಂ ತಲೂ ಮೇಲೆನಿಸಿಕೊಂಡಿರುವೆ ಈ ವಿಷಯದಲ್ಲಿ ನಾನು ಸತ್ಯದಮೇಲೆ ಆಣೆಯಿಟ್ಟು ಹೇಳುವೆನು ಸ್ನೇಹಿತನೆಂಬ ಸಲಿಗೆಯಿಂದ ನಾನು ನಿಸ್ಸಂ ಕೋಚವಾಗಿ ನಿನ್ನಲ್ಲಿ ಹೇಳಬಾರದುದನ್ನೆಲ್ಲಾ ಹೇಳಬೇಕಾಗಿರುವುದು ನನ್ನ ಮನಸ್ಸಿನಲ್ಲಿರುವ ದುಃಖವು ನನ್ನನ್ನು ಎಡೆಬಿಡದೆ ದಹಿಸುತ್ತಿರುವುದು ನಾನೇನು ಮಾಡಲಿ' ” ಎಂದು ಇಷ್ಟು ಮಾತ್ರವನ್ನು ಹೇಳಿ, ಕಣ್ಣು ಗಳಲ್ಲಿ ಫಳಫಳನೆ ನೀರನ್ನು ಸುರಿಸುತ್ತ, ಮೇಲೆಮೇಲೆ ಕಲರವು ಕುಗ್ಗಿ ಹೋಗಲು, ಗದ್ಯ ದಸ್ವರದಿಂದ ಗಟ್ಟಿಯಾಗಿ ಮಾತಾಡುವುದಕ್ಕೂ ಅವ ಕಾಶವಿಲ್ಲದ ಸುಮ್ಮನಾದನು ಆದರೆ ಆ ಸುಗ್ರೀವನು ಬಹಳ ಜಿತೇಂದ್ರ ಯನಾದುದರಿಂದ, ನದೀಘ್ರವಾಹದಂತೆ ವೇಗದಿಂದ ಹೊರಟುಬರುತ್ತಿರು ವ ತನ್ನ ಕಣ್ಣೀರನ್ನು ರಾಮನಿಗೆ ತಿಳಿಯದಂತೆ ತನ್ನಲ್ಲಿಯೇ ಅಡಗಿಸಿಕೊಂಡನು ಆದರೂ ಇವನಿಗೆ ಮನಸ್ಸಿನಲ್ಲಿರುವ ಸಂಕಟವನ್ನು ತಡೆಯಲಸಾಧ್ಯವಾಯಿ ತು ! ಆ ದುಃಖದಿಂದ ಆಗಾಗ ನಿಟ್ಟುಸಿರನ್ನು ಬಿಡುತ್ತ, ಕಣ್ಣುಗಳನ್ನೊರೆಸಿ ಕೊಂಡು, ಪುನಃ ರಾಮನನ್ನು ಕುರಿತು ಹೇಳುವನು (ಎಲೈ ರಾಮನೆ'ಬಲಿಷ ನಾದ ವಾಲಿಯು, ಮೊದಲು ನನ್ನನ್ನು ಯುವರಾಜಪದವಿಯಿಂದ ತಳ್ಳಿಬಿಟ್ಟ ನು'ಅಷ್ಟು ಮಾತ್ರವೇ ಅಲ್ಲದೆ' ಆಡಬಾರದ ಮಾತುಗಳನ್ನಾಡಿರಾಜ್ಯದಿಂದಲೂ ಓಡಿಸಿಬಿಟ್ಟನು ' ನನಗೆ ಪ್ರಾಣಕ್ಕಿಂತಲೂ ಪ್ರಿಯಳಾದ ನನ್ನ ಪತ್ನಿ ಯನ್ನೂ ವಶಮಾಡಿಕೊಂಡುಬಿಟ್ಟನು ನನ್ನ ಪಾಡು ಹಾಗಿರಲಿ' ನನ್ನ ಸ್ನೇಹಿತರೆಲ್ಲರ ನ್ಯೂ ಸೆರೆಯಲ್ಲಿಟ್ಟನು ಇಷ್ಟಾದರೂ ಬಿಡದೆ ವಾಲಿಯು” ಈಗಲೂ ನನ್ನನ್ನು ಕೊನೆಗಾಣಿಸಿಬಿಡಬೇಕೆಂದೇ ಪ್ರಯತ್ನ ಮಾಡುತ್ತಿರುವನು ಇದಕ್ಕಾಗಿ ಅವ ನು ಕಳುಹಿಸಿದ ಅನೇಕವಾನರರನ್ನೂ ಕೊಂದುಹಾಕಿದೆನು ರಾಮಾ 'ನಾನು ಮೊದಲು ನಿನ್ನನ್ನು ನೋಡಿದಾಗ, ನೀನೂ ವಾಲಿಯಕಡೆಯವನೆಂಬ ಸಂದೇಹ ದಿಂದ ಭಯಪಟ್ಟು, ನಡುಗುತಿದ್ದೆನು ನೀನು ಇಷ್ಟು ಪರಮಕಾರುಣಿಕವೆಂಬು