ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೮೪ ಶ್ರೀಮದ್ರಾಮಾಯಣವು [ಸರ್ಗ, ೮. ದು ನನಗೆ ತಿಳಿಯದೆಹೋಯಿತು ಅದಕ್ಕಾಗಿಯೇ ನಾನು ನಿನ್ನ ಬಳಿಗೆ ಬಾರದೆ ನಿನ್ನನ್ನು ಕಂಡು ದೂರಕ್ಕೋಡುತಿದ್ದೆನು ಭಯಕಾರಣವಿದ್ದಾಗ ಯಾರಾದ ರೂ ಭಯಪಡಬೇಕಾದುದೇ ಸಹಜವಲ್ಲವೆ ? ನನಗೆ ಆಪತ್ಕಾಲದಲ್ಲಿ ಈ ಹ ನುಮಂತನು ಮೊದಲಾದನಾಲ್ಕು ಮಂದಿ ಕಪಿಗಳುಮಾತ್ರವೇ ಸಹಾಯಕರೇ ಹೊರತು ಬೇರೆಯಿಲ್ಲ ಇವರ ಬಲದಿಂದಲೇ ನಾನು ಇಷ್ಟು ಕಷ್ಟದಲ್ಲಿದ್ದ ರೂ ಪ್ರಾಣವನ್ನುಳಿಸಿಕೊಂಡಿರುವೆನು ಇವರಿಗೆ ನನ್ನಲ್ಲಿ ನಿಜವಾದ ಸ್ನೇಹ ವುಂಟು' ನನ್ನನ್ನು ಯಾವಾಗಲೂ ಎಚ್ಚರಿಕೆಯಿಂದ ರಕ್ಷಿಸುತ್ತಿರುವರು ನಾ ನು ಹೋದಕಡೆಗೆಲ್ಲಾ ನನ್ನನ್ನು ಬಿಡದೆ ಹಿಂಬಾಲಿಸಿ ಬರುವರು ನಾನು ಎಲ್ಲಿದ್ದರೂ ಇವರು ನನ್ನೊಡನೆಯೇ ಇರುವರು ರಾಮಾ ! ಇನ್ನು ಹೆಚ್ಚು ಮಾತುಗಳಿಂದೇನು' ಸಂಕ್ಷೇಪವಾಗಿ ಹೇಳುವೆನು ಕೇಳು' ಮುಖ್ಯವಾಗಿ ನನ್ನ ಣ್ಣನೇ ನನಗೆ ವೈರಿಯಾಗಿರುವನು ಅವನಾದರೋ ಎಣೆಯಿಲ್ಲದ ಪಕಾಕ್ರಮ ನುಳ್ಳವನು ಅವನು ಸತ್ತಹೊರತು ನನ್ನ ದುಃಖವು ತೀರದು' ನನ್ನ ಸುಖವಾ ಗಲಿ, ನನ್ನ ಪ್ರಾಣವಾಗಲಿ ಅವನು ಸತ್ತ ಮೇಲೆಯೇ ಸ್ಥಿರಪಡಬೇಕೇಹೊರ ತು ಬೇರಯಲ್ಲಿ ಇದ್ದ ಸಂಗತಿಯನ್ನು ಸಂಕ್ಷೇಪವಾಗಿ ಹೇಳಿಬಿಟ್ಟಿರುವೆನು ಇದೇ ನನ್ನ ದುಃಖಕ್ಕೆ ಮೂಲವು ದುಃಖವನ್ನು ತಡೆಯಲಾರದೆ ನಮ್ಮೊಳಗಿನ ಗೃಹಬ್ಬಿದ್ರವನ್ನು ನಿನಗೆ ನಿಸ್ಸಂಕೋಚವಾಗಿ ತಿಳಿಸಿಬಿಟ್ಟಿರುವೆನು ದುಃಖಿ ತನಾಗಲಿ, ಸುಖಿತನಾಗಲಿ, ಮಿತ್ರನಿಗೆ ಮಿತ್ರನೇ ಗತಿಯಲ್ಲವೆ” ಎಂದನು ಇದನ್ನು ಕೇಳಿ ರಾಮನು ಸುಗ್ರೀವನನ್ನು ಕುರಿತು : ನಿನಗೂ ವಾಲಿಗೂ ಯಾವ ಕಾರಣದಿಂದ ಹೀಗೆ ವೈರವುಂಟಾಯಿತು? ಯಧಾಸ್ಥಿತವಾಗಿ ತಿಳಿಸು. ಮೊದಲು ಮೂರಕಾರಣವನ್ನು ಕೇಳಿ, ಆಮೇಲೆ ಅವುಗಳ ಬಲಾಬಲಗಳನ್ನು ಚೆ ನನ್ನಾಗಿ ಪಾಲೋಚಿಸಿ,ಅದರಮೇಲೆ ತಕ್ಕ ಪ್ರತಿಕ್ರಿಯೆಯನ್ನು ಮಾಡಬೇ ಕಾಗಿರುವುದು ವಾಲಿಯು ನಿನಗುಂಟು ಮಾಡಿದ ಅವಮಾನವನ್ನು ಕೇಳಿದಾಗಿ ನಿಂದಲೇ,ವರ್ಷಾಕಾಲದ ಜಲಪ್ರವಾಹದಂತೆ ನನ್ನ ಮನಸ್ಸಿನಲ್ಲಿ ಕೋಪವು

  • ಇಲ್ಲಿ ಬಲಾಬಲವೆಂದರೆ “ವಾಲಿಯ ಕೋಪಕ್ಕೆ ಕಾರಣವಾದ ನಿನ್ನ ಅಪರಾಧವೇ ಪ್ರಬಲವಾಗಿದ್ದರೆ ನಿಮ್ಮಿಬ್ಬರಿಗೂ ಸಮಾಧಾನವನ್ನು ಮಾಡಿ ಕ್ಷೇಮದಿಂದಿರಿಸುವೆನೆಂದೂ, ಅಪರಾಧವು ಸ್ವಲ್ಪವಾಗಿ, ವೈರವೇ ಹೆಚ್ಚಿದ್ದರೆ ವಾಲಿಯನ್ನು ಕೊಲ್ಲುವೆ'ನೆಂದೂ ಹೇ ಆದುದಾಗಿ ಭಾವವು