ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೮೫ ಸರ್ಗ ೯ | ಕಿಕ್ಕಿಂಧಾಕಾಂಡವು. ಉಕ್ಕಿಬಂದು, ನನ್ನ ಹೃದಯವನ್ನು ಕದಲಿಸುತ್ತಿರುವುದು ಆದುದರಿಂದ, ನೀ ನ ನಿಸ್ಸಂಕೋಚವಾಗಿ ಇದ್ದ ಸ್ಥಿತಿಯನ್ನು ಸಂತೋಷದಿಂದ ತಿಳಿಸು ನೀನು ಹೇಳಿ ಮುಗಿಸುವಷ್ಟರಲ್ಲಿಯೇ, ನಾನು ಈ ನನ್ನ ಬಿಲ್ಲನ್ನು ಏರಿಸಿ ಹಿಡಿಯುವೆ ನೆಂದು ತಿಳಿ' ನಾನು ಬಾಣವನ್ನು ಬಿಡುವುದೇ ತಡೆ' ಆ ಕ್ಷಣವೇ ನಿನ್ನ ಶತ್ರು ವು ಹತನಾದನೆಂದೂ ಭಾವಿಸು” ಎಂದನು ಮಹಾತ್ಮನಾದ ರಾಮನ ಮಾ ತನ್ನು ಕೇಳಿ, ಸುಗ್ರೀವನೂ, ಆತನ ನಾಲ್ಕು ಮಂದಿ ಮಂತ್ರಿಗಳೂ ಪರ ಮಸಂತೋಷವನ್ನು ಹೊಂದಿದರು ಆಮೇಲೆ ಸುಗ್ರೀವನು ಸಂತೋಷ ದಿಂದ ರಾಮನಿಗೆ ವೈರಕಾರಣವೆಲ್ಲವನ್ನೂ ಯಥಾಸ್ಥಿತವಾಗಿ ತಿಳಿಸಲಾರಂಭಿ ಸಿದನು ಇಲ್ಲಿಗೆ ಎಂಟನೆಯ ಸರ್ಗವು ವಾಲಿಯ ಅಪರಾಧಗಳನ್ನು ಸುಗ್ರೀವನು ರಾಮನಿಗೆ ತಿಳಿಸಿದುದು «ರಾಮಾ' ಶತ್ರುಗಳನ್ನು ಹುಟ್ಟಡಗಿಸತಕ್ಕ ನನ್ನಣ್ಣನಾದ ವಾಲಿಯ ನ್ನು ನಮ್ಮ ತಂದೆಯು ಅತಿಪ್ರೀತಿಯಿಂದ ಪೋಷಿಸುತ್ತಿದ್ದನು ನಾನೂ ಹಾ ಗೆಯೇ ನನ್ನಣ್ಣನಲ್ಲಿ ಪರಮಪ್ರೇಮವನ್ನಿಟ್ಟಿದ್ದೇನು ನಮ್ಮ ತಂದೆಯು ಮೈ ತನಾದಮೇಲೆ, ಮಂತ್ರಿಗಳೆಲ್ಲರೂ ಸೇರಿ ಹಿರಿಯವನಾದ ವಾಲಿಯನ್ನು ವಾನ ರರಾಜ್ಯದಲ್ಲಿರಿಸಿ ಪಟ್ಟಾಭಿಷೇಕಮಾಡಿಸಿದರು ಆ ವಾಲಿಯು ವಂಶಪರಂಪರೆ ಯಾಗಿ ಬಂದ ದೊಡ್ಡ ವಾನರರಾಜ್ಯವನ್ನು ನಿರಂಕುಶವಾಗಿ ಪರಿಪಾಲಿಸುತಿ ದ್ಯನು ನಾನೂ ಆತನಿಗೆ ಅತಿವಶ್ಯನಾಗಿ ಸರೈ ಕಾಲಗಳಲ್ಲಿಯೂ ಅವನಲ್ಲಿ ಸೇವ ಕನಂತೆ ನಡೆದುಕೊಳ್ಳುತಿದ್ದೆನು ಈ ಸಂದರ್ಭದಲ್ಲಿ ದುಂದುಭಿಯೆಂಬವನಿಗೆ ಹಿರಿಯಮಗನಾದ ಮಾಯಾವಿಯೆಂಬ ರಾಕ್ಷಸನೊಬ್ಬನಿದ್ದನು ಆತನು ಬಹ ಳ ವೀಠ್ಯವಂತನು ಒಂದು ಹೆಂಗಸಿನ ನಿಮಿತ್ತವಾಗಿ ಆತನಿಗೂ ನನ್ನಣ್ಣನಾ ದ ನಾಲಿಗೂ ಮಹಾವೈರವುಂಟಾಯಿತು ಇದು ಲೋಕವಿದಿತವಾದ ವೃ ತಾಂತವು ಒಂದಾನೊಂದು ದಿನದ ಅಧ್ಯರಾತ್ರಿಯಲ್ಲಿ, ನಾವೆಲ್ಲರೂ ನಿದ್ರೆ ಹೋಗುತಿದ್ದಾಗ, ಆ ಮಾಯಾವಿಯು ನಮ್ಮ ಕಿಷಿಂಧೆಯ ಬಾಗಿಲಿಗೆ ಬಂ ದು, ಅತ್ಯಾರ್ಭಟೆಯಿಂದ ಗರ್ಜಿಸಿ, ವಾಲಿಯನ್ನು ಯುದ್ಧಕ್ಕೆ ಕರೆದನು ಆಗ