ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭ಲಕ್ಷ್ಮೀ ಶ್ರೀಮದ್ರಾಮಾಯಣವು [ಸರ್ಗ ೯. ನಿದ್ರೆಹೋಗುತಿದ್ದ ನನ್ನಣ್ಣನ್ನು,ಭಯಂಕರವಾw ಆ ಗರನವನ್ನು ಕೇಳಿ ಸಹಿ ಸಲಾರದೆ ಅತಿವೇಗದಿಂದ ಹೊರಕ್ಕೆ ಬಂದನು ಆಗ ಆ ವಾಲಿಯ ಪತ್ನಿ ಯ ರೂ, ನಾನೂ, ವಿನಯಪೂರೈಕವಾಗಿ ಎಷ್ಟೊವಿಧದಲ್ಲಿ ಪ್ರಾಸಿ ವಾಲಿ ಯನ್ನು ತಡೆದೆವು ಆದರೂ ಅವನು ನಮ್ಮ ಮಾತನ್ನು ಮೀರಿ ಕೋಪದಿಂದ ಆ ರಾಕ್ಷಸನನ್ನು ಕೊಲ್ಲುವುದಕ್ಕಾಗಿ ಹೊರಟನು ಹೀಗೆ ವಾಲಿಯು ಅಡ್ಡ ಲಾಗಿ ಬಂದ ನಮ್ಮೆಲ್ಲರನ್ನೂ ಒದರಿಕೊಂಡು, ಆ ರಾಕ್ಷಸನೊಡನೆ ಯುದ್ಧ ಕೈ ಹೊರಡಲು, ನನಗೆ ಅಣ್ಣನಲ್ಲಿರುವ ಪ್ರೇಮದಿಂದ ಮನಸ್ಸು ತಡೆಯದೆ ಹೋಯಿತು ನಾನೂ ಆ ವಾಲಿಯ ಹಿಂದೆಯೇ ಹೊರಟೆನು ಆ ರಾಕ್ಷಸ ನಾದರೋ, ಹೀಗೆ ಬನ್ನಟ್ಟಿ ಬರುತ್ತಿರುವ ನನ್ನಣ್ಣನನ್ನೂ, ಅವನ ಹಿಂದೆ ದೂರದಲ್ಲಿ ಹಿಂಬಾಲಿಸಿ ಬರುತ್ತಿರುವ ನನ್ನ ನ್ನೂ ನೋಡಿ ಭಯಪಟ್ಟು ಇದಿ ರಿಸಲಾರದೆ ಓಡುವುದಕ್ಕಾರಂಭಿಸಿದನು ಅವನು ಭಯದಿಂದ ಓಡುವು ದನ್ನು ನೋಡಿ ನಾವೂ ಅವನನ್ನು ಬೆನ್ನಟ್ಟಿ ವೇಗ&ಂದ ಹೋದೆವು ಆಗಲೇ ಚಂದ್ರೋದಯವಾಗಿ ಚೆನ್ನಾಗಿ ಬೆಳಕಿದ್ದುದರಿಂದ,ದಾರಿಯು ಸ್ಪಷ್ಟವಾಗಿ ಕಾಣುತಿತ್ತು ರಾಕ್ಷಸನು ಬಹುದೂರದವರೆಗೂ ಓಡಿ, ಕೊನೆಗೆ ಅಲ್ಲಿ ನೆಲದೊ ಳಗೆ, ಮೇಲೆ ಹುಲ್ಲು ಮುಚ್ಚಿದ್ದ ಒಂದು ಮಹಾಬಿಲಕ್ಕೆ ಪ್ರವೇಶಿಸಿ ಬಿಟ್ಟನು ಆ ಬಿಲವಾದರೋ ಇತರರಿಗೆ ದುರ್ಗಮವಾಗಿಯೂ ಬಹಳ ವಿಶಾಲವಾಗಿ ಯೂ ಇದ್ದಿತು ಮಾಯಾವಿಯು ಅತಿವೇಗbಂದ ಆ ಬಿಲದಲ್ಲಿ ಪ್ರವೇಶಿಸಿ ಬಿಟ್ಟನು ನಾವಿಬ್ಬರೂ ಆ ಬಿಲದ ಬಾಗಿಲಲ್ಲಿ ನಿಂತೆವು ಹೀಗೆ ತಪ್ಪಿಸಿಕೊಂ ಡುಹೋದ ರಾಕ್ಷಸನನ್ನು ನೋಡಿ ನನ್ನಣ್ಣನಿಗೆ ಮೈಮರೆಯುವಷ್ಟು ಕೂಪ ವುಂಟಾಯಿತು ಅವನ ಇಂದ್ರಿಯಗಳೆಲ್ಲವೂ ಕಲಗಿಹೋದುವು ಆಗ ವಾಲಿ ಯು ನನ್ನನ್ನು ಕುರಿತು “ವತ್ನ ಸುಗ್ರೀವಾ " ನೀನು ಬಿಲದ್ವಾರದಲ್ಲಿಯೇ ಎಚ್ಚರಿಕೆಯಿಂದ ಕಾದಿರು' ನಾನು ಬಿಲದೊಲಗೆ ಪ್ರವೇಶಿಸಿ ಆ ಶತ್ರುವ ನ್ನು ಕೊಂದು ಬರುವೆನು ಅದುವರೆಗೂ ನೀನು ಎಚ್ಚರದಿಂದಿರು”ಎಂದನು ಆಗ ನಾನು ನನ್ನಣ್ಣನನ್ನು ಕುರಿತು ನಾನೂ ಸಂಗಡ ಬರುವೆ”ನೆಂದು ಎ ಪ್ರೊವಿಧದಲ್ಲಿ ಪ್ರಾರ್ಥಿಸಿದೆನು ಆದರೂ ಅವನು ನನ್ನ ಪ್ರಾರ್ಥನೆಯನ್ನು ಸ್ವೀಕರಿಸದೆ, ನನ್ನ ಕೈಯಿಂದ ತನ್ನ ಕಾಲುಗಳನ್ನು ಮುಟ್ಟಿ ಆಣೆಯಿಡಿಸಿ