ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೯ ] ಕಿಂಧಾಕಾಂಡವು. ೧೩೮೩ ಕೊಂಡು, ಆ ಮಹಾಬಿಲಕ್ಕೆ ಪ್ರವೇಶಿಸಿಬಿಟ್ಟನು ಅವನು ಬಿಲಕ್ಕೆ ಪ್ರ ತಿಸಿದಮೇಲೆ ಪೂರ್ಣವಾಗಿ ಒಂದು ಸಂವತ್ಸರವು ಕಳೆದು ಹೋಯಿತು ಅಷ್ಟು ದೀರ್ಘಕಾಲದವರೆಗೂ ನಾನು ಅಣ್ಣನಾಜ್ಞೆಯನ್ನು ಮೀರಬಾರ ದೆಂಬುದಕ್ಕಾಗಿ ಅಲ್ಲಿಂದ ಕದಲದೆ ಕಾದಿದ್ದೆನು ಆದರ ಬಹು ದೀರ್ಘಕಾಲ ದವರೆಗೂ ಅವನು ಹಿಂತಿರುಗಿ ಬಾರದುದನ್ನು ನೋಡಿ, ನನಗೆ ಅವನಲ್ಲಿರುವ ಸಹೋದಪ್ರೇಮದಿಂದ ಮನಸ್ಸು ಕಳವಳಹೊಂದಿತು ವಾಲಿಯು ರಾ ಕ್ಷಸನಿಂದ ಸಂಹೃತನಾಗಿರಬಹುದೆಂದೇ ತಿಳಿದುಕೊಂಡೆನು ಬಿಲಕ್ಕೆ ಹೋ ದ ವಾಲಿಯು ಆಗುವರೆಗೂ ಹಿಂತಿರುಗದಿದ್ದುದರಿಂದ, ಅವನ ವಿಷಯದಲ್ಲಿ ನನಗೆ ಅಪಾಯಶಂಕಯುಂಟಾಯಿತು ಈ ಭಾಂತಿಯನ್ನು ಚೆನ್ನಾಗಿ ಸ್ಥಿರಪ ಡಿಸುವಂತೆ, ಆ ಬಿಲದೊಳಗಿನಿಂದ ನೊರೆಗಟ್ಟಿದ ರಕ್ತ ಪ್ರವಾಹವು ಹೊರ ಡಲ: ರಂಭಿಸಿತು ನನ್ನ ಮನಸ್ಸಿನ ಶಂಕೆಯು ಸ್ಥಿರಪಟ್ಟುಹೋಯಿತು ಆ ರ ಕ್ಯವನ್ನು ನೋಡಿ ನನಗೆ ಸಹಿಸಲಾರದ ಸಂಕಟವುಂಟಾಯಿತು ಇಷ್ಟರಲ್ಲಿ ಆ ಬಿಲದೊಳಗಿಂದ ಅನೇಕರಾಕ್ಷಸರ ಗರ್ಜನಧ್ವನಿಯೂ ಹೊರಟು ಬಂದು ನನ್ನ ಕಿವಿಗೆ ಕೇಳಿಸಿತು ಅದರೊಡನೆ ಯುದ್ಧದಲ್ಲಿ ಸಾಜಿತನಾದ ನನ್ನಣ್ಣ ನು ಹೀನಧ್ವನಿಯಿಂದ ಕೂಗಿಕೊಳ್ಳು ವಂತೆಯೂ ನನ್ನ ಕಿವಿಗೆ ಕೇಳಿಸಿತು ಎಲೈ ಮಿತ್ರನೆ 1 ಈ ಚಿಹ್ನಗಳಿಂದ ನನಗೆ ವಾಲಿಯು ರಾಕ್ಷಸರಿಂದ ಸಂಸ್ಕೃತ ನಾದನೆಂದೇ ನಿಶ್ಚಯವು ಹುಟ್ಟಿತು ಆಗ ಒಳಗಿದ್ದ ರಾಕ್ಷಸರಾದರೂ ಅಲ್ಲಿ ಯೇ ಸಾಯಲೆಂದು ನನ್ನ ಮನಸ್ಸಿನಲ್ಲಿ ಚಿಂತಿಸಿ, ಬೆಟ್ಟದಂತಿರುವ ಕಲ್ಲುಗಳ ನ್ನು ಹೊತ್ತು ತಂದು, ಆ ಬಿಲದ್ವಾರವನ್ನು ಚೆನ್ನಾಗಿ ಮುಚ್ಚಿಬಿಟ್ಟೆನು ಆ ಗಲೇ ಅಣ್ಣನಾದ ವಾಲಿಗೆ ಉದಕಕ್ರಿಯೆಯನ್ನು ಮಾಡಿ ಅಲ್ಲಿಂದ ಹಿಂತಿರುಗಿ, ಕಿಷಿಂಥೆಗೆ ಬಂದು ಸೇರಿದೆನು ಆದರೆ ನಾನು ವಾಲಿಯ ಮರಣವನ್ನು ಪ್ರಜೆಗಳಿಗೆ ತಿಳಿಸಿದರೆ ದೇಶಕೈಭವುಂಟಾಗುವುದೆಂದೆಣಿಸಿ, ನಿಜಸ್ಥಿತಿ ಯೊಂದನ್ನೂ ಹೊರಬೀಳಿಸದೆ ಮರಸುತ್ತಲೇ ಬಂದೆನು ಆದರೆ ಮಂ ತ್ರಿಗಳು ಬಹುಪ್ರಯತ್ನದಿಂದ ಆ ವಾಲಿಯ ಮರಣವನ್ನು ನನ್ನ ಬಾ ಯಿಂದ ಹೊರಡಿಸಿಬಿಟ್ಟರು ನಾನು ಅಲ್ಲಿನ ನಿಜಸ್ಥಿತಿಯೆಲ್ಲವನ್ನೂ ತಿಳಿಸಿಬಿಟ್ಟ ಮೇಲೆ, ಮಂತ್ರಿಗಳೆಲ್ಲರೂ ಸೇರಿ ಸಮ್ಮತಿಪೂರೈಕವಾಗಿ ನನ