ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೮ ಶ್ರೀಮದ್ರಾಮಾಯಣವು [ಸರ್ಗ, ೧೦. ಗೆ ಪಟ್ಟಾಭಿಷೇಕವನ್ನೂ ಮಾಡಿಬಿಟ್ಟರು ಆಮೇಲೆ ನಾನು ನ್ಯಾಯ ದಿಂದಲೇ ರಾಜ್ಯವನ್ನು ಪಾಲಿಸುತಿದ್ದೆನು ರಾಮಾ ' ದೈವಗತಿಯನ್ನು ನಾನೇನೆಂದು ಹೇಳಲಿ' ನಾನು ಹೀಗೆ ರಾಜ್ಯಭಾರಮಾಡುತ್ತಿರುವಾಗ ಅತ್ತ ಲಾಗಿ ನನ್ನಣ್ಣನಾದ ವಾಲಿಯು ಆ ರಾಕ್ಷಸನನ್ನು ಕೊಂದು ಜಯಶೀಲನಾ ಗಿ ಹಿಂತಿರುಗಿ ಬಂದು ಇತ್ತಲಾಗಿ ಪಟ್ಟಾಭಿಷಿಕ್ತನಾಗಿ ರಾಜ್ಯವನ್ನು ಪಾಲಿ ಸುತಿದ್ದ ನನ್ನನ್ನು ನೋಡಿದನು ಅವನಿಗೆ ತಡೆಯಲಾರದ ಕೋಪವುಂಟಾ ಯಿತು ಅವನ ಕಣ್ಣುಗಳೆರಡೂ ಕೆಂಡದಂತೆ ಕೆಂಪಾದುವು ಆ ಕ್ಷಣವೇ ನನ್ನ ಮಂತ್ರಿಗಳೆಲ್ಲರನ್ನೂ ಸೆರೆಯಲ್ಲಿಟ್ಟನು ನನ್ನನ್ನು ಕ್ರೂರವಾಕ್ಯಗಳಿಂದ ನಿಂದಿಸತೊಡಗಿದನು ಆಗ ಪ್ರಕೃತಿಬಲಸಂಪನ್ನನಾಗಿದ್ದ ನಾನು, ಆ ವಾಲಿಯನ್ನು ಆಗಲೇ ನಿಗ್ರಹಿಸಬಲ್ಲವನಾಗಿದ್ದರೂ, ಅಣ್ಣನೆಂಬ ಗೌರವಬು ದಿಯಿಂದ ನನ್ನ ಮನಸ್ಸು ಹಿಂತೆಗೆಯಿತು ಆದುದರಿಂದ ನಾನು ಅವನ ಕ್ರೂರವಾಕ್ಯಗಳನ್ನೂ ಲಕ್ಷಿಸದೆ, ಶತ್ರುಜಯವನ್ನು ಮಾಡಿ ಬರುತ್ತಿರುವ ಆ ತನನ್ನು ಎಷ್ಟೋ ಗೌರವದಿಂದ ಸತ್ಕರಿಸಿ ನಮಸ್ಕರಿಸಿದೆನು ಏನಾದರೇನು? ಇದರಿಂದ ಅವನು ಸ್ವಲ್ಪವಾದರೂ ಸಂತುಷ್ಟನಾಗಲಿಲ್ಲ ಅವನ ಮನಸ್ಸಿನ ಕೋಪವೂ ಅಡಗಲಿ ನಮಸ್ಕರಿಸುತ್ತಿರುವ ನನಗೆ ಎಂದಿನಂತೆ ಅವನು ಆಶೀರ್ವಾದಗಳನ್ನೂ ಮಾಡಲಿಲ್ಲ ಆದರೂ ನಾನು ಬಿಡದೆ ಬಾರಿಬಾರಿಗೂ ಅವನ ಪಾದಗಳಿಗೆ ತಲೆಯನ್ನು ಸೋಕಿಸಿ ಸಾಷ್ಟಾಂಗಪ್ರಣಾಮವನ್ನು ಮಾ ಡುತಿದ್ದೆನು ಆಗಲೂ ಅವನಿಗೆ ನನ್ನಲ್ಲಿ ಅನುಗ್ರಹವು ಹುಟ್ಟಲಿಲ್ಲ ಅವನ ಕೋಪವೂ ಶಾಂತವಾಗಲಿಲ್ಲ” .ಇಲ್ಲಿಗೆ ಒಂಬತ್ತನೆಯಸರ್ಗವು ( ಸುಗ್ರೀವನು ತಾನು ವಾಲಿಯನ್ನು ಅನೇಕ ವಿಧದಲ್ಲಿ ) ಪ್ರಾರ್ಥಿಸಿದುದನ್ನೂ,ಆದರೂ ವಾಲಿಯು ನಿರ್ದಯ | ನಾಗಿ ತನ್ನನ್ನು ನಿಗ್ರಹಿಸಿದುದನ್ನೂರಾಮನಿಗೆ ತಿಳಿಸಿದುದು ಹೀಗೆ ನನ್ನಣ್ಣನಾದ ವಾಲಿಯು ಮೈತಿಳಿಯದ ಕೋಪದಿಂದಿರುವು ದನ್ನು ನೋಡಿ, ನಾನು ಆತನನ್ನು ಪ್ರಸನ್ನ ನನ್ನಾಗಿ ಮಾಡಬೇಕೆಂಬ ಕೋ