ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೪ ಶ್ರೀಮದ್ರಾಮಾಯಣವು [ಸರ್ಗ, ೧೧, ಸುಲಭವಾಗಿ ಸುತ್ತಿಬರುವನು ಇದಲ್ಲದೆ ಮಹಾವೀಲ್ಯವುಳ್ಳ ಆ ವಾಲಿಯು, ಪ್ರತಾಗ್ರಗಳನ್ನೇರಿ, ಅಲ್ಲಿ ದೊಡ್ಡ ದೊಡ್ಡ ಪರತಶಿಖರಗಳನ್ನು ಕೈಯಿಂ ದೆ, ಚಂಡಿನಂತ ವೇಗದಿಂದ ಮೇಲಕ್ಕಸೆದು, ಅವುಗಳನ್ನು ಆತುಕೊಳ್ಳುವ ನು ಮತ್ತು ಆತನು ತನ್ನ ಬಲವನ್ನು ತೋರಿಸುವುದಕ್ಕಾಗಿ ಕಾಡುಗಳಲ್ಲಿ ದೃಢ ವಾಗಿ ಬೆಳೆದ ಬಗೆಬಗೆಯ ಮರಗಳಲ್ಲವನ್ನೂ ತನ್ನ ಕೈಯಿಂದಲೇ ಮುರಿಯು ತಿರುವನು ಪೂತ್ವದಲ್ಲಿ ಕೈಲಾಸತಿಖರದಂತಿದ್ದ ಮಹಿಷರೂಪಿಯಾದ ದುಂದುಭಿಯಂಬ ರಾಕ್ಷಸನೊಬ್ಬನು, ಸಾವಿರಾನೆಗಳ ಬಲವುಳ್ಳವ ನಾಗಿದ್ದನು ಆ ದುಷ್ಟತ್ಯನು ತನ್ನ ವೀರಿದ ಕೊಬ್ಬಿನಿಂದಲೂ, ತನು ಪ ಡೆದಿದ್ದ ವರದ ಬಲದಿಂದಲೂ ಮೈ ಮರೆತು,ಒಮ್ಮ ನದೀಪತಿಯಾದ ಸಮು ದ್ರರಾಜನಬಳಿಗೆ ಹೋದನು ವಿಶೇಷವಾದ ಅಲೆಗಳಂದ ತುಂಬಿ, ರತ್ನ ರಾಶಿ ಯೆನಿಸಿಕೊಂಡಿರುವ ಆ ಮಹಾಸಮುದ್ರವನ್ನು ನೋಡಿ,೦ದರ ಆಲ್ಬಟವನ್ನ ಡ ಗಿಸಬೇಕೆಂಬುದಕ್ಕಾಗಿ ಆ ಸಮುದ್ರವನ್ನು ಕುರಿತು ನನ್ನೊಡನೆ ಯುದ್ಧಕ್ಕೆ ಬರುವೆಯಾ?” ಎಂದನು ಆಗ ಧಾತ್ಮನಾದ ಸಮುದ್ರನು ಮನುಷ್ಯರೂ ಪದಿಂದ ಕಾಣಿಸಿಕೊಂಡು, ಮೃತ್ಯುಚೋದಿತನಾದ ಆ ರಾಕ್ಷಸನನ್ನು ನೋ ಡಿ ಆಯ್ತಾ' ಬಲಾಢನೆ' ಯುದ್ಧದಲ್ಲಿ ಸೀನು ಎಣೆಯಿಲ್ಲದ ಪಾಂಡಿತ್ಯವು ಭ್ರವನು ನಿನ್ನೂ ಡನೆ ನಾನು ಯುದ್ಧಮಾಡಬಲ್ಲೆನೆ? ಎಂದಿಗೂ ನನ್ನಿಂದ ಸಾಧ್ಯವಲ್ಲ ಹಾಗೆ ನಿನಗೆ ಯುದ್ಧ ಮಾಡಬೇಕಂಬ ಆಸೆಯಿದ್ದರೆ, ನಿನ್ನೊಡನೆ ಸಮವಾಗಿ ನಿಂತು ಯುದ್ಧ ಮಾಡಬಲ್ಲ ವೀರನೊಬ್ಬನನ್ನು ತೋರಿಸಿಕೊಡುವೆ ನು ಮಹಾರಣ್ಯದಲ್ಲಿ ಪ್ರತರಾಜನೊಬ್ಬನಿರುವನು ಅನೇಕತಪಸ್ವಿಗಳಿಗೆ ಆಶ್ರಯನಾಗಿರುವನು ಆತನು ರುದ್ರನಿಗೆ ಹೆಣ್ಣುಕೊಟ್ಟ ಮಾವನು ಅವನಿಗೆ ಹಿಮವಂತನೆಂದು ಹೆಸರು ದೊಡ್ಡಗುಹೆಗಳನ್ನೂ, ಗಿರಿನದಿಗಳನ್ನೂ ಹೊಂ ದಿ ಅನೇಕವಾದ ಸಣ್ಣಗುಹೆಗಳಿಂದಲೂ, ಕಮರಿಗಳಿಂದಲೂ ಭಯಂಕರ ನಾಗಿರುವನು ಅವನು ನಿನ್ನನ್ನು ಯುದ್ಧದಲ್ಲಿ ಸಂಪೂರ್ಣವಾಗಿ ತೃಪ್ತಿ ಹೊಂದಿಸಬಹುದು” ಎಂದನು ಆಗ ದುಂದುಭಿಯು, ಸಮುದ್ರರಾಜನೂ ತ ನಗೆ ಭಯಪಟ್ಟನೆಂಬ ಸಂತೋಷದಿಂದುಬ್ಬುತ, ಬಿಲ್ಲಿನಿಂದ ಹೊರಟ ಬಾಣ ದಂತೆ ಅತಿವೇಗದಿಂದ ಹಿಮವತ್ಪವ್ವತಪ್ರಾಂತಕ್ಕೆ ಹೋದನು ಆ ಪಕ್ವತದ