ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚರಿತ್ರೆ ដំ ಎಲ್ಲಾ ಮಹಾಪುರುಷರೂ ಹೀಗೆಯೇ ; ಅವರು ಎಷ್ಟೆ ಕಠಿನವಾದ ವಿಷಯಗಳನ್ನು ತೆಗೆದುಕೊಂಡರೂ ಸುಲಭವಾದ ಮಾತುಗಳಿ೦ದ ಮನಸ್ಸಿಗೆ ಅ೦ಟುವಂತೆಯೂ ಮರೆಯದಂತೆಯೂ ಅವುಗಳನ್ನು ವಿವರಿಸಿ ಹೇಳುವರು. ಸಂದರ್ಭಕ್ಕೆ ಅನುಕೂಲವಾರು ಕಥೆಗಳನ್ನೂ ಉಪಮಾನಗಳನ್ನೂ ಹೇಳುವುದೂ ಇವರಲ್ಲಿ ಒಂದು ಸಾಮಾನ್ಯವಾದ ಗುಣ. ಇದಕ್ಕೆ ಒಂದೆರಡು ಉದಾಹರಣೆಗಳನ್ನು ಕೊಟ್ಟರೆ ವ್ಯಕ್ತವಾಗಬಹುದು ಒಂದುನಾರಿ ಸಾಂಖ್ಯ ದರ್ಶ ನದ ಪ್ರಸ್ತಾಪ ಬಂದಾಗ ರಾಮಕೃಷ್ಣ ವರಮಹಂಸರು ಹೇಳಿದ್ದು ಏನೆಂದರೆ “ ಪುರುಷ ಅಕರ್ತಾ, ಏನೂ ಮಾಡುವುದಿಲ್ಲ; ಪ್ರಕೃ ತಿಯೇ ಎಲ್ಲಾ ಕಾರ್ಯವನ್ನೂ ಮಾಡುವುದು ಪುರುಷನು ಪ್ರಕೃತಿಯ ಈ ಸಕಲ ಕಾರ್ಯಗಳನ್ನೂ ಸಾಕ್ಷಿರೂರವಾಗಿ ನೋಡು ತಿರುತ್ತಾನೆ. ಪ್ರಕೃತಿಯೂ ಪುರುಷನನ್ನು ಬಿಟ್ಟು ತಾನಾ ತಾನು ಯಾವ ಕೆಲಸವನ್ನೂ ಮಾಡುವುದಕ್ಕೆ ಆಗುವುದಿಲ್ಲ”, ಇದು ಕೇಳಿದವರೆಲ್ಲರಿಗೂ ಅರ್ಥವಾಗಲಿಲ್ಲ, ಅದನ್ನು ನೋಡಿ “ ಮನೆ ಗಳಲ್ಲಿ ನೋಡಿಲ್ಲವೇನಪ್ಪ ! ಯಜಮಾನನಾದವನು ಸುಖವಾಗಿ ಒ೦ದು ದಿಂಬು ಒರಗಿಕೊಂಡು ಕೂತು, ಮಾಡಬೇಕಾದ ಕೆಲಸ ನನ್ನು ಹೇಳುತ್ತಾನೆ. ಯಜಮಾನಿ ಮಾತ್ರ ನೆರಿಯನ್ನೂ ಸೆರಗ ನ್ಯೂ ಸೆಕ್ಕಿಕೊಂಡು, ಒಂದುಸಲ ಅತ್ತಲಾಗಿ ಒಂದುಸಲ ಇತ್ತಲಾಗಿ ಹೋಗುತ್ತ ಆ ಕೆಲಸವಾಯಿತೇ ಇಲ್ಲವೇ, ಈ ಕೆಲಸವನ್ನು ಮಾಡಿ ದರೇ ಇಲ್ಲವೇ ಎಂದು ನೋಡುತ್ತಾಳೆ; ಕೇಳುತ್ತಾಳೆ; ಮನೆಯಲ್ಲಿ ರುವ ಮಕ್ಕಳು ಮರಿಗಳ ಯೋಗಕ್ಷೇಮಗಳನ್ನು ನೋಡುತ್ತಾಳೆ. ಮಧ್ಯೆ ಮಧ್ಯೆ ಬಂದು ಗಂಡನಿಗೆ “ ಅದು ತಾಗಾಯಿತು; ಇದು ಹೀಗಾಯಿತು. ಅದು ಮಾಡುವುದಕ್ಕೆ ಆಗುತ್ತದೆ. ಇದು ಮಾಡು ವುದಕ್ಕೆ ಆಗುವುದಿಲ್ಲ” ಎಂದು ಹೇಳುತ್ತಾಳೆ. ಯಜಮಾನನು ಮಾತ್ರ ತಂಬಾಕನ್ನು ತೀಡುತ್ತಲೋ ನಶ್ಯವನ್ನು ಮಾಡುತ್ತಲೋ 'ಹು ಹು ” ಎನ್ನುತ್ತಲೂ ತಲೆಯನ್ನೂ ಕೈಯನ್ನೂ ಅಲ್ಲಾಡಿಸುತ್ತಲೂ