ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಿದೆ. ಶ್ರೀ ಶ್ರೀಪರಮಹಂಸರವರ ವರಪ್ರಸಾದಬಲದಿಂದಲೂ, ಭಕ್ತ ರಾದ ಕನ್ನಡಿಗರ ಉತ್ಸಾಹಾಶ್ರಯಗಳಿಂದಲೂ ಆ ಉದ್ದೇಶವು ಸದ್ಯ ದಲ್ಲಿಯೇ ನೆರವೇರೀತೆಂದು ನಂಬಿದ್ದೇವೆ.

ಕ್ರಯವು ಸುಲಭವಾಗಿ ಪುಸ್ತಕವು ಎಲ್ಲರಿಗೂ ಕೊಳ್ಳುವು

ದಕ್ಕೆ ಸಾಧ್ಯವಾಗಿರಬೇಕೆಂಬ ಉದ್ದೇಶದಿಂದ ಮುಖ್ಯ ಮುಖ್ಯವಾದ ವಿಷಯಗಳನ್ನೇ ಸಂಗ್ರಹಿಸಿ ಗ್ರಂಥವನ್ನು ಸಣ್ಣದಾಗಿ ಬರೆದಿದ್ದೇವೆ. ಆದ್ದರಿಂದ ಪರಮಹಂಸರ ಉಪದೇಶಗಳನ್ನೆಲ್ಲ ಇಲ್ಲಿ ತರಲು ಅವ ಕಾಶವಾಗಲಿಲ್ಲ. ಪಾಠಕರೆಲ್ಲರೂ ಮ|| ರಾ|| ಎನ್, ವೆಂಕಟೇ ಶಯ್ಯ೦ಗಾರರಿಂದ ರಚಿತವಾದ “ ಶ್ರೀರಾಮಕೃಷ್ಣ ಪರಮಹಂಸರ ಉಪದೇಶವಾಕ್ಯಾವಳಿ” ಯನ್ನು ಓದಿ ಈ ಕೊರತೆಯನ್ನು ಪರಿ ಹಾರಮಾಡಿಕೊಳ್ಳಬೇಕೆಂದು ಪ್ರಾರ್ಥಿಸುವೆವು.

ಈ ಗ್ರಂಥದ ಸಮಸ್ತ ಹಕ್ಕು ಬಾಧ್ಯತೆಗಳೂ ಶ್ರೀ ಶ್ರೀರಾಮ

ಕೃಷ್ಣ ಮಠದವುಗಳಾಗಿರುತ್ತವೆ.

ಬೆಂಗಳೂರು, |

ಜನವರಿ 1919 | ಗ್ರಂಥಕರ್ತರು.