ವಿಷಯಕ್ಕೆ ಹೋಗು

ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಶ್ರೀ ರಾಮಕೃಷ್ಣ ಪರಮಹಂಸರ ಚರಿತ್ರೆ

ದಿ೦ದ ಬ೦ದ ಭಯಂಕರವಾದ ಧರ್ಮಗ್ಲಾನಿಯನ್ನು ನಿಗ್ರಹ ಮಾಡಿ ಶಾಂತಿಯನ್ನು ನೆಲೆಗೊಳಿಸುವರಾರು ? ಈ ದುಸ್ಥಿತಿಯು ಆ ಕರುಣಾಸಾಗರನಾದ ಭಗವಂತನ ಕಣ್ಣಿಗೆ ಬೀಳಲಾರದೇ ? ಅವೆ ನನ್ನು ಬಿಟ್ಟರೆ ಇದು ಮತ್ತಾರಿಂದ ತಾನೇ ಸಾಧ್ಯ? ಆಯಾ ಕಾಲಕ್ಕೆ ತಕ್ಕಂತೆ ಮನುಷ್ಯ ರೂಪದಿಂದ 2ಅವತಾರಮಾಡಿ ಗೋಳಾ ಡುತ್ತಿರುವ ಪ್ರಾಣಿಗಳನ್ನು ಕೈ ಹಿಡಿದು ಮೇಲಕ್ಕೆತ್ತಿ ಉದ್ಘಾತ ಮಾಡುವನು ಭಗವಂತನಲ್ಲವೇ ! ಇಲ್ಲದಿರೆ ಶ್ರೀ ಕೃಷ್ಣನು “ ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ಅಭ್ಯುತ್ಥಾನನು ಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ" ಎಂದು ಹೇಳಿರುವ ಮಾತುಸುಳೆ ? ಭಗವದ್ಯಾಕವ್ರ ಎಂದಿಗೂ ಸುಳ್ಳಾಗದು. ಅದ ರಂತೆ ಈಗಲೂ ಭಾರತೇಯಧರ್ಮವು ಸಂಪೂರ್ಣವಾಗಿ ಗ್ಲಾಸಿ ಹೊಂದಲು ಮೊದಲು ಮಾಡಿದೊಡನೆಯೇ ಈಶ್ವರನು ಧರ್ಮೊ ದ್ವಾರಕ್ಕಾಗಿ ಯಾವ ಪುಣ್ಯ ಸ್ವರುಷನಾಗಿ ಅವತರಿಸಿದನೋ ಆ ಮಹಾತ್ಮನ ಪವಿತ್ರ ಚರಿತ್ರೆಯನ್ನು ಭಕ್ತಿಯಿಂದ ಓದೋಣ.