ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಚರಿತ್ರ

ಜನರ ಧರ್ಮಗ್ರಂಥಗಳಲ್ಲಿಯೂ ಹೇಳಿದೆ ಭಗರ್ವಾ ಶ್ರೀರಾಮ ಚಂದ್ರ, ಶ್ರೀಕೃಷ್ಣ, ಬುದ್ಧ, ಶಂಕರಾಚಾರ, ಏಸುಕ್ರಿಸ್ತ, ಚೈತನ್ಯ ಮುಂತಾದ ಅವತಾರ ಪುರುಷರ ತಾಯಿತಂದೆಗಳ ಉದಾಹರಣೆಯನ್ನು ತೆಗೆದುಕೊಂಡು ಇದರತತ್ವವನ್ನು ವಿಚಾರ ಮಾಡಬಹುದು. ಯಜ್ಞ ಪುರುಷನು ತಂದುಕೊಟ್ಟ ಪಾಯಸವನ್ನು ಭೋಜನವಾಡಿ ಮೊದಲಾದ ದಶರಥನ ಹೆಂಡಿರು ಗರ್ಭಧಾರಣ ಮಾಡಿದಮೇಲೆ ಅವರಿಗಾದ ನಾನಾವಿಧವಾದ ದಿವ್ಯ ಅನುಭ ವವು ರಾಮಾಯಣದಲ್ಲಿ ವಿಸ್ತಾರವಾಗಿ ಲಿಖಿತವಾಗಿದೆ. ಶ್ರೀ ಕೃಷ್ಣನು ಗರ್ಭದಲ್ಲಿದ್ದಾಗ ಅವನ ತಾಯಿತಂದೆಗಳಿಗೆ ಜಗದೀ ಶ್ವರನು ದರ್ಶನಕೊಟ್ಟನೆಂದೂ ಹುಟ್ಟಿದಮೇಲೆ ಪ್ರತಿನಿತ್ಯವೂ ಯಾವುದಾದರೂ ಒಂದು ಅದ್ಭು ತವು ನಡೆಯುತ್ತಿತ್ತೆಂದೂ ಭಾಗ ವತದಲ್ಲಿ ಹೇಳಿದೆ. ಬುದ್ದ ದೇವನು ಶ್ರೀಮತಿಮಾಯಾದೇವಿಯ ಗರ್ಭ ವನ್ನು ಪ್ರವೇಶಮಾಡಿದ ಕಾಲದಲ್ಲಿಯೂ ಆಕೆಗೆ ಒಬ್ಬ , ಮಹಾಪುರುಷನು ಜ್ಯೋತಿರ್ಮಯವಾದ ಒಂದು ಬಿಳಿಯ ಆನೆಯ ರೂಪವನ್ನು ಧರಿಸಿ ಉದರವನ್ನು ಪ್ರವೇಶಮಾಡಿದಂತೆಯೂ ಆಮೇಲೆ ಇಂದ್ರಾದಿದೇವತೆಗಳು ಬಂದು ಆಕೆಗೆ ನಮಸ್ಕಾರಮಾಡಿ ದಂತೆಯೂ ಹೇಳಿದೆ. ಏಸುವಿನ ತಾಯಿಯಾದ ಶ್ರೀಮತಿ ಮೇರಿಗೂ ಜೋಸೆಫ್ ನೊಡನೆ ಸಂಗಮಾಡುವುದಕ್ಕೆ ಮುಂಚೆಯೇ ಗರ್ಭವಾದಂತೆಯೂ ಒಂದು ಅಪೂರ್ವವಾದ ದಿವ್ಯಾನುಭವವಾದಂ ತೆಯೂ ಹೇಳಿದೆ. ಶಂಕರಾಚಾರರ ತಾಯಿಯೂ ಕೂಡ ದೇವಾದಿ ದೇವನಾದ ಮಹಾದೇವನ ದಿವ್ಯ ದರ್ಶನದಿಂದಲೂ ವರಮಹಿಮೆ ಯಿಂದಲೂ ಗರ್ಭೂತೃತಿಯನ್ನು ಅನುಭವಮಾಡಿದಂತೆ ಬರೆ ಯಲ್ಪಟ್ಟಿದೆ. ಚೈತನ್ಯದೇವನ ತಾಯಿಯಾದ ಶಚೀದೇವಿಗೂ ಈ ವಿಧವಾದ ದಿವ್ಯಾನುಭವವಾದ ವಿಷಯವ ಶ್ರೀಚೈತನ್ಯ ಚರಿತಾ ಮೃತ ಮುಂತಾದ ಗ್ರಂಥಗಳಲ್ಲಿ ಹೇಳಿದೆ.

ಹಿಂದೂ, ಬೌದ್ಧ, ಕೈಸ್ತ ಮುಂತಾದ ಎಲ್ಲಾ ಧರ್ಮ ಗ್ರಂಥ