ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಚರಿತ್ರೆ

೩೧

ಒಂದು ವಿಷಯದಲ್ಲಿ ಸಮಾಧಾನ ಹೇಳಿದಂತೆ ಬೈ ಬಿಲಿನಲ್ಲಿ ಹೇಳಿದೆ. ಹೀಗೆಯೇ ಇತರ ಅವತಾರಪುರುಷರ ಜೀವನ ಚರಿತ್ರೆ ಗಳಲ್ಲಿ ಯೂ ಈ ವಿಧವಾದ ಘಟನೆಗಳು ಕಂಡುಬರುತ್ತವೆ. ಹಾಗಾ ದರೆ ಅವತಾರ ಪುರುಷರ ಜೀವನಚರಿತ್ರೆಗಳನ್ನು ಬರೆದ ಮಹ ನೀಯರೆಲ್ಲರೂ ಮಸಲತ್ತು ಮಾಡಿಕೊಂಡು ಒಂದೇವಿಧವಾದ ಸುಳ್ಳನ್ನು ಎಲ್ಲರೂ ಬರೆದಿದ್ದಾರೆಯೇ ?

ಅದೇವರ್ಷ ಶಿವರಾತ್ರಿಯದಿವಸ ಗದಾಧರನ ಜೊತೆಗಾರ

ರಾದ ಕೆಲವು ಹುಡುಗರು ಆ ಗ್ರಾಮದ ಒಬ್ಬ ದೊಡ್ಡ ಮನುಷ್ಯ ನಾದ ಸೀಥಾನಾಥಪಾರ್ಯಿ ಎಂಬಾತನ ಮನೆಯಲ್ಲಿ ಒಂದು ಶಿವ ಕಥೆಯನ್ನು ಆಟವಾಡಬೇಕೆಂದು ನಿಶ್ಚಯಿಸಿ ಶಿವನವೇಷ ಹಾಕುವು ದಕ್ಕೆ ಗದಾಧರನನ್ನು ಕರೆದುಕೊಂಡು ಹೋದರು. ಗದಾಧರನು ಮೊದಲು ತಾನುಮನೆಯಲ್ಲಿ ಮಾಡುತ್ತಿದ್ದ ಪೂಜೆಯನ್ನು ಬಿಟ್ಟು ಬರುವುದಕ್ಕೆ ಒಪ್ಪಲಿಲ್ಲ. ಹುಡುಗರು ಶಿವನವೇಷವನ್ನು ಹಾಕಿ ಕೊಂಡರೆ ಯಾವಾಗಲೂ ಶಿವನ ಧ್ಯಾನದಲ್ಲಿಯೇ ಇರಬೇಕಾ ಗುವುದು, ಅದು ಪೂಜೆಗಿಂತಲೂ ಯಾವವಿವದಲ್ಲಿ ಯೂ ಕಡಮೆ ಯಾದುದಲ್ಲ ಎಂದು ಹೇಳಿ ಒಪ್ಪಿಸಿದರು. ಆದರೆ ಶಿವನ ವೇಷ ವನ್ನು ಹಾಕಿಕೊಂಡ ಕೂಡಲೆ ಗದಾಧರನು ಶಿವನಧ್ಯಾನದಲ್ಲಿ ತನ್ಮಯ ನಾಗಿ ಹೋಗಲು ಬಾಹ್ಯಸಂಜ್ಞೆಯು ಲೋಪವಾಗಿ ಹೋಯಿತ.. ಎಷ್ಟು ಹೊತ್ತಾದರೂ ಪ್ರಜ್ಞೆ ಬರಲೇಯಿಲ್ಲ. ಅಂದಿನ ಆಟ ನಿಂತು ಹೋಯಿತು.

ಇಲ್ಲಿಂದಮುಂದಕ್ಕೆ ಈ ವಿಧವಾದ '* ಭಾವಸಮಾಧಿ” ಯು

ಆಗಾಗ್ಗೆ ಆಗುತ್ತಿತ್ತು. ದೇವರನ್ನು ಧ್ಯಾನ ಅಥವಾ ಭಜನೆ ಮಾಡುತ್ತಿರುವಾಗ ಮನಸ್ಸು ಅದರಲ್ಲೇ ಪೂರ್ಣವಾಗಿ ನಿಂತು ಹೋಗಲು, ಬಾಹ್ಯ ಜಗತ್ತೇ ಮರೆತು ಹೋಗುತ್ತಿತ್ತು. ಒಂದೊಂದುಸಾರಿ ಒಂದೆರಡು ದಿವಸಗಳವರೆಗೂ ಪ್ರಜ್ಞೆ ಬರುತ್ತಲೇ ಇರಲಿಲ್ಲ, ಬಂದಮೇಲೆ ಅವನಿಗೆ ಏನಾಗುತ್ತಿತ್ತೆಂದು ಕೇಳಿದರೆ