ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಶ್ರೀ ರಾಮಕೃಷ್ಣ ಪರಮಹಂಸರ

೩೪

ಬಿದ್ದುವು. ಹಾಲ ಹಸುಳೆಯಾದ ಅಕ್ಷಯನ ಯೋಗಕ್ಷೇಮವೂ ಅವಳ ತಲೆಗೇ ಕಟ್ಟಿತು, ರಾಮೇಶ್ವರನ ಹೆಂಡತಿ ಮನೆಗೆ ಬಂದಿದ್ದರೂ ಅವಳಿನ್ನೂ ಹುಡುಗಿಯಾಗಿದ್ದದ್ದರಿಂದ ಅವಳಿಂದ ಹೆಚ್ಚಿನ ಸಹಾಯ ವಾಗುತ್ತಿರಲಿಲ್ಲ. ಆದರೂ ಆಕೆಯು ಇವೆಲ್ಲವೂ ರಘುವೀರನ ಇಚ್ಛೆ ಯೆಂದು ಅಂದುಕೊಳ್ಳುತ್ತ ಕಾಲವನ್ನು ಕಳೆಯುತ್ತಿದ್ದಳು. ರಾಮೇ ಶ್ವರನು ಅಲ್ಪ ಸ್ವಲ್ಪ ಮಟ್ಟಿಗೆ ವಿದ್ಯೆಯನ್ನು ಕಲಿತಿದ್ದರೂ ಅವನಿಗೆ ಯಾವವಿಧವಾದ ಸಂಪಾದನೆಯೂ ಇರಲಿಲ್ಲ. ಸಾಲದ್ದಕ್ಕೆ ಯಾರಾ ದರೂ ಸಾಧುಸನ್ಯಾಸಿಗಳನ್ನು ಕಂಡರೆ ಅವರೊಡನೆ ಕಾಲಕಳೆದು, ಬಿಡುತ್ತಿದನಲ್ಲದೆ ಅವರಿಗೆ ಏನುಬೇಕಾದರೂ ಅದನ್ನು ಮನೆಯಿಂದ ತೆಗೆದುಕೊಂಡುಹೋಗಿ ಕೊಟ್ಟು ಬಿಡುತ್ತಿದ್ದನು. ಯಾರಾದರೂ ಕೇಳಿದರೆ ರಘುವೀರನು ಹೇಗೋ ನಡೆಸುತ್ತಾನೆ ಎಂದು ಹೇಳಿ ಬಿಡು ತಿದ್ದನು. ಅವನಿಗೆ ಗದಾಧರನನ್ನು ಕಂಡರೆ ಬಹು ಪ್ರೇಮವಾದರೂ ಅವನು ಪಾಠಶಾಲೆಗೆ ಹೋದನೋ, ಬಿಟ್ಟನೋ, ಓದುತ್ತಿದನೋ ಇಲ್ಲವೋ ಎಂಬ ವಿಚಾರಕ್ಕೆ ಗಮನವನ್ನೇ ಕೊಡುತ್ತಿರಲಿಲ್ಲ. ಕೆಲವ್ರ ದಿನಗಳಲ್ಲಿಯೇ ಪಾಠಶಾಲೆಯಲ್ಲಿ ಓದುವುದು ನಿಷ್ಟಲನೆ೦ದು ಗದಾ ಧರನ ಮನಸ್ಸಿಗೆ ನಿರ್ಧರವಾಗಿ ಅವನು ಪಾಠಶಾಲೆಗೆ ಹೋಗುವು ದನ್ನೇ ಬಿಟ್ಟು ಬಿಟ್ಟನು. ಈ ವಿಷಯದಲ್ಲಿಯೂ ರಾಮೇಶ್ವರನು ಆಕ್ಷೇಪಣೆಯನ್ನು ಮಾಡಲಿಲ್ಲ.

ಈಗ ರಾಮಕುಮಾರನು ಕಲ್ಕತ್ತೆಯಲ್ಲಿ ಪಾಠಶಾಲೆಯನ್ನು

ಹೂಡಿ ಮೂರು ವರ್ಷಗಳಾಗಿದ್ದುವು, ಹುಡುಗರ ಸಂಖ್ಯೆಯು ಹೆಚ್ಚಿದ ರಿಂದ ಸಹಾಯಕ್ಕೆ ಮತ್ತಾರಾದರೂ ಒಬ್ಬರು ಬೇಕಾಗಿ ಬಂತು. ಅಲ್ಲದೆ ಗದಾಧರನಿಗೆ ಹದಿನಾರು ವರ್ಷತುಂಬಿದ್ದರೂ ಅವನಿಗೆ ಸಾಕಾದಷ್ಟು ವಿದ್ಯೆ ಬಾರದಿರುವುದನ್ನೂ ಅವನು ಪಾಠಶಾಲೆಯನ್ನು ಬಿಟ್ಟು ಪುರಾಣ ಪುಣ್ಯ ಕಥೆಗಳನ್ನು ಓದುವುದರಲ್ಲಿಯೂ ಕೀರ್ಥನೆ ಭಜನೆಗಳಲ್ಲಿಯೂ ಕಾಲ ಕಳೆಯುತ್ತಿದ್ದದ್ದನ್ನೂ ನೋಡಿ ಅವನು ತನ್ನ ಜೊತೆಯಲ್ಲಿದ್ದರೆ ಸ್ವಲ್ಪ ಬುದ್ಧಿವಂತನಾಗಬಹುದೆಂದೂ ತನಗೂ