ದಕ್ಷಿಣಕೇಶ್ವರದ ಕಾಳಿದೇವಸ್ಥಾನ.
ಕಲ್ಕತ್ತೆಯ ದಕ್ಷಿಣದಿಕ್ಕಿನಲ್ಲಿರುವ ಜಾನ್‌ಬಜಾರ್ ಎಂಬ
ಗ್ರಾಮದಲ್ಲಿ ರಾಣಿರಾಸಮಣಿ ಎಂಬ ಒಬ್ಬ ಪ್ರಸಿದ್ಧಳಾದ ಶ್ರೀಮಂ ತಳು ವಾಸಮಾಡುತ್ತಿದ್ದಳು. ಆಕೆಯು ವಿಧವೆ. ಆದರೂ ಕಾರ ದಕ್ಷಳು ; ಸಾಹಸಿ ; ಆದ್ದರಿಂದ ತನ್ನ ಗಂಡನು ಸ್ವರ್ಗಸ್ಥನಾದಂದಿ ನಿಂದ ಜರ್ಮೀದಾರಿಯ ಕಾರ್ಯಭಾಗಗಳನ್ನೆಲ್ಲ ತಾನೇ ಸ್ವಂತವಾಗಿ ನಡೆಸುತ್ತ ಬೇಕಾದಷ್ಟು ಐಶ್ವರ್ಯವನ್ನು ಗಳಿಸಿದ್ದಳು. ಸಂಪಾದನೆ ಮಾಡುವುದರಲ್ಲಿ ಹೇಗೆ ಶಕ್ತಿಯಿತ್ತೋ ಹಾಗೆಯೇ ಆಕೆಯಲ್ಲಿ ಕೈ ಬಿಟ್ಟು ಖರ್ಚುಮಾಡುವ ಔದಾಗ್ಯವೂ ಇತ್ತು. ಬೆಸ್ತರ ಜಾತಿಯಲ್ಲಿ ಹುಟ್ಟಿದವಳಾದರೂ ಆಕೆಯು ತನ್ನ ಗುಣಕರ್ಮಗಳಿಂದ 'ರಾಣಿ' ಎಂಬ ಹೆಸರನ್ನು ಸಾರ್ಥಕಮಾಡಿಕೊಂಡಿದ್ದಳು. ಆಕೆಗೆ ಕಾಳಿಕಾ ದೇವಿಯಲ್ಲಿ ಬಹು ಭಕ್ತಿಯಿತ್ತು. ಕಾಶೀಕ್ಷೇತ್ರಕ್ಕೆ ಹೋಗಿ ವಿಶ್ವೇಶ್ವ ರನ ಮತ್ತು ಅನ್ನಪೂರ್ಣಾದೇವಿಯ ದರ್ಶನಸೇವೆಗಳನ್ನು ಮಾಡ ಬೇಕೆಂಬ ಆಶೆ ಬಹಳದಿನಗಳಿಂದ ಇತ್ತುಅದಕ್ಕಾಗಿ ಬಹಳ ಹಣ ವನ್ನು ಕೂಡಿಹಾಕಿದ್ದಳು. ಆದರೆ ಜರ್ಮೀಾದಾರಿಯ ಕೆಲಸವು ತನ್ನ ಕೊರಳಿಗೆ ಬಿದ್ದದ್ದರಿಂದ ಬಹುದಿನಗಳು ಕಾಶಿಗೆ ಹೋಗಲು ಸಮಯ ಸಿಕ್ಕಲಿಲ್ಲ. ಈ ಕಾಲದಲ್ಲಿ ಆಕೆಯ ಅಳಿಯನಾದ ಮಧುರಾನಾಥ ವಿಶ್ವಾಸನು ಜರ್ಮೀಾದಾರಿಯ ಆಡಳಿತಮಾಡುವುದರಲ್ಲಿ ಸಹಾಯಕ ನಾದ್ದರಿಂದ ಕಾಶೀಯಾತ್ರೆಗೆ ಹೊರಡಲು ಬೇಕಾದ ಸನ್ನಾ ಹಗಳನ್ನು ಮಾಡಿಕೊಂಡಳು. ಯಾತ್ರೆಗೆ ಹೊರಡಬೇಕೆಂದಿದ್ದದಿನದ ಹಿಂದಿನ ರಾತ್ರಿ ಸ್ವಪ್ನದಲ್ಲಿ ದೇವಿಯು ಆಕೆಗೆ ಪ್ರತ್ಯಕ್ಷಳಾಗಿ “ನೀನು ಕಾಶಿಗೆ ಹೋಗಬೇಕಾದ ಆವಶ್ಯಕವಿಲ್ಲ. ಬಾಗೀರಥಿಯ ತೀರದಲ್ಲಿ ಒಂದು