ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಚರಿತ್ರೆ

೪೯

ನೊಡನೆ ಬಹುಕಾಲ ಘೋರಯುದ್ದ ಮಾಡಬೇಕಾಗುತ್ತದೆ. ಅನ ತಾರ ಪುರುಷರ ಮಾತೇ ಬೇರೆ. ಸ್ವಸುಖನಿರಭಿಲಾಷೆಯೂ, ಪರ ಹಿತಾಕಾಂಕ್ಷೆಯೂ, ವೈರಾಗ್ಯವೂ ಅವರ ಹುಟ್ಟು ಗುಣಗಳಾಗಿರು ತವೆ. ಆದ್ದರಿಂದ ಸಾಮಾನ್ಯರು ನೂರುಜನ್ಮಗಳಲ್ಲಿ ಮಾಡಿದರೂ ತೀರದಷ್ಟು ಸಾಧನೆಯನ್ನು ಒಂದೇಜನ್ಮದ ಅತ್ಯಲ್ಪ ಕಾಲದಲ್ಲಿ ಅವತಾರ ಪುರುಷರು ಮಾಡಿ ಮುಗಿಸಿ ಬಿಡುತ್ತಾರೆ. ಅವರು ಮಾಡುವ ನಾಧನೆಯಲ್ಲಿ ಒಂದಂಶವನ್ನು ಮಾಡಿದರೂ ಸಾಮಾನ್ಯರು ಧನ್ಯ ರಾಗುತ್ತಾರೆ.

ಸಾಧನಪಥದಲ್ಲಿ ಒಂದು ಹೆಜ್ಜೆಯನ್ನಾದರೂ ಇಟ್ಟಿರತಕ್ಕೆ

ವಾಚಕರಿಗೆ ಶ್ರೀ ಶ್ರೀರಾಮಕೃಷ್ಣ ಪರಮಹಂಸರ ಸಾಧನಚರಿತೆ ಯನ್ನು ಓದಿದಮೇಲೆ ಅವರು ಮಹಾ ಪುರುಷರೆಂಬುದು ಗೊತ್ತಾಗದೆ ಇರದು.