ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಶ್ರೀ ರಾಮಕೃಷ್ಣ ಪರಮಹಂಸರ

೫೮

ಅದಕ್ಕೋಸ್ಕರ ಇದನ್ನೆಲ್ಲಾ ಮಾಡಬೇಡಿ, ಅದೂ ಅಲ್ಲದೆ, ಮನೋ ನಿರೋಧಕೊಸ್ಕರ ತಾನೇ ಪ್ರಾಣಾಯಾಮ, ಕುಂಭಕ ಇವುಗಳನ್ನೆಲ್ಲ ಮಾಡಿ ವಾಯುವನ್ನು ತಡೆದುಕೊಳ್ಳು ವದು ? ದೇವರಲ್ಲಿ ಭಕ್ತಿ ಯಿಂದ ಧ್ಯಾನಮಾಡುತ್ತ ಹೋದರೆ ಮನಸ್ಸು, ನಾಯು ಎರಡೂ ತಮ್ಮಷ್ಟಕ್ಕೆ ತಾವೇ ನಿರುದ್ದವಾಗುತ್ತವೆ; ನೋಡಿ ಬೇಕಾದರೆ ! ಕಲಿಗಾಲದಲ್ಲಿ ಜೀವಿಗಳು ಅಲ್ಪಾಯು ಅಲ್ಪ ಶಕ್ತಿಗಳೆಂದು ಅಂದು ಕೊಂಡೇ ಭಗವಂತನು ಅವರಮೇಲೆ ಕೃಪೆಮಾಡಿ ಈಶ್ವರಲಾಭದ ಮಾರ್ಗವನ್ನು ಇಷ್ಟು ಸುಲಭವಾಗಿ ಮಾಡಿಕೊಟ್ಟಿದ್ದಾನೆ. ಹೆಂಡತಿ ಮಕ್ಕಳು ಹೋದರೆ ಹೊಟ್ಟೆಯಲ್ಲಿ ಯಾವ ವಿಧವಾದ ವ್ಯಾಕುಲತೆ ಇರುತ್ತದೆಯೊ ದೇವರಿಗೋಸ್ಕರವಾಗಿ ಅದೇ ವಿಧವಾದ ವ್ಯಾಕು ಲತೆ-ಇಪ್ಪತ್ತು ನಾಲ್ವೇ ಗಂಟೆಯ ಹೊತ್ತು ಸಾಕು- ಯಾರಲ್ಲಿ ಯಾದರೂ ಸ್ಥಾಯಿಯಾಗಿ ಇದ್ದುಬಿಟ್ಟರೆ ಅಂಥವರಿಗೆ ಅವನು ದರ್ಶನ ಕೊಟ್ಟೆಕೊಡುವನು ". ?

ಪರಮಹಂಸರು ಮೇಲೆ ಹೇಳಿದ ಕಠೋರವಾದ ಸಾಧನಗಳಿಂ

ದಲೂ ವ್ಯಾಕುಲತೆಯಿಂದಲೂ ಅನ್ನ ತಿನ್ನದೆ, ನಿದ್ರೆ ಮಾಡದೆ, ಮೈ ಯಲ್ಲಿ ಉರಿ ಎಂದು ಸಂಕಟಪಡುತ್ತಿರುತ್ಯ, ಆಗಾಗ್ಗೆ ಮೂರ್ಛಿತ ನಂತೆ ಪ್ರಜ್ಞೆ ತಪ್ಪಿ ಬೀಳುತ್ತ, ಬಡವಾಗಿ ಹೋದದ್ದನ್ನು ನೋಡಿ ಹೃದಯನೂ ಮಧುರಾನಾಥನೂ ಇವೆಲ್ಲಾ ಏನೋರೋಗದ ಲಕ್ಷಣ ಗಳಿರಬಹುದೆಂದು ಯೋಚಿಸಿ ಪ್ರಸಿದ್ಧರಾದ ವೈದ್ಯರನ್ನು ಕರೆತಂದು ಔಷಧಿಯನ್ನು ಕೊಡಿಸಿದರು. ರೋಗವು ಔಷಧಿಯಿಂದ ಹೆಚ್ಚಾ « ಯಿತೇ ಹೊರತು ಕಡಿಮೆಯಾಗಲಿಲ್ಲ. ಈ ವರ್ತಮಾನವು ಕಾವಾರ ಪುಕುರಕ್ಕೆ ತಲಪಿ ಶ್ರೀಮತಿ ಚಂದ್ರಾದೇವಿಯ ಕಿವಿಗೆ ಬಿತ್ತು. ಆಕೆ ಯು ಕೂಡಲೆ ಮಗನನ್ನು ತನ್ನ ಹತ್ತಿರಕ್ಕೆ ಕರೆಸಿಕೊಂಡು ಕಂಡು ಕೇಳಿದ ಔಷಧಿಗಳನ್ನೆಲ್ಲಾ ಮಾಡಿದಳು ; ಜಪತಪ ಶಾಂತಿಗಳನ್ನೂ ಮಾಡಿಸಿದ್ದಾಯಿತು; ಯಾವುದರಿಂದಲೂ ಏನೂ ಆಗಲಿಲ್ಲ. ಆದರೂ ಪರಮಹಂಸರಲ್ಲಿ ಒಂದೊಂದು ಸಮಯ ಹಿಂದಿನಂತೆ ಎಲ್ಲ