ವಿಷಯಕ್ಕೆ ಹೋಗು

ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



೬೮
ಶ್ರೀ ರಾಮಕೃಷ್ಣ ಪರಮಹ೦ಸರ

ಇದಾದ ಮೇಲೆ ಪರಮಹಂಸರು ಮಧುರಭಾವ ಸಾಧನೆಯಲ್ಲಿ

ಪ್ರವೃತ್ತರಾಗಿ ಹೆಂಗಸರಿಗೆ ತಕ್ಕ ವೇಷಭೂಷಣಗಳನ್ನು ಹಾಕಿಕೊಳ್ಳ ಬೇಕೆಂದು ಅಪೇಕ್ಷಿಸಿ ದರು. ಪರಮಭಕ್ತ ಮಧುರಾ ಮೋಹನನು ನಾನಾವಿಧವಾದ ಬಹಳ ಬೆಲೆಯುಳ್ಳ ವಸ್ತ್ರಾಭರಣಗಳನ್ನು ತಂದು ಕೊಟ್ಟನು. ಇವೆಲ್ಲವನ್ನೂ ಧರಿಸಿಕೊಂಡು ಪರಮಹಂಸರು ರಾಧೆಯ ಭಾವದಲ್ಲಿ ಎಷ್ಟರಮಟ್ಟಿಗೆ ಮಗ್ನರಾದರೆಂದರೆ, ಅವರಿಗೆ ತಾವು ಗಂಡ ಸರೆಂಬ ಜ್ಞಾನವೇ ಸಂಪೂರ್ಣವಾಗಿ ಹೋಗಿ ಪ್ರತಿ ಚಿಂತೆ, ನಡವಳಿಕೆ, ಮಾತು, ಕಥೆ ಎಲ್ಲ ಹೆಂಗಸರ ಹಾಗಾಯಿತು. ಹೃದಯನು ಆ ವಿಚಾರವಾಗಿ, “ ಒ೦ದು ದಿನ ಮಧುರಾನಾಥನು ನನ್ನನ್ನು ೮೦ರ್ತ ಪುರಕ್ಕೆ ಕರೆದುಕೊಂಡುಹೋಗಿ ಹೇಳು ನೋಡೋಣ, ಇವರಲ್ಲಿ ನಿಮ್ಮಮಾವಯಾರು ? ಎ೦ದು ಕೇಳಿದನು. ನಾನು ಎಷ್ಟೋ ದಿನ ಗಳಿಂದ ಆತನ ಜೊತೆಯಲ್ಲಿಯೇ ಇದರೂ ಆಗ ಗುರುತು ಹಿಡಿಯು ವುದಕ್ಕಾಗಲಿಲ್ಲ.” ಎಂದು ಹೇಳಿದನಂತೆ, ಹೀಗೆ ರಾಧೆಯ ಭಾವದಲ್ಲಿ ಯೇ ತನ್ಮಯರಾಗಿ ಸಾಧನೆಮಾಡುತ್ತಿರಲು ಶ್ರೀ ಕೃಷ್ಣನ ದರ್ಶನ ವಾಯಿತು. ಹಿಂದೆ ಪ್ರತ್ಯಕ್ಷವಾದ ಇತರ ದೇವಮೂರ್ತಿಗಳ೦ತೆ ಶ್ರೀ ಕೃಷ್ಣನ ಮೂರ್ತಿಯೂ ಅವರ ದೇಹದೊಳಗೇ ಐಕ್ಯವಾಯಿತು.

ಮಧುರಭಾವ ಸಾಧನೆಯು ಮುಗಿದ ಕೆಲವು ದಿನಗಳಲ್ಲಿಯೇ

ಪರಮಹಂಸರು ತೋತಾಪುರಿಗೋಸ್ವಾಮಿ ಎಂಬೊಬ್ಬ ಸನ್ಯಾಸಿ ಯಿಂದ ಉಪದೇಶವನ್ನು ಪಡೆದು ವೇದಾಂತಮತಸಾಧನೆಗೆ ಆರಂಭಮಾಡಿದರು. ' ತೊತಾಪುರಿ ' ಎಂಬಾತನು, ನರ್ಮದಾ ತೀರದಲ್ಲಿ ಒಹುಕಾಲ ತಪಸ್ಸು ಮಾಡಿ ನಿರ್ವಿಕಲ್ಪ ಸಮಾಧಿಯನ್ನು ಹೊಂದಿ ಬ್ರಹ್ಮಸಾಕ್ಷಾತ್ಕಾರವನ್ನು ಪಡೆದಿದ್ದನು. ಬ್ರಹ್ಮಜ್ಞಾನವಾದ ಮೇಲೆ ಆತನ ಮನಸ್ಸಿನಲ್ಲಿ ತೀರ್ಥಾಟನೆ ಮಾಡಬೇಕೆಂಬ ಸಂಕಲ್ಪ ಹುಟ್ಟಿತು. ಈ ಸಂಕಲ್ಪದ ಪ್ರೇರಣೆಯಿಂದ ಆತನು ಪುಣ್ಯಕ್ಷೇತ್ರ ದಿಂದ ಪುಣ್ಯ ಕ್ಷೇತ್ರಕ್ಕೆ ಹೋಗುತ್ತ ದಕ್ಷಿಣೇಶ್ವರಕ್ಕೆ ಬಂದು ಕಾಳಿ ದೇವಸ್ಥಾನದ ಒಂದು ಮಂಟಪದಲ್ಲಿ ಇಳಿದುಕೊಂಡನು. ಆಗ