ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಚರಿತ್ರೆ

೭೧

ವಿಕಲ್ಪವೂ ಉಳಿಯಲಿಲ್ಲ. ಇದ ಕ್ಕಿದ್ದಹಾಗೆ ಸಮಾಧಿಯಲ್ಲಿ ಮಗ್ನ ನಾದೆನು.”

ಹೀಗೆ ಶಿಷ್ಯನು ಸಮಾಧಿಸ್ಸನಾಗಲು ತೋತಾಪುರಿಯು ಸ್ವಲ

ಹೊತ್ತು ಅಲ್ಲಿಯೇ ಇದ್ದು ಅನಂತರ ಯಾರಾದರೂ ಬಂದು ತೊಂದರೆ ಮಾಡಿಯಾರೆಂಬ ಯೋಚನೆಯಿಂದ ಕುಟೀರದ ಬಾಗಿಲನ್ನು ಹಾಕಿ ಬೀಗಹಾಕಿಕೊಂಡು ಪಂಚವಟಿಗೆ ಹೋಗಿ ಅಲ್ಲಿ ಶಿಷ್ಯನು ಎಚ್ಚೆತ್ತು ಕೂಗುವುದನ್ನೇ ನಿರೀಕ್ಷಿಸಿಕೊಂಡು ಕುಳಿತಿದ್ದನು. ಹಗಲೆಲ್ಲ ಕಳೆ ಯಿತು ; ರಾತ್ರಿಯಾಯಿತು ; ರಾತ್ರಿಯೂ ಕಳೆಯಿತು: ಒಂದುದಿನ ವಾಯಿತು, ಎರಡುದಿನವಾಯಿತು, ಮೂರುದಿನವಾಯಿತು ; ಆದರೂ ಪರಮಹಂಸರು ಕೂಗಲೇ ಇಲ್ಲ. ಆಶ್ಚರ್ಯದಿಂದ ತೋತಾ ಪುರಿಯು ಎದ್ದು ಬಂದು ನೋಡಲು ಶಿಷ್ಯನು ಇನ್ನೂ ಸಮಾಧಿಸ್ಸ ನಾಗಿಯೇ ಇದ್ದಾನೆ! ದೇಹದಲ್ಲಿ ಪ್ರಾಣ ದಚಿಹ್ನೆಯೇ ಇಲ್ಲ! ಆದರೆ ಮುಖವು ಮಾತ್ರ ಪ್ರಶಾಂತವಾಗಿಯೂ, ಗಂಭೀರವಾಗಿಯ. ಜ್ಯೋರ್ತಿಪೂರ್ಣವಾಗಿಯೂ ಇತ್ತು. ಸಮಾಧಿರಹಸ್ಯವನ್ನು ತಿಳಿದ ತೋತಾಪುರಿಯು ಆ ಸ್ಥಿತಿಯನ್ನು ನೋಡಿ “ ಇದೇನು ಆಶ್ಚರ್ಯ ! ನಾನು ನಲವತ್ತು ವರ್ಷಗಳಕಾಲ ಕಠೋರಸಾಧನೆಮಾಡಿ ಯಾವು ದನ್ನು ಪಡೆದೆನೋ ಅದನ್ನು ಈ ಮಹಾಪುರುಷನು ನಿಜವಾಗಿಯೂ ಒಂದೇ ದಿನದಲ್ಲಿ ಹೊಂದಿದನೇ ! " ಎಂದು ಪುನಃ ಶಿಷ್ಯನದೇಹದಲ್ಲಿ ಕಾಣುತ್ತಿದ್ದ ಲಕ್ಷಣಗಳನ್ನು ಪರೀಕ್ಷಿಸಿ ನೋಡಿದನು. ಸತ್ಯ ವಾಗಿಯೂ ನಿರ್ವಿಕಲ್ಪ ಸಮಾಧಿ! ಆಗ ಆತನು ಅತ್ಯಾಶ್ಚರ್ಯದಿಂದ “ ಇದೇನು ದೇವರ ಅದ್ಭುತಮಾಯೆ !” ಎಂದಂದುಕೊಂಡು ತಾನೇ ಶಿಷ್ಯನನ್ನು ಎಬ್ಬಿಸಿದನು.

ಮೂರುದಿನಕ್ಕೆ ಹೆಚ್ಚಾಗಿ ಎಲ್ಲಿಯೂ ನಿಲ್ಲದೆ ತಿರುಗುತ್ತಿದ್ದ

ತೋತಾಪುರಿಯು ದಕ್ಷಿಣೇಶ್ವರದಲ್ಲಿ ಹನ್ನೊಂದು ತಿಂಗಳಿದ್ದನು. ಈ ಕಾಲದಲ್ಲಿ ಪರಮಹಂಸರು ನಿರ್ವಿಕಲ್ಪ ಸಮಾಧಿಯಲ್ಲಿ ದೃಢ ಪ್ರತಿಷ್ಟಿತರಾಗಿ, ಸಮಾಧಿಯಲ್ಲಿಯೇ ಇದ್ದು ಬಿಡಬೇಕೆಂದು ಕುಳಿತರು.