ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪ ಶ್ರೀ ರಾಮಕೃಷ್ಣ ಪರಮಹಂಸರ ಬಹುಕಾಲದ ಮೇಲೆ ಪುನಃ ಅಲ್ಲಿಗೆ ಬಂದದ್ದನ್ನು ನೋಡಿ ಎಲ್ಲರಿಗೂ ಬಹು ಸಂತೋಷವಾಯಿತು. ಜಯರಾಮವಾಡಿಯಿಂದ ಶ್ರೀ ಶಾರದಾದೇವಿಯನ್ನು ಕರೆಸಬೇಕೆಂದು ಮನೆಯಲ್ಲಿ ಹೆಂಗಸರು ಮಾತನಾಡಿಕೊಂಡರು. ಇದು ಪರಮಹಂಸರ ಕಿವಿಗೆ ಬಿತ್ತು. ಆದರೂ ಅವರು ಮಾತ್ರ ಉದಾಸೀನಭಾವದಿಂದಿದ್ದರು. ಬೇಡವೆನ್ನ ಒದರೆ ಸಮ್ಮತಿಸಿದ ಹಾಗೆಯೇ ಎಂದುಕೊಂಡು ಆಕೆಯನ್ನು ಕಾಮಾರಪುಕುರಕ್ಕೆ ಬರಮಾಡಿಕೊಂಡರು. ಆಗ ಶಾರದಾದೇವಿಗೆ ಹದಿನಾಲ್ಕು ವರ್ಷ ತುಂಬ ಹದಿನೈದ ಸಿಯ ವರ್ಷ ನಡೆಯುತ್ತಿತ್ತು. ಆಕೆಯು ಕಾಮಾರಪುಕುರಕ್ಕೆ ೦ದ ಕೂಡಲೆ ಪರಮಹಂಸರು ಆಕೆಗೆ ಮನೆಗೆಲಸಮಾಡುವುದು ಮೊದಲುಗೊಂಡು ಜನಗಳ ಸ್ವಭಾವವನ್ನು ಹೇಗೆ ತಿ ದುಕೊಳ್ಳಿ ಬೇಕು, ದುಡ್ಡನ್ನು ಹೇಗೆ ಸದ್ಯವಹಾರ ಮಾಡಬೇಕು, ಈಶ್ವರಸಿಗೆ ಸರ್ವಸ್ವವನ್ನೂ ಸಮರ್ಪಣೆ ಮಾಡಿ ಹೇಗೆ ಸಾಧನೆ ಭಜನೆಗಳನ್ನು ಮಾಡಬೇಕು ಎಂಬ ಸತ್ಯಂತ ಸಮಸ್ತ ವಿಷಯಗಳನ್ನೂ ತಿಳಿಸಿದರು. ಆಕೆಯ ಪತಿಯು ಈಶ್ವರನಿಗಾಗಿ ತನುಮನಧನಗಳನ್ನು ಧಾರೆ ಯೆರೆದು ಕೊಟ್ಟ ದಕ್ಕೆ ಪೂರ್ಣ ಸಮ್ಮತಿಯನ್ನು ಕೊಟ್ಟು, ಅಲೌಕಿಕ ವಾದ ಸ್ವಾರ್ಥ ತ್ಯಾಗಮಾಡಿ, ಕಾಮಗಂಧರಹಿತವಾದ ಶುದ್ಧ ನಾದ ಡಿವ- ಪ್ರೇಮದಿಂದ ತೃಪ್ತಳಾಗಿ ಆತನನ್ನು ಸಾಕ್ಷಾತ್‌ ಇಷ್ಟ ದೇವತೆ ಯಂತೆ ಸೇವಿಸುತ್ತ ಒ೦ದಳು ಆಕೆಯ ಮಹತ್ವವನ್ನೂ ಪುಣವನ್ನೂ ವರ್ಣಿಸಬಲ್ಲವರಾರು? ದೊಷವೆ೦ದು ಕೆಲವು ದಿನದ ಮೇಲೆ ಬ್ರಾಹ್ಮಣಿ ಯ ಮನಸ್ಸಿಗೆ ಬಂದು ಅವರ ಕ್ಷಮಾಪಣೆ ಯನ್ನು ಕೇಳಿಕೊಂಡಳು. ಮತ್ತು ಪರಮಹಂಸರ ಅನುಗ್ರಹದಿಂದ ವೇದಾ೦ತ ಮಾರ್ಗದ ಮೇಲಿದ್ದ ದುರಭಿಪ್ರಾಯವನ್ನು ಬಿಟ್ಟು ಎಲ್ಲಾ ಮಾರ್ಗಗಳ ಲಕ್ಷವೂ ಒ೦ದೇ ಎ೦ಬ ಅನುಭವವನ್ನು ತ೦ದುಕೊಳ್ಳಲು ತಪಸ್ಸು ಮಾಡುವುದಕ್ಕಾಗಿ ಕಾಶಿಗೆ ಹೊರಟುಹೋ ದಳು. ಅ೦ತು ಆಕೆಯು ದಕ್ಷಿಣೇಶ್ವರದಲ್ಲಿ ಸುಮಾರು ಆರು ವರ್ಷ ವಿದ್ದಳು.