ವಿಷಯಕ್ಕೆ ಹೋಗು

ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚರಿತ್ರೆ ೮೧ (1) ಎಷ್ಟು ಕ್ಷೇಶ ಕರಗಳಾಗಲಿ ಅಸಹಕರಗಳಾಗಲಿ ಲಾ ಸ್ಕೂಕ್ತವಾದ ಸಾಧನಗಳೆಲ್ಲವೂ ಸತ್ಯ. (2) ಎಲ್ಲಾ ಮತಗಳೂ ಸತ್ಯ. (3) ಈಶ್ವರನಾಕ್ಷಾತ್ಕಾರವೇ ಅವೆಲ್ಲವುಗಳ ಉದ್ದೇಶ ವೊ ಆಗಿದೆ : ಸಿದಿ ಗಳನ್ನು ಪಡೆಯುವುದಲ್ಲ. (4) ವಿಷಯಸುಖದಲ್ಲಿ ವೈರಾಗ್ಯ: ಹುಟ್ಟಿ ದಹೊರತು ಸಿಜ ಯಾಗುವುದಿಲ್ಲ. * (5) ನಿಜವಾದ ವ್ಯಾಕುಲತೆಯಿದ್ದರೆ ಯಾವ ಸಾಧನೆಯ ನಾಯವೂ ಇಲ್ಲದೆ ಈಶ್ವರಸಾ ಕ್ಲಾತ್ಕಾರವಾಗುವುದು. ಬೇಕಾದ ಅನುಕೂಲಗಳೆಲ್ಲವೂ ತಾವಾಗಿಯೆ ಒದಗಿಬರುವುವು. (6) ವ್ಯಾಕುಲತೆಯೂ, ವೈರಾಗ್ಯವೂ ಎಷ್ಟು ಪ್ರಬಲವಾಗಿ ಧ್ವರೆ ಅಷ್ಟು ಬೇಗ ಸಿದ್ದಿಯಾಗುವುದು (ಎಷ್ಟೋ ಸಾಧನೆಗಳಲ್ಲಿ ವರಮಹಂಸರು ಮೂರುದಿನಗಳೊಳಗಾಗಿ ಸಿದ್ದರಾದರೆಂಬುದನ್ನು ಇಲ್ಲಿ ಪಾಠಕರು ಜ್ಞಾಪಿಸಿಕೊಳ್ಳ ಬೇಕು.) (7) ಎಂಥ ಉತ್ತಮನಾದ ಸಾಧಕನಿಗೂ ಗುರುಸಹಾಯ ಬೇಕು, ಇತ್ಯಾದಿ.- - ವೇದಕಾಲದಿಂದ ಇಂದಿನವರೆಗೆ ಪ್ರಚಾರದಲ್ಲಿದ್ದ ಮುಖ್ಯ ಮುಖವಾದ ಸಕಲ ಸಾಧನಗಳನ್ನೂ, ಮಾರ್ಗಗಳನ್ನೂ, ಮತ ಗಳನ್ನೂ ಅನುಷ್ಠಾನ ಮಾಡಿ ಅವುಗಳೆಲ್ಲ ವೂ ಸತ್ಯವೆಂದೂ ಅವುಗಳ ಉದ್ದೇಶವೆಲ್ಲವೂ ಒ೦ದೇಯೆಂದೂ ತೋರಿಸಿಕೊಟ್ಟ ಪರಮಹಂಸರ ಮಹಿಮೆಯನ್ನು ಎಷ್ಟೆಂದು ಹೇಳೋಣ ! ಇಂಥವರನ್ನು ಅವತಾರ ಪುರುಷರೆಂದೆನ್ನದೆ ಮತ್ತೇನೆನ್ನಬೇಕು? ಸಂಸಾರವನ್ನು ತ್ಯಾಗಮಾಡಿ ಆಜೀವನವೂ ಶ್ರಮಪಟ್ಟರೂ ಒಂದೊಂದು ಮಾರ್ಗದಲ್ಲಿಯಾದರೂ ಸಿದ್ಧರಾಗುವುದು ಕಷ್ಟ, ಅ೦ಥದರಲ್ಲಿ ಒಂದಾದ ಮೇಲೆ ಒಂದರಂತೆ ಅವರು ಎಷ್ಟು ಸಾಧನೆಗಳನ್ನು ಮಾಡಿ ಮುಗಿಸಿ ಸಿದ್ಧರಾದರು ! (Cf. You cannot serve both God and Maimon.