ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮ ೨ ಶ್ರೀ ರಾಮಕೃಷ್ಣ ಪರಮಹಂಸರ ಎಷ್ಟು ಮತಗಳನ್ನು ಅಭ್ಯಾಸಮಾಡಿದರು! ಅವುಗಳಿಗೆ ತಕ್ಕಂತೆ ಅನುಕೂಲಗಳು ಸರಿಯಾಗಿ ಹೇಗೆ ಒದಗಿ ಬಂದುವು! ಇದಕ್ಕೆ ಅವರು ಎಂಥ ಉತ್ತಮವಾದ ಅಧಿಕಾರಿಗಳಾಗಿದ ಕೆ೦ಬುದನ್ನು ಜ್ಞಾಪಕದಲ್ಲಿಟ್ಟು ಕೊಂಡಿರಬೇಕು. ಮೊದಲಿನಿಂದಲೂ “ ಅಕ್ಕಿ ಬೇಳೆ ಸಂಪಾದನೆಮಾಡುವ ವಿದ್ಯೆ” ಯ ಮೇಲೆ ಅಭಿಲಾಷೆ ಯಿರದೆ, ಪುರಾಣ ಪುಣ್ಯ ಕಥೆಗಳನ್ನು ಹೇಳುವುದು ಕೇಳುವುದು, ದೇವಮೂರ್ತಿಗಳನ್ನು ಮಾಡುವುದು, ಕೀರ್ತನೆಗಳನ್ನು ಹೇಳುವುದು, ದೇವತೆಗಳ ವೇಷವನ್ನು ಹಾಕಿಕೊಳ್ಳುವುದು ಇವುಗಳಲ್ಲಿ ಅಪಾರ ವಾದ ಆಸಕ್ತಿಯೂ, ಸೃಷ್ಟಿ, ಸೌ೦ದರ್ಯ ದೇವತಾ ಮಹಿಮೆ ಮುಂ ತಾದರಲ್ಲಿ ತನ್ಮಯರಾಗಿ ಹೋಗುವಿಕೆಯೂ, : ಬುದ್ಧಿಶಕ್ತಿ, ನಿದೆ , ವಿಚಾರ ಬುದ್ರಿ, ಹಿಡಿದದ್ದನ್ನು ನಾಧಿಸತಕ್ಕ ಕೆಚ್ಚು, ಪವಿತ್ರತೆ, ಸ್ವಾರ್ಥಹೀನತೆ, ಇವೇ ಮುಂತಾದ ಅಲಾಕಿಕ ಗುಣಗಳೂ ಅವರಲ್ಲಿ ಸ್ವಭಾವ ಸಿದ್ಧವಾಗಿದ್ದುವು. ) ಇನ್ನು ಈ ವಿಚಾರವಾಗಿ ಬರೆಯುತ್ತ ಹೋದರೂ ಪಾಠ ಕರಿಗೆ ಇವೆಲ್ಲವೂ ನಿಜವೆಂದು ನಂಬುಗೆ ಹುಟ್ಟುವುದೇ ಕಷ್ಟ. ಆದರೂ ಈ ಭಾಗವೆಲ್ಲ ಪರಮಹಂಸರ ಮಾತುಗಳನ್ನೇ ಅನುಸರಿಸಿ ಬರೆದಿರುವುದರಿಂದ ವಿಚಾರಾರ್ಹವಾಗಿದೆಯೆಂದು ಹೇಳುವೆವು. ವಿಚಾರಮಾಡಿದ ಹೊರತು ಸತ್ಯವು ಹೊರಸಡದು.