ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೧೦೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಶ್ರೀ ರಾಮಕೃಷ್ಣ ಪರಮಹಂಸರ ಪರಮಹಂಸರೇ ಆಗಬೇಕು. ಇದರ ಮೇಲೆ ವಿವಾಹದ ಉದಾರ ವಾದ ಉದ್ದೇಶವನ್ನು ಮರೆತು, ಇಂದ್ರಿಯ ಸುಖವೊ೦ದೇ ಅದರ ಉಪಯೋಗವೆಂದು ತಿಳಿದುಕೊಂಡು “ ಋಣಂಕೃತ್ಯಾತ್ಮ ತಂತಿ ಬೇತೆ ” ಎಂದು ಹೇಳುತ್ತ ಸರ್ವ ಪ್ರಯತ್ನದಿಂದಲೂ ಧನಸಂಪಾದನೆ ಮಾಡಿ ಅದರಿಂದ ಐಹಿಕ ಭೋಗವನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಎಂದೇ' ಸದಾ ಧ್ಯಾನಮಾಡುತ್ತ, ಅದನ್ನು ಬಿಟ್ಟು ಮತ್ತೆ ಯಾವುದನ್ನೂ ಯೋಚಿಸಲೇ ಆರದ ನಮ್ಮಗಳಿಗೆ ಕಾಮಿನೀಕಾಂಚನ ಗಳನ್ನು ತ್ಯಾಗಮಾಡಬೇಕೆಂದು ಎಷ್ಟು ಒತ್ತಿ ಹೇಳಿದರೆ ತಾನೇ ಸಾಕಾದೀತು ? ಬ್ರಹ್ಮಚಾರವನ್ನು ಸರಿಯಾಗಿ ಕಾಪಾಡಿಕೊಳ್ಳದೆ ಕೇವಲ ಅಶಕರಾಗಿ ನಾನಾ ವಿಧದಲ್ಲಿಯೂ ದೇಶದ ಅವನತಿಗೆ ಕಾರಣರಾದ ನಮಗೆ, ಆಮುಸ್ಮಿಕ ಸಾಧನದಲ್ಲಿ ಪತಿ ಪತ್ನಿಯರು ಪರಸ್ಪರ ಸಹಾಯಕರಾಗದೆ ದೇವರೆಂಬುದನ್ನೇ ಮರೆತು ವಿಲಾಸ ವೈಭವಗಳಲ್ಲಿ ಮೆರೆಯುತ್ತಿರುವ ನಮಗೆ, ಇದನ್ನು ಎಷ್ಟು ಬಾರಿ ಹೇಳಿದರೆ ತಾನೇ ಸಾಕಾದೀತು ? ಇದರಿಂದ ಎಲ್ಲರೂ ರಾಮಕೃಷ್ಣ ರ೦ತಾಗಬೇಕೆಂದಲ್ಲ.--- ಅದು ಸಾಧ್ಯವೂ ಅಲ್ಲ, ಈ ಸಂದರ್ಭ ದಲ್ಲಿ ಅವರು, "ಎಲಾ ನಾನು ಹದಿನಾರಾಣೆಯ ಪಾಲುಮಾಡಿದರೆ ನೀವು ಒಂದು ಪಾಲನೆ ದರೂ ಮಾಡಿ ! ” ಎಂದು ಹೇಳುತ್ತಿದರು. ಅದರಂತೆ ಅವರನ್ನು ಮೇಲ್ಪಂಕ್ತಿಯಾಗಿಟ್ಟುಕೊಂಡು ಎಷ್ಟು ಸಾಧನೆ ಮಾಡುತ್ತ ಬಂದರೆ ಅಷ್ಟು ಶ್ರೇಯಸ್ಕರ ವೆಂಬುದರಲ್ಲಿ ಸಂದೇಹವಿಲ್ಲ. ಕಾಮಿನೀಕಾಂಚನಗಳನ್ನು ತ್ಯಾಗಮಾಡುವ ವಿಚಾರ ಬ೦ ದಾಗ “ ಹಾಗಾದರೆ ಶ್ರೀ ರಾಮಕೃಷ್ಣ ಪರಮಹಂಸರವರು ಮದುವೆ ಯನ್ನೇಕೆ ಮಾಡಿಕೊಂಡರು? ” ಎಂದು ಕೇಳಬಹುದು. ಪರಮ ಹಂಸರ ಇತರ ಕಾರ್ಯಗಳಂತೆ ಅವರ ವಿವಾಹವೂ ಲೋಕಕಲ್ಯಾ ಣಾರ್ಥವಾಗಿಯೇ ಕೈಕೊಂಡದ್ದೆಂದು ತೋರುತ್ತದೆ. ಈಗಿನ ಕಾಲ ದಲ್ಲಿ ನಮ್ಮಗಳಿಗೆ ವಿವಾಹವಿಚಾರದಲ್ಲಿರತಕ್ಕೆ ಒಂದು ವಿಧವಾದ