ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೧೧೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಚರಿತ್ರೆ ೧೦೧ ದೈತ ವಿಶಿಷ್ಟಾದೈತ ಮತಗಳು ಬೇರೆ ಬೇರೆಯಲ್ಲ. ಅವೆಲ್ಲವೂ ಒಬ್ಬೊಬ್ಬ ಸಾಧಕನ ಜೀವಮಾನದಲ್ಲಿಯೂ ಒಂದಾದ ಮೇಲೆ ಒ೦ದ ರಂತೆ ಬರತಕ್ಕ ಅವಸ್ಥಾ ಭೇಧಗಳು* ” ಎಂದು ಮುಂತಾಗಿ ಹೇಳು ತಿದರು. ಅವರ ಆಚರಣೆಯೂ ಎಷ್ಟು ಮತವೋ ಅಷ್ಟು ಪಥ” ಎಂಬುದಕ್ಕೆ ತಕ್ಕಂತೆಯೇ ಇತ್ತು. ತಲೆಗೆಲ್ಲ ಒಂದೇ ಸೂತ್ರವನ್ನು ಅವರು ಎಂದಿಗೂ ವಿಧಿಸಿದವರಲ್ಲ. ಒ೦ದು ಜನರಿಗೂ ಮತ್ತೊಂದು ಜನರಿಗೂ ಒಬ್ಬ ಮನುಷ್ಯನಿಗೂ ಮತ್ತೊಬ್ಬ ಮನುಷ್ಯನಿಗೂ ಸ್ವಭಾವ ಗುಣ, ಮುಂತಾದುವ್ರಗಳಲ್ಲಿ ವ್ಯತ್ಯಾಸವಿರುವತನಕ ಅವರ ಮಾ ರ್ಗವೂ ಬೇರೆಯಾಗ ಬೇಕು. ಆದ್ದರಿಂದ ಪರಮಹಂಸರು ಶಿಷ್ಯರ ಯೋಗ್ಯತೆಯನ್ನು ನೋಡಿ ಅವರವರಿಗೆ ತಕ್ಕ ಶಿಕ್ಷಣವನ್ನು ಕೊಡು ಆದರು ಸಮರ್ಥನಾದ ವೈದ್ಯನಂತೆ ಬೇಕಾದ ಸಾಧನಸಾಮಗ್ರಿ ಗಳನ್ನೂ ಅನುಭವವನ್ನೂ ಸಂಪಾದಿಸಿಟ್ಟುಕೊಂಡು ಯಾರು ಬಂದರೂ,

  • ಈ ಸ೦ದರ್ಭದಲ್ಲಿ ಮಹಾಜ್ಞಾನಿಯಾದ ಹನುಮ೦ತನ ಕಥೆ ಯನ್ನು ಹೇಳುತ್ತಿದ್ದರು. ಒಂದು ಸಲ ಶ್ರೀರಾಮಚಂದ್ರನು, ಹನು ಮ೦ತನನ್ನು ನೀನು ನನ್ನನ್ನು ಯಾವಭಾವದಲ್ಲಿ ಕಾಣುವೆ ? ನನ್ನನ್ನು ಯಾವಭಾವದಿಂದ ಕಂಡುಕೊಂಡು ಪೂಜೆ ಮಾಡುವೆ ? ' ಎ೦ದು ಕೇಳಿದ ನ೦ತೆ. ಆಗ ಆ೦ಜನೇಯನು, " ಹೇ ರಾಮ ! ಯಾವಾಗ ನನಗೆ ಈ ದೇಹ ಬುದ್ದಿ ಇರುತ್ತದೆಯೋ, ಅ೦ದರೆ ನಾನು ದೇಹವೆ೦ದು ತಿಳಿದು ಕೊಂಡಿ ರುತ್ತೇನೆಯೋ, ಆಗ ನೀನು ಪ್ರಭು, ನಾನು ದಾಸ, ನೀನು ಸೇವ್ಯ ನಾನು ಸೇವಕ, ನೀನು ಪೂಜ್ಯ, ನಾನು ಪೂಜಕ ಎಂದು ತಿಳಿದು ಕೊ೦ಡಿರುತ್ತೇನೆ. ಯಾವಾಗ ನಾನು ಮನಸ್ಸು ಬುದ್ದಿ ಗಳಿ೦ದ ಕೂಡಿದ ಜೀವಾತ್ಮನೆಂಬ ಭಾವವಿರುತ್ತದೆಯೋ ಆಗ ನೀನು ಪೂರ್ಣ, ನಾನು ಆ೦ಶ ಎ೦ದು ತಿಳಿದುಕೊಂಡಿರುತ್ತೇನೆ. ಮತ್ತು ಯಾವಾಗ ನಾನು ಉಪಾಧಿ ರಹಿತವಾದ ಶುದ್ದವಾದ ಆತ್ಮವೆಂದು ಸಮಾಧಿಯಲ್ಲಿ ಅನು ಭವಕ್ಕೆ ತಂದುಕೊಳ್ಳುತ್ತೇನೆಯೋ ಆಗ ನೀನು ಯಾರೋ ನಾನು ಅವನೇ. ನೀನೂ ನಾನೂ ಒ೦ದೇ, ಏನೂ ಭೇದವಿಲ್ಲ, ಎಂದು ತಿಳಿದುಕೊಳ್ಳು ತೇನೆ ” ಎ೦ದು ಉತ್ತರಕೊಟ್ಟನಂತೆ.