ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M ಶ್ರೀ ತತ್ವ ಸಂಗ್ರಹ ರಾಮಾಯಣಂ, (ಸರು ಕೃತಾರ್ಥೋ ಮಹಾಬಾಹೋ ಕೃತಂ ಗುರುವಚಸ್ಯಾ | ಸಿದ್ಧಾಶ್ರಮಮಿದಂ ಸತ್ಯಂ ಕೃತಂ ರಾಮ ಮಹಾಯಶಃ |on ಇತ್ಯುಕ್ಯ ಮುನಿಭಿಃ ಸಾಕಂ ರಾಘುವಂ ಕುಶಿಕಾತ್ಮಜಃ | ಸರ್ವೆ ರತಿಥಿಸತ್ಕಾರೈಃ ಪೂಜಯಾಮಾಸ ಭಕ್ತಿತಃ || ತತಃ ಪಠೇದ್ಯಃ ಸರ್ವೇಪಿ ಸ್ನಾತಾ ಹತಹುತಾಶನಾಃ | ರಾಮಂ ಹೃದಿ ಸಮಭ್ಯರ್ಚ್ಯ ಮಾನಸೈರುಪಚಾರಕ್ಕೆ |೨೩೪ ತತೋ ಬಾಹ್ಯಪಿ ಪಟ್ಟಕ್ಕಸಾಲಗಾಮಶಿಲಾಸ್ಕಲಮ್ || ರಾಮಮೂರ್ತಿಯು ರಾಮಸ್ಯ ಪೂಜಾಂ ಕೃತ್ವಾ ಯಥಾವಿಧಿ 81 ಯಜ್ಞಾರ್ಥವಾಗತಾವ ನಾನಾದೇಶನಿವಾಸಿನಃ | ಸಿದ್ದಾಥಮಸ್ಥಾಏಷಯಃ ವೇದವೇದಾವಿರಗಾಃ | ರಾಮಭಕ್ತಿ ಪರಾಃ ಸರ್ವೇ ವಿಶ್ವಾಮಿತ್ರಮಧಾಟುರ್ವ ಮುನೇ ಕೌಶಿಕ ಭದ್ರಂ ತೇ ವದ ರಿವಾರ್ಚನಂ ಹೃದಿ | ತತ್ಕಾಲಗ್ರಾಮಪೂಜಾಂ ಚ ಪೂಜಾತೀರ್ಥಾದಿವೈಭವಮ್ | o೬ || ವಿಶ್ವಾಮಿತ ಉವಾಚ. ಅಹೋ ಧನ್ಯತಮ ಯಯಂ ಅಹಂ ಚ ಬ್ರಹ್ಮವಾದಿನಃ | ರಾಮಾರ್ಚನವಿಧೇ ಯಸ್ಯತ್ ಚೋದಿತ ರಾಮಸನ್ನಿಧೇ |೦೭| ಎಲೈ ಮಹಾಬಾಹುವಾದ ರಾಮನೆ' ನಾನು ಈಗ ಕೃತಕೃತ್ಯನಾದೆನು. ನೀನೂ ಈಗ ಗುರುವಾಕ್ಯವನ್ನು ನೆರವೇರಿಸಿದವನಾದೆ. ಎಲೈ ಮಹಾಯಶಸ್ವಿಯೆ! ಈಗ ಈ ಸಿದ್ಧಾಶಮವು ನಿನ್ನಿಂದ ಯಥಾರ್ಥವಾಗಿ ಮಾಡಲ್ಪಟ್ಟಿತು ||೨೧|| ಹೀಗಂದು ಹೇಳಿ, ವಿಶ್ವಾಮಿತ ಮುನಿಯು ಇತರ ಮುನಿಗಳೊಡಗೂಡಿದವನಾಗಿ, ಭಕ್ತಿ, ಪುರಸ್ಸರವಾಗಿ, ಶ್ರೀರಾಮನನ್ನು ಸಮಸ್ತವಾದ ಅತಿಥಿಸತ್ಕಾರಗಳಿಂದಲೂ ಪೂಜಿಸಿದನು 1991 ಆ ಮೂರನೆಯ ದಿವಸ, ವೇದವೇದಾನಪಾರಗರಾಗಿ ರಾಮಭಕ್ತಿಯುಕ್ತರಾದ ಆ ಸಿದ್ಧಾ ಶ್ರಮದಲ್ಲಿದ್ದ ಮುನಿಗಳೂ, ನಾನಾದೇಶಗಳಲ್ಲಿದ್ದು ಆ ಯಜ್ಞ ಕೊಸ್ಕರವಾಗಿ ಬಂದಿದ್ದ ಮುನಿ ಗಳೂ ಕೂಡ, ಶ್ರೀರಾಮಚಂದ್ರನನ್ನು ಹೃದಯದಲ್ಲಿ ಮನಸೋಪಚಾರಗಳಿಂದ ಪೂಜಿಸಿ, ಅನಂತರ ಹೊರಗೂಕೂಡ ಷಟ್ಕಸಾಲಗ್ರಾಮಗಳೆಂಬ ಶ್ರೀಸೀತಾರಾಮಮೂರ್ತಿಗಳಲ್ಲಿ ಯಥಾ ವಿಧಿಯಾಗಿ ಅರ್ಚನೆಮಾಡಿ, ಬಳಿಕ ವಿಶ್ವಾಮಿತ್ರ ಮುನಿಯನ್ನು ಕುರಿತು - ಎಲೈ ಮಹರ್ಷಿಗಳ ! ಶ್ರೀರಾಮನ ಮನಸಪೂಜಾಕ್ರಮವನ್ನೂ, ಅವನ ಸಾಲಗ್ರಾಮ ಪೂಜಾಕ್ರಮವನ್ನೂ ಪೂಜೆ ತೀರ್ಥ ಮೊದಲಾದುವುಗಳ ಮಹಿಮೆಯನ್ನೂ ಕೂಡ, ತಾವು ದಯವಿಟ್ಟು ನಮಗೆ ವಿಸ ರಿಸಿ ಹೇಳಬೇಕು ' ಎಂಬುದಾಗಿ ಪ್ರಾರ್ಥಿಸಿಕೊಂಡರು ೨೩-೨೬|| ಶ್ರೀ ವಿಶ್ವಾಮಿತ್ರಮುನಿಯು ಹೇಳಿದುದೇನೆಂದರೆ :- ಎಲೈ ಬ್ರಹ್ಮವಾದಿಗಳಾದ ಮಹರ್ಷಿಗಳಿ೦೩ಶ್ರೀರಾಮನ ಸನ್ನಿಧಿಯಲ್ಲಿಯೇ ಆವನ ಪೂಜಾಕ್ರಮವನ್ನು ಕುರಿತು ನೀವು ನನ್ನನ್ನು ಪ್ರಶ್ನೆ ಮಾಡಿದುದರಿಂದ, ಈಗ ನೀವೂ ನಾನೂ ಅತ್ಯಂತ ಧನ್ಯರಾದೆವು 194