ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ ಅಥ ಶ್ರೀ ಬಾಲಕ ಪಶ್ ನಿಂಸಃ ಸರ್ಗ. “ ಶ್ರೀ ಶಿವ ಉವಾಚ. ಮಿಥಿಲೋಪವನ' ತತ್ರ ನಾನಾಪುಪ್ಪದುಮಾತಮ್ | ನಾನಾವಿಧಫಲೋಪೇತಂ ದದೃಶುವನಮುತ್ತಮಮ್ ೧ ಕ್ರವಾಹಾರಿ ಮಹಾರವ್ಯಂ ಪುಟಕೇಪುಟಕೆ ಮಧು ಕಣ್ಣಮಲಾದಿಸವಣF೦ ನದೀತೀರಮವಾಶ್ರಿತ |೨|| ತದ್ದ ಶಂ ವನವಾಸಾದ್ಯ ರಾಮಃ ಪರಪುರಣ್ಣಯಃ : ವಿಶ್ವಾಮಿತ್ರಮಿದಂ ವಾಕ್ಯಂ ಉವಾಚ ಸಹಲಕ್ಷ್ಮಣ8 |೩| ಕಸ್ಯದಮಾಮಪದಂ ರಮ್ಯಂ ವನಿವಿವರ್ಜಿತಮ್ | ಕೋ ಹೇತುರ್ವದ ಮೇ ರ್೩ ಪರಂ ಕೌತೂಹಲಂ ಹಿ ನಃ 180 ಇತಿ ಪೃಷ್ಟೋ ರಾಘವೇಣ ವಿಶ್ವಾಮಿತ್ರ ಮಹಾತ್ಮನಾ | ತದಾಶ್ರಮಕಥಾಂ ಪುಣ್ಯಾಂ ವಕ್ಕು ಮೈಚೆಚ್ಚು ಚಿತೇ |೩| ಕೃಣು ರಾಮ ಪ್ರವಕ್ಷ್ಯಾಮಿ ಕಥಾಂ ಕಥಯತೋ ಮಮ || ವಿಜೆತ್ರಾಂ ಸರ್ವಪಾಪಘ್ನಂ ಗೌತಮಸ್ಯ ಮಹಾತ್ಮನಃ (೬ || ಬಾಲಕಾಂಡದಲ್ಲಿ ಇಪ್ಪತ್ತನೆಯ ಸರ್ಗವು. - ಐ ಶ್ರೀ ಪರಮೇಶ್ವರನು ಪುನಃ ಪಾರ್ವತೀದೇವಿಯನ್ನು ಕುರಿತು ಹೇಳುವನು :- ಎಲೆ ಪಾರ್ವತಿ' ಹಿಂದೆ ಹೇಳಿದಂತೆ, ಮಿಥಿಲಾ ಪಟ್ಟಣಕ್ಕೆ ಹೋದ ಆ ರಾಮಲಕ್ಷಣಾದಿ ಗಳು, ಆ ಉಪವನದೊಳಗೆ, ನಾನಾವಿಧ ಪುಷ್ಪಗಳಿ೦ದಲೂ ಫಲಗಳಿ೦ದಲೂ ಭರಿತವಾಗಿರುವ ವೃಕ್ಷವಾಟಿಕೆಯನ್ನು ಕಂಡರು ||೧|| ಆ ವನವುತಾಪಾರರಾದವರಿಗೆ ಶ್ರಮಪರಿಹಾರಕವಾಗಿಯೂ, ಅತಿ ಮನೋಹರವಾ ಗಿಯೂ ಇದ್ದಿತು; ಅದರೊಳಗಿರುವ ಪ್ರತಿಯೊಂದು ಭ್ರಷ್ಟಪುಟದಲ್ಲಿಯ ಮಕರಂದವು ಭರಿತ ವಾಗಿದ್ದಿತು; ನದಿಯ ತೀರದಲ್ಲಿರುವ ಆ ಉದ್ಯಾನದೊಳಗೆ, ಕಂದಮಲಾದಿಗಳು ಯಥೇಚ್ಛ ವಾಗಿ ತುಂಬಿದ್ದುವು |೨|| ಅಂತಹ ಉದ್ಯಾನವನ್ನು ಲಕ್ಷ್ಮಣನೊಡನೆ ಹೊಂದಿ, ಶತ್ರುವರವಿಜಯಿಯಾದ ಶ್ರೀರಾ ಮುನು, ವಿಶ್ವಾಮಿತ್ರ ಮುನಿಯನ್ನು ಕುರಿತು ಹೀಗೆ ಹೇಳಿದನು ||೩|| * ಬ್ರಹ್ಮರ್ಷಿವರರ! ಅತಿ ರಮಣೀಯವಾಗಿಯ ಮುನಿವರ್ಜಿತವಾಗಿಯೂ ಇರುವ ಈ ಅಕ್ರಮವರದು ? ಇದು ಹೀಗೆ ಜನವರ್ಜಿತವಾಗಿರುವುದಕ್ಕೆ ಕಾರಣವೇನು : ಇದನ್ನು ಅಪ್ಪಣೆ ಕೂಡಿಸಬೇಕು. ಇದನ್ನು ತಿಳಿದುಕೊಳ್ಳಬೇಕೆಂದು ನನ್ನ೦ತೆಯೇ ಈ ಸಮಸ್ತರಿಗೂ ಅತಿಯಾಗಿ ಕುತೂಹಲವುಂಟಾಗಿರುವುದು ||೪|| ಎಲ್‌! ಪಾರ್ವತಿ! ಈರೀತಿಯಾಗಿ ಮಹಾತ್ಮನಾದ ರಾಮನಿಂದ ಪ್ರಾರ್ಥಿಸಲ್ಪಟ್ಟ ವಿಶಾ ಮಿತ್ರಮುನಿಯು, ಅತಿ ಪವಿತ್ರವಾದ ಆ ಆಶ್ರಮದ ಕಥೆಯನ್ನು ಹೇಳಲುಪಕ್ರಮಿಸಿದನು |೫||