ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

S (ಸರ ಶ್ರೀ ತತ್ವ ಸಂಗ್ರಹ ಕಾಮಾಯಣಂ, ಏಳದ ನಾರದೊಳಾಗಾರ್ ವಿವಿಕ್ ಮಯಿ ಸಂಸ್ಥಿತೇ | ಈnರ್ಯ ಮಹತೀಂ ವೀಣಾಂ ಗಾರ್ಯ ನಾರಾಯao'ಪ್ರಭುಮ್ | ಅರ್ಚಿತ ಸುಖಮಾಸೀನೋ ಮಾಮುವಾಚ ಕೃಪಾನಿಧಿಃ |೩೭| ಕೃಉಮ್ಮ ವಚನಂ ಗುಹ್ಯಂ ತವಾಭ್ಯುದಯಕಾರಣವಮ್ | ಪರಮಾತ್ಮಾ ಹೃಷೀಕೇಶ ಭಕ್ತಾನಾಂ ಹಿತಕಾವ್ಯಯಾ [೩v ದೇವಕಾರ್ಯಾರ್ಥಸಿದ್ಧ ರ್ಥ೦ ರಾವಣ ವಧಾಯ ಚ | ಜಾತೋ ರಾಮಣತಿ ಖ್ಯಾತ ಮಾಯಾಮಾನುಷವೇಷಧತೆ |೩| ಆ ದಾಶರಥಿರ್ಭೂತಾ ಚತುರ್ಧಾ ಪರಮೇಶ್ವರಃ : ಯೋಗವಾಯಾ ಚ ಸೀತೇತಿ ಜಿತಾಸ್ತೇ ತವ ವೇಕ್ಕನಿ [೪೦] ಆತ ರಾಭವಾಯ್ವ ದೇಹಿ ಸೀತಾಂ ಪ್ರಯತ್ನ ತಃ || ನಾನೋಪಾಂ ಪೂರ್ವಭಾರ್ಯೇಷು ರಾಮಸ್ಯ ಪರಮಾತ್ಮನಃ ೪೧|| ಇತ್ಯುಕ್ತ ಪ್ರಯಮ್‌ ದೇವಗನಿರ್ದೆವಮುನಿಸದಾ | ತದಾರಭ್ಯ ಮಯಾ ಸೀತಾ ಲಕ್ಷ್ಮಿರಿತಿ ವಿಭಾವ್ಯತೇ 18 ಹಿಂದೆ ಒಂದುವೇಳೆ, ನಾನು ವಿಜನವಾದ ಸ್ಥಳದಲ್ಲಿ ಕುಳಿತಿರಲಾಗಿ, ಮಹತಿಯೆಂಬ ವೀಣೆ ಯನ್ನು ಬಾರಿಸುತ,ಶ್ರೀಮನ್ನಾರಾಯಣನ ನಾಮಗಳನ್ನು ಗಾನಮಾಡುತಿರುವ ನಾರದಮು ನಿಯು ನನ್ನ ಹತ್ತಿರಕ್ಕೆ ಬಂದನು. ಬಳಿಕ ನನ್ನಿಂದ ಪೂಜಿಸಲ್ಪಟ್ಟ ವನಾಗಿ, ಸುಖವಾಗಿ ಕುಳಿತು ಇಂದು, ದಖನಿನಿಧಿಯಾದ ಆ ನಾರದಮುನಿಯು, ನನ್ನನ್ನು ಕುರಿತು ಹೀಗೆ ಹೇಳಿದನು ೩೭ - ಅಖಾ ! ನಕ! ನಿನ್ನ ಅಭ್ಯುದಯಕ್ಕೆ ಮುಖ್ಯ ಕಾರಣವಾದ ಅತಿ ರಹಸ್ಯವಾಗಿರುವ ಈ ಮಾತನ್ನು ಕೇಳುವನಾಗು. ಪರಮಾತ್ಮನಾದ ಹೃಷೀಕೇಶನು, ಭಕ್ತರಿಗೆ ಹಿತವನ್ನುಂಟುಮಾ ಡಬೇಕೆಂಬ ಇಚ್ಛೆಯಿಂದಲೂ, ದೇವತೆಗಳ ಕಾರದಿ ಯಾಗುವುದಕ್ಕೂ, ರಾವಣನ ವಧೆಗೆ ಸ್ಮರವೂ ಕೂಡ ರಾಮನೆಂದು ಪ್ರಸಿದ್ಧನಾಗಿ, ಮಾಯಾಮಾನುಷ ರೂಪವನ್ನು ಧರಿಸಿಕೊಂಡು, ದಶರಥರ,ನಾಗಿ ಅವತರಿಸಿರುವನು. ಆ ಪರಮೇಶ್ವರನು ಈಗ ನಾಲ್ಕು ಪ್ರಕಾರವಾಗಿ ರೂಪವನ್ನು ವಿಭಾಗಿಸಿಕೊ೦ಡಿರುವನು. ಆ ಸರವತ್ರನ ಯೋಗಮಾಯೆಯ ಕಡ, ಸೀತ ಯೆಂಬ ಹೆಸರಿನಿಂದ ನಿನ್ನ ಮನೆಯಲ್ಲಿ ಅವತರಿಸಿರುವಳು. ಅದುಕರು, ನೀನು ಪ್ರಯತ್ನ ಈರ್ವಕವಾಗಿ ಆ ರಾಮನಿಗೆ ಸೀತಯನ್ನು ಕೊಡುವನಾಗು. ಇವಳು ಮತ್ತೊಬ್ಬರಿಗೂ ಸರ್ವದಲ್ಲಿ ಪ್ರಯಾದವಳಲ್ಲ. ಪರಮಾತ್ಮನಾದ ಶ್ರೀರಾಮನಿಗೇ ಪತ್ನಿ ಯಾಗತಕ್ಕವಳು. ಎಂದು ನಾರದಮುನಿ ಹೇಳಿದನು Isv-೪೧ ಸಯ್ಯದ ವಸಿಷ್ಠ ವಿಶ್ವಮಿತ್ರರೆ ! ಆ ದೇವಮುನಿಯು ಹೀಗೆಂದು ಹೇಳಿಬಿಟ್ಟು, ಆಗ ಗಮನನಾಗಿ ಹೊರಟುಹೋದನು. ಆ ಕಾಲಮೊದಲುಗೊಂಡು, ನಾನು ಸೀತೆಯನ್ನು ಸಾಕ್ಷಿಯೆಂದು ಭಾವನೆಮಾಡುತ್ತಿರುವೆನು ೧೪೨೧