ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4] ಬಾಲಕಾಂಡ S ಕ್ಷತ್ರಧರ್ಮ೦ ಪುರಸ್ಕೃತ್ಯ ಗೃಹಿಪ್ಪ ಧನುರುತ್ತಮಮ್ |೫| ಯೋಜಯಸ್ತ ಧನುಷ್ಕ ಶರಂ ಪರಶುರಾಯ | ಯದಿ ಕವಿ ಕಾಕುತ್ಸ ದ್ವಂದ್ಯಂ ದಾಸ್ಯಾಮಿ ತೇ ತತಃ |೩೦| ಅಥವಾ ವ್ಯಸ್ತಕಸ ಕಾತರೋಸಿ ಯದಾ ಕೃಣು || ಶರಣಂ ವುಜ ಮಾಂ ರಾಮ ನಮಸ್ಕೃತ್ಯ ಕೃತಾಇಲಿ: ೬೧! ಕುತ್ಸಾ ತಜಾಮದಗ್ನಸ್ಯ ವಾಕ್ಯಂ ದಾಶರಥಿಷ್ಕದು || ಗೌರವಾದಿತಕಥಃ ಪಿತೂರಾಮವುಥಾಬ್ರವೀತ್ ||೨| ಕೊನರ್ಥನ್ನ ಮಸ್ಕರಾತ್‌ ಪೂಜ್ಯ ವಿಪ್ರೊಸ್ಯಹಂ ನೃಪಃ | ಆಜ್ಞಾಪಯಸಿ ಚ ಬ್ರರ್ಹ್ಮ ಗ್ರಹೀಮೋ ವೈಷ್ಣವಂ ಧನುಃ |೬೩ ಶ್ರುತವಾನಸ್ಕಿ ಯ ಕರ್ಮ ಕೃತವಾನಸಿ ಭಾರ್ಗವ | ಅನುರುಧ್ಯಾಮಹೇ ಬ್ರಹ್ಮ ಪಿತುರಾನ್ನವಾಸಿತ 848|| ವೀರ್ಯಹೀನವಿನಾಶಕಂ ಕ್ಷತಧರ್ಮೇಣ ಭಾರ್ಗವ || ಅವಜಾನಾಸಿ ಮೇ ತೇಜಃ ಪಶ್ಯ ಮದ್ಯ ಪರಾಕ್ರಮ |೩೫| ವುದು. ನೀನು, ಕ್ಷತ್ರಿಯಧರ್ಮವನ್ನು ಮತ್ಯಾದಿಸುತ, ಈ ಉತ್ತಮ ಧನುಸ್ಸನ್ನು ಗ್ರಹಿಸು ವನಾಗು ||೫F | ಎಲೈ ಶಕು, ಕುಲಸಂಹಾರಕನೆಂದು ಹೊಗಳಿಸಿಕೊಳ್ಳುವ ಶ್ರೀರಾಮನೆ! ಈ ಶ್ರೇಷ್ಟವಾದ ವೈಷ್ಣವಧನುಸ್ಸಿನಲ್ಲಿ ಬಾಣವನ್ನು ಹೂಡುವನಾಗು. ನೀನು ಸಮರ್ಧ ನಾಗಿದ್ದ ಪಕ್ಷದಲ್ಲಿ, ಆಮೇಲೆ ನಾನು ನಿನಗೆ ದ್ವಂದ್ವಯುದ್ದವನ್ನು ಕೊಡುವೆನು ||೬|| ಅಥವಾ, ನೀನು ಭಯಗ್ರಸ್ತನಾಗಿದ್ದ ಪಕ್ಷದಲ್ಲಿ, ನನ್ನ ಹಿತವಚನವನ್ನು ಕೇಳುವನಾಗು ; ಶಸ್ತ್ರವನ್ನು ಕೆಳಗಿಟ್ಟು ಬಿಟ್ಟು, ಕೈ ಮುಗಿದುಕೊಂಡು, ನನಗೆ ಶರಣಾಗತನಾಗು | L೧೧ ಹೀಗೆ ಹೇಳುತ್ತಿರುವ ಪರಶುರಾಮನ ಮಾತನ್ನು ಕೇಳಿದವನಾಗಿ, ಇದುವರೆಗೂ ತಂದಲ್ಲಿ ಗೌರವದಿಂದ ವಿಶೇಷವಾಗಿ ಮಾತನಾಡದಿದ್ದ ಶ್ರೀರಾಮಚಂದ್ರನು, ಆ ಭಾರ್ಗವನನ್ನು ಕುರಿತು ಹೀಗೆ ಹೇಳಿದನು ೧೬೨|| ಎಲೈ ಬ್ರಾಹ್ಮಣಶ್ರೇಷ್ಠರೆ! ತಮಗೆ ನಾನು ನಮಸ್ಕಾರ ಮಾಡಿದುದರಿಂದ ಬಾಧಕವೇನು? ತಾವು ಸ್ವಭಾವತಃ ಬ್ರಾಹ್ಮಣರು ; ನಾನು ಕ್ಷತ್ರಿಯನು. ಕೃತಿಯನು ಬ್ರಾಹ್ಮಣರಿಗೆ ನಮಸ್ಕರಿ ಸುವುದು ನ್ಯಾಯವೇ ಅಲ್ಲವೆ! ಆದರೂ, ತಾವು ಆಜ್ಞೆ ಮಾಡುತ್ತೀರಾದಕಾರಣ, ಈ ವೈಷ್ಣವ ಧನುಸ್ಸನ್ನು ಗ್ರಹಿಸುವೆನು 1೬೩1 ಎಲೈ ಭಾರ್ಗವಸೆ ! ನೀನು ಯಾವಯಾವ ಕೆಲಸವನ್ನು ಮಾಡಿರುವೆಯೋ, ಅದನ್ನೆಲ್ಲ ನಾನು ಕೇಳಿರುವೆನು. ನೀನು ತಂದೆಯ ಆಜ್ಞೆಯನ್ನು ನೆರವೇರಿಸಿ ಪಿತೃಋಣಮುಕ್ತನಾದುದನ್ನು ನೋಡಿ, ನಾನು ಬಹಳವಾಗಿ ಅಭಿನಂದಿಸುವೆನು ೬೪ ಎಲೈ ಭಾರ್ಗವನೆ ನನ್ನ ನ್ನು , ಕ್ಷತ್ರಿಯ ಸಾಮಾನ್ಯ ಬುದ್ಧಿಯಿಂದ ವೀರಹೀನನೆಂದೂ ಅಶಕ್ತನೆಂದೂ ತಿಳಿದು, ನನ್ನ ತೇಜಸ್ಸನ್ನು ನೀನು ತಿರಸ್ಕರಿಸುತಿರುವೆಯಲ್ಲವೆ! ಈಗ ನನ್ನ ಪರಿ ಕ್ರಮವನ್ನು ನೋಡುವನಾಗು. (ಎಂದು, ಶ್ರೀರಾಮನು ಪರಶುರಾಮನಿಗೆ ಹೇಳಿದನು) (L೫u