ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

9Ly [ಸಗ ಶ್ರೀ ತತ್ವ ಸಂಗ್ರಹ ರಾಮಾಯಣಂ ನಾರಾಯಣಾರವಿಣ್ಣಾಕ್ಷ ನಮಸ್ತೆ ಪರಮಾತ್ಮನೇ || ಅಹಿ ವಾಂ ಜಗದಾಧಾರ ಸರ್ವಲೋಕನಮಸ್ಕೃತ !೪v ಬ್ರಹ್ಮಾಣಾನಾಂ ಸಹಸ್ರ ಭವಯಸ್ಯನಿಕಂ ಪ್ರಭೋ ! ಬ್ರಹ್ಮಾಸ್ಮಿಕೊಟಯೋ ರಾಮ ತವಾಪು ಕೃತಾಯಾಃ | ವಿಜ್ಞಾತಸಾರೋ ರಾಮು ತಂ ಪರತಂ ತ್ವಮೇವ ಹಿ |೪೯ || ಬಾಲೋಸಿ ಕ್ಷತ್ರವಂಶೆಸಿ ಮಾನುಷಸೀತಿ ಕೀರ್ತನಮ್ | ಕ್ಷಮಸ್ಸು ತನ್ನೇ ದೌರಾತ್ಮ ಭಯೋಭೂಯೋ ನಮೋಸ್ತು ತೇ ||೫°! ಯದಿ ಮೇನುಗ, ರಾಮ ತವಾ ಮಧುಸೂದನ | ಇದ್ದಕಸಂಗತ್ವಾದಭಕ್ತಿರೇವ ಸದಸ್ತು ಮೇ ೫೧|| ತಯಾ ಲೋಕ್ಯನಾಥೇನ ಯದಹಂ ವಿಮುಖೀಕೃತಃ | ನ ಚೇಯಂ ಮಮ ಕಾಕುತ್ಸ ವೀಡಾ ಭವಿತುಮರ್ಹತಿ !:೫೨| ತಪಸಾ ನಿರ್ಣಿತಂ ಸರ್ವಂ ತವ ತೇಜಸ್ಸು ಭಾಜನಮ್ | ಪುಣ್ಯಲೋಕಂ ವಿಧಾಯಾಶು ರಾಮ ಬಾಣ೦ ವಿಮೋಚಯ ೫೩! ಶರಮೋಕ್ಷ ಗಮಿಪ್ಯಾಮಿ ಮಹೇನ್ • ಪರ್ವತೋತ್ತಮಮ್ !x೪॥ ನಾರಾಯಣ ! ಪುಂಡರೀಕಾಕ್ಷ ! ಪರಮಾತ್ಮನಾದ ನಿನಗೆ ನಮಸ್ಕಾರವ, ಸಮಸ್ತ ಜಗ ತಿಗೂ ಆಶ್ರಯಭೂತನೆ ! ಸರ್ವಲೋಕನಮಸ್ಕೃತನಾದವನೆ ! ನನ್ನ ನ್ನು ಸಂರಕ್ಷಿಸು ೪vl ಹೇ ಪ್ರಭೋ ! ನೀನು ಅನೇಕ ಕೋಟ ಬ್ರಹ್ಮಾಂಡಗಳನ್ನು ಸರ್ವದಾ ಸುತ್ತಿಸುತಿರುವೆ. ಶ್ರೀರಾಮಚಂದ' ಅನೇಕ ಕೋಟ ಬ್ರಹ್ಮಾಂಡಗಳು ನಿನ್ನ ಅಂಗಗಳಲ್ಲಿ ಆಶ್ರಯಮಾಡಿಕೊಂಡಿ ರುವುವು. ಸ್ವಾರ್ಮಿ! ರಾಮಭದ್ರ! ಈಗ ನಿನ್ನ ಯಾಥಾರ್ಥವು ನನಗೆ ಗೊತ್ತಾಯ್ತು; ನೀನೇ ಆ ಪರತತ್ವವಲ್ಲವೆ ! n೪೯11 “ ನೀನು ಬಾಲಕನು ; ಕ್ಷತ್ರಿಯ ಕುಲದವನು ; ಮನುಷ್ಯನತ್ರನು. ' ಎಂದು ಸ್ವಚ್ಛ ಯಾಗಿ ನಾನು ಹೇಳಿದುದಾವುದುಂಟೋ, ನನ್ನ ಆ ರಾತ್ಮವನ್ನು ನೀನು ಕ್ಷಮಿಸಬೇಕು ನಿನಗೆ ಪದೇಪದೇ ನಮಸ್ಕಾರ ಮಾಡುವೆನು ||೫|| ಹೇ ಮಧುಸೂದನ ! ರಾಮ! ನನ್ನ ವಿಷಯದಲ್ಲಿ ನಿನಗೆ ವಿಶೇಷವಾಗಿ ಅನುಗ್ರಹವಿರುವ ಪಕ್ಷದಲ್ಲಿ ನನಗೆ ಸರ್ವದಾ ನಿನ್ನ ಭಕ್ತರ ಸಹವಾಸವೂ ನಿನ್ನ ಪಾದದಲ್ಲಿ ಭಕ್ತಿಯ ಇವೆರಡು ಮಖತ್ರವೇ ಇರಲೆಂದು ಅನುಗ್ರಹಿಸುವನಾಗು ||೫|| ಎಲೈ ಕಾಕುತ್ಸನೆ! ಮೂರು ಲೋಕಕ್ಕೂ ಒಡೆಯನಾದ ನೀನು ನನ್ನನ್ನು ಈಗ ಭಂಗ ಪಡಿಸಿದೆಯಲ್ಲವೆ ! ಇದು ನನಗೆ ಸ್ವಲ್ಪವೂ ಲಜ್ಞಾ ವಹವಲ್ಲ 491. ಹೇ ರಾಮ ! - ನನ್ನ ಬಾಣಕ್ಕೆ ಗುರಿಯಾವುದು?' ಎಂದು ಕೇಳಿದೆಯಲ್ಲವೆ! ನಾನು ತಪಸ್ಸಿ ನಿಂದ ಸಂಪಾದಿಸಿರುವ ಸಮಸ್ತ ಗಣ್ಯಲೋಕವನ್ನ ನಿನ್ನ ತೇಜಸ್ಸಿಗೆ ಗುರಿಯಾಗಿವಂಡಿ, ನಿನ್ನ ಅಮೋಘವಾದ ಬಾಣವನ್ನು ಬೇಗನೆ ಬಿಟ್ಟುಬಿಡು. ನೀನು ಅದನ್ನು ಬಿಟ್ಟ ಬಳಿಕ, ನಾನು ಮಹೇಂದ್ರವೆಂಬ ವರ್ವತಕ್ಕೆ ತಪಸ್ಸಿಗಾಗಿ ಹರಟುಹೋಗುವೆನು. (ಎಂದು ಪರಶುರಾಮನು ಹೇಳಿದನು |೫೩-೫೪