ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ ಅತ್ಯುಃ ಚಿಹ ತಂ ರಾಮಃ ಸೃಭಕ್ತಂ ಬ್ರಹ್ಮವಿತ್ತಮಮ || ರಹಸ್ಯಸಿ ಮೇ ಬ್ರರ್ಹ್ಮ ತತ್ರ ಸ್ಪುರತು ತೇ ಸದಾ |೪೪ | ಇತ್ಯ: ಪರಿಕೃಷ್ಟಾನ್ನಾ ವಸಿಷ್ಠಃ ಪ್ರಹ ತಂ ಪುನಃ [೪೫| ರಾಜ್ಞ ದಶರಥೇನಾಹಂ ಪ್ರೇಷಿತೋನ್ನಿ ರಘೋತ್ತಮ | ತ್ಯವಾಮನ ಯಿತುಂ ರಾಜೇ ಶೋಭಿಷೇಕ್ಷ್ಯತಿರಾಭುವಃ ||4|| ಅದ್ಯ ತಂ ಸೀತಾ ಸಂರ್ಧ೦ ದೀಕ್ಷಾ ವಹ ಯಥಾವಿಧಿ | ಇತ್ಯುಕ್ಯ ರಥಮಾರುಹ್ಯ ಯಯೌ ರಾಜಗುರುರ್ಗೃಹಮ್ (೪೭| ಇತಿ ಶ್ರೀಮದಯೋಧ್ಯಾ ಕಾಣ್: ಶ್ರೀರಾಮಪಟ್ಟಾಭಿಷೇಕಸನ್ನ ಹನಂ ನಾನು ದ್ವಿತೀಯಃ ಸರ್ಗಃ ತE... ಹೀಗೆಂದು ಶಿವಸಿಷ್ಠರಿಂದ ಹೇಳಲ್ಪಟ್ಟ ಶ್ರೀರಾಮಚಂದನು, ತನ್ನಲ್ಲಿ ಭಕ್ತನಾ ಗಿಯ ಬ್ರಹ್ಮಜ್ಞಾನಿಗಳ ಮಧ್ಯದಲ್ಲಿ ಶ್ರೇಷ್ಠ ನಾಗಿಯೂ ಇರುವ ವಸಿಷ್ಠ ಮುನಿಯನ್ನು ಕುರಿತು “ಎಲೈ ಬ್ರಾಹ್ಮಣೋತ್ತಮರೆ ! ತಾವು ನನ್ನ ರಹಸ್ಯವನ್ನು ಬಲ್ಲವರಾಗಿರುವಿರಿ ; ತಮಗ ಸರ್ವದಾ ತತ್ಸವ ಸ್ಪುರಿಸುತ್ತಲೇ ಇರಲಿ' ಎಂದು ಹೇಳಿದನು ೪೪ ಈರೀತಿಯಾಗಿ ಅನುಗ್ರಹಿಸಲ್ಪಟ್ಟ ಶಿವಸಿಷ್ಠ ಮುನಿಯು, ಮಹಾಹರ್ಷಯುಕ್ತನಾಗಿ, ಪುನಃ ಆ ರಾಮನನ್ನು ಕುರಿತು ಅಯ್ಯಾ ! ರಘೋತ್ತಮನೆ, ನಾನು ನಿನ್ನನ್ನು ಮಾತನಾಡಿಸಿ ಕೊಂಡು ಬರುವುದಕ್ಕೋಸ್ಕರ ನಿಮ್ಮ ತಂದೆಯಿಂದ ಕಳುಹಿಸಲ್ಪಟ್ಟಿರುವೆನು, ನಾಳೆಯದಿವಸವೇ ನಿಮ್ಮ ತಂದೆಯು ನಿನಗೆ ರಾಜ್ಯಾಭಿಷೇಕಮಾಡುವನು. ಆದುಕಾರಣ, ನೀನು ಈ ದಿವಸ ಸೀತ ಯೊಡನೆ ಯಥಾಶಾಸ್ತ್ರವಾಗಿ ದೀಕ್ಷೆಯನ್ನು ಧರಿಸಿರಬೇಕು' ಎಂದು ಹೇಳಿದನು. ರಾಜಗುರು ಏರಿದ ಆ ವಸಿಷ್ಠ ಮಹರ್ಷಿಯು, ರಾಮನಿಗೆ ಈರೀತಿಯಾಗಿ ಹೇಳಿಬಿಟ್ಟು, ರಥವನ್ನು ಹತ್ತಿ ಕೊಂಡು, ತನ್ನ ವಾಸಸ್ಥಾನವನ್ನು ಕುರಿತು ಹೊರಟುಹೋದನು ||೪೫-೪೭ ಇದು ಅಯೋಧ್ಯಾಕಾಂಡದಲ್ಲಿ ಶ್ರೀರಾಮ ಪಟ್ಟಾಭಿಷೇಕ ಸನ್ನಾಹವೆಂಬ ಎರಡನೆಯ ಸರ್ಗವ.