ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

C ಅಯೋಧ್ಯಾಕಾಂಡ ಏತತ್ ಕುರು ನರೇನ್ಹಸ್ಯ ವಚನಂ ರಘುನನ್ನ | ಸತ್ಯೇನ ಮಹತಾ ರಾಮ ತಾರಯಸ್ಸ ನರೇಶ್ವರಮ್ |೩| ತದಪ್ರಿಯಮವಿತ್ರಕ್ಷುಃ ವಚನಂ ಮರಣೋಪನಮ್ | ಶು ನ ವಿನ್ಯಥೇ ರಾಮಃ ಕೈಕೇಯಿಮಿದಮಬ್ರವೀತ್ [೪೦ಗಿ ಏವಮಸ್ತು ಗವಿಷ್ಯಾಮಿ ವನೇ ವಸ್ತು ಮಹಂ ಕ್ಷಿತಃ | ಜಟಾಜಿನಧರೋ ರಾಜ್ಞಃ ಪ್ರತಿಜ್ಞಾ ಮನುಪಾಲರ್ಯ ೪೧|| ನಾಹಮರ್ಥಪರೆ ದೇವಿ ಲೋಕಮಾವನ್ನು ಮುತ್ಸಹೇ | ವಿದ್ಧಿ ವಾಮೃಷಿಭಿಸ್ತುಲ್ಯಂ ಕೇವಲಂ ಧರ್ಮಮಾಗ್ರಿತನ 18೦೦ ಇತೀರಯಿತಾ ಪಿತರಂ ರಾವೊ ನಾತಿದುಃಖಿತಮ್ | ಕೈಕೇಯಾಶಾ ಪ್ಯನಾರ್ಯಾಯಾಃ ನಿಕ್ಷಕಾವು ಮಹಾದ್ಯುತಿಃ (8೩|| ಇತಿ ಶಿವದಯೋಧ್ಯಾ ಕಾಣೇ ಶ್ರೀರಾಮಚನ್ನಯ್ಯ ದಣ್ಣ ಕಾರಣ್ಯನಿರ್ಗಮನಪ್ರತಿಜ್ಞಾ ಕಥನಂ ನಾಮ ಸಪ್ತಮಃ ಸರ್ಗಃ,

    • ಎಲೈ ರಘುನಂದನನೆ ! ಇದೇ ನಿಮ್ಮ ತಂದೆಯು ಹೇಳಬೇಕಾಗಿರುವ ಮಾತು ; ಇದನ್ನು ನೀನು ನಡೆಯಿಸುವನಾಗು. ಈ ದೊಡ್ಡ ಸತ್ಯವಾಕ್ಯದಿಂದ, ನಮ್ಮ ಮಹಾರಾಜನನ್ನು ಉತ್ತಾ

ರಣಮಾಡುವನಾಗು. (ಎ೦ದು ಕೈಕೇಯಿಯು ಹೇಳಿದಳು) ॥೩೯॥ - ಹೀಗೆ ಕೈಕೇಯಿಯಿಂದ ಹೇಳಲ್ಪಟ್ಟ ಮರಣಸದೃಶವಾದ ಅಪಿಯವಚನವನ್ನು ಕೇಳಿ, ರಾಮನು ಸ್ವಲ್ಪವೂ ವ್ಯಥೆಪಡಲಿಲ್ಲ; ಆಮೇಲೆ ಕೈಕೇಯಿಂರನ್ನು ಕುರಿತು ಹೀಗೆ ಹೇಳಿದನು|೪od ಅ೦ಬ ! ಹಾಗೆಯೇ ಆಗಲಿ ; ನಾನು ದೊರೆಯ ಪ್ರತಿಜ್ಞೆಯನ್ನು ಪರಿಪಾಲಿಸುತ, ನಟಿ ಯನ್ನೂ ಅಜಿನವನ್ನೂ ಧರಿಸಿಕೊಂಡು, ಅರಣ್ಯವಾಸಕ್ಕಾಗಿ ಇಲ್ಲಿಂದ ಹೊರಟುಬಿಡುವೆನು ೪೧ - ಹೇ ಕೈಕೇಯಿದೇವಿ' ನಾನು ಕೇವಲ ಅರ್ಥಪರನಾಗಿ ಈ ಲೋಕದಲ್ಲಿ ವಾಸಮಾಡಬೇ ಇಂದು ಇಚ್ಛಿಸತಕ್ಕವನಾಗಿಲ್ಲ. ನನ್ನ ನ್ನು, ಕೇವಲ ಧರ್ಮತತ್ಪರನೆಂದೂ ಋಷಿಸದೃಶನೆಂದೂ ತಿಳಿಯುವಳಾಗು ||೪೨|| ಹೀಗೆಂದು ಕೈಕೇಯಿಯೊಡನೆ ಹೇಳಿ, ಅತಿ ದುಃಖಯುಕ್ತನಾಗಿರುವ ತಂದೆಯನ್ನೂ, ಪರಮನೀಚಳದ ಕೈಕೇಯಿಯನ್ನೂ ನಮಸ್ಕರಿಸಿ, ಮಹಾಕಾ೦ತಿಶಾಲಿಯಾದ ಶ್ರೀರಾಮನು ಆ ಕೈಕೇಯಿಯ ಮನೆಯಿಂದ ಹೊರಟವನಾದನು (೪೩ ಇದು ಅಯೋಧ್ಯಾಕಾಂಡದಲ್ಲಿ ಶ್ರೀರಾಮಚಂದ್ರನ ದಂಡಕಾರಣ್ಯಗಮನ ಪ್ರತಿಜ್ಞೆಯೆಂಬ ಏಳನೆಯ ಸರ್ಗವು,