ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ತತ್ವ ಸಂಗ್ರಹ ರಾಮಾಯಣಂ (ಸರ್ಗ ಸಾಕ್ಷಾತ್ ತೃದ್ದರ್ಶನಂ ತ್ಯಕ್ಕಾ, ಯೋನ್ಯತ್ ಕರ್ಮ ಸಮಾಚರೇತ್ | ಪುಸ್ತಂ ನಿಕ್ಷೇಪವುತ್ಮಜ್ಯ ಸಉಪಾದಾನಮಾಚರೇತ್ |೨೫| ಸಂಕೇತನಗರಂ ಗನ್ನುಂ ನೋತ್ಸಹೇ ರಘುನನ್ನ | ತವ ಸಂದರ್ಶನಂ ತ್ಯಕಾ ನೇತ್ರಜೋತ್ಪಾಮನೋಹರಮ್ |೨೬| ಭಕ್ತವತ್ಸಲ ತಿಮ್ಮನ್ನಂ ಛರ್ತಪುತಗತೇ ಪಥಿ || ಭಕ್ತಂ ನೃತ್ಯಂ ಸ್ಥಿತಂ ಸ ತ್ವಂ ನಮಾಂ ಹಾತುಮಿಹಾರ್ಹಸಿ |೨೭|| ಯದಹಂ ನೋಪಚಾರೇಣ ಟ್ರಯಾಂ ಸ್ನೇಹಾದನಿಕಟಃ | ಭಕ್ತಿವಾನಿತಿ ತತ್ ತಾವತ್ ವಾಕ್ಯಂ ತಂ ಕ್ಷನು ಮರ್ಹಸಿ |ovt ಏವಂ ಟು ವಾಣಂ ತಂ ಸತಂ ಸ್ವಪಾದವಿರಹಾತುರಮ್ | ಭಕ್ತಂ ತತ್ಪರೈರ್ವಾಕೃತಿ ಸಾರ್ಯ ರಾಘುವೋಬ್ರವೀತ್ |೨೯|| ಸೂತ ಸೂತ ಮಹಾಬುದ್ದೇ ವೃಥಾ ದೈನೈನ ಕಿಂ ತವ || ದೇಹಯೋಗವಿಯೋಗಾದ್ಯಾಃ ವಸ್ತು ಮಾತ್ರ ಹ್ಯಶಾಶ್ವತಾಃ ೩೦| ಇಂತಹ ನಿನ್ನ ದರ್ಶನವು ಪ್ರತ್ಯಕ್ಷವಾಗಿರುವುದನ್ನು ಬಿಟ್ಟು ಬಿಟ್ಟು ಯಾವನು ಇತರವಾದ ಕರವನ್ನು ಆಚರಿಸುವನೋ, ಅವನು ತನ್ನ ಕೈಗೆ ಸಿಕ್ಕಿರುವ ನಿಧಿಯನ್ನು ಬಿಟ್ಟು ಬಿಟ್ಟು ಉಪಾ ದಾನವನ್ನು ಮಾಡುವನೆಂದು ತಿಳಿಯಬೇಕು ||೨೫|| ಅಯ್ಯಾ ! ರಘುನಂದನ ! ಕಣ್ಣಿಗೆ ಬೆಳೆದಿಂಗಳಂತೆ ಅಪ್ಯಾಯಕವಾಗಿಯ-ಮನಸ್ಸಿಗೆ ಕೇವಲ ಹರ್ಷಜನಕವಾಗಿಯೂ ಇರುವ ನಿನ್ನ ದರ್ಶನವನ್ನು ಬಿಟ್ಟು ಬಿಟ್ಟು -ಅಯೋಧ್ಯಾ ಪಟ್ಟ ಣಕ್ಕೆ ಹೋಗಲು ನಾನು ಸ್ವಲ್ಪವೂ ಮನಸ್ಸುಳ್ಳವನಾಗಿಲ್ಲ ||೨೩|| ಎಲೆ ಭಕ್ತವತ್ಸಲನಾದ ಶ್ರೀರಾಮನ ! ನನ್ನ ಸ್ವಾಮಿಯ ಪುತ್ರನು (ನೀನು) ಹೊರಟ ರುವ ಮಾರ್ಗದಲ್ಲಿ ನಾನೂ ಹೊರಟಿರುವೆನು ; ಇ೦ತಹ ಭಕ್ತನಾಗಿಯ ಕೃತ್ಯನಾಗಿಯೂ ಇರುವ ನನ್ನನ್ನು ಬಿಡುವುದು ನಿನಗೆ ಈಗ ಯೋಗ್ಯವಲ್ಲ |೨೭| ಅಯ್ಯಾ ! ರಾಮಚಂದ್ರ ! ನಾನು ಈಗ ಇಷ್ಟು ಧೈಯ್ಯದಿ೦ದ ಹೇಳಿದ ಮಾತು ಯಾವು ದುಂಟೋ, ಇದು ನಿನ್ನಲ್ಲಿ ಸ್ನೇಹವಿಶೇಷದಿಂದ ಹೇಳಿದುದೆಂದು ತಿಳಿ ; ಇದು ಉಪಚಾರೋಕ್ತಿ, ಯಲ್ಲವೆಂದು ನಂಬಿ, ನಾನು ಹೇಳಿದುದನ್ನು ಕ್ಷಮಿಸುವನಾಗು ೧೨vI ಹೀಗಂದು ಹೇಳುತಿರುವ-ತನ್ನ ಪಾದವಿರಹವನ್ನು ಸಹಿಸಲಾರದವನಾದ-ಭಕ್ತನಾದ ಆ ಸುಮಂತ್ರನನ್ನು, ತತ್ವಬೋಧಕವಾದ ವಚನಗಳಿಂದ ಸಮಾಧಾನಪಡಿಸುತ, ಶ್ರೀರಾಮನು ಹೀಗೆ ಹೇಳಿದನು ||೨೯| ಈ ಸೂತ! ಸೂತ! ಮಹಾಬುದ್ಧಈ ವ್ಯರ್ಥವಾದ ದೈನ್ಯದಿಂದ ನಿನಗೇನು ಪ್ರಯೋ ಜನವಃ ದೇಹದ ರೋಗ ನಿರೋಗ ಮುಂತಾದುವುಗಳು, ಯಾವ ವಸ್ತುವಿನಲ್ಲಿಯೂ ಸುತರ ಶಾಶ್ವತಗಳಲ್ಲ |ael