ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸಗ ಶ್ರೀ ತತ್ವ ಸಂಗ್ರಹ ರಾಮಾಯಣ ಮತಃ ಸರ್ವಮಹಂ ಸರ್ವಂ ಮಯಿ ಸರ್ವಂ ವಿಶದಃ | ಇತಿ ಜಾತ್ರಾ ಭಜೇದ್ಯೋ ಮಾಂ ಸಃ ಶುದ್ಧಾ ಭಕ್ತಿರೂರ್ಜಿತಾ |೩೭|| ಕ್ರಿಯಾವಿಕ್ರಾಪಿ ಮದ್ಭಕ್ತಿ: ಕ್ರಿಯಾಯೋಗಪ್ರಭೇದತಃ || ನವಧೀತ್ಯುನಿತಾ ಭಕ್ತಿ ಸೂತಾಹಂ ವಚ್ಚಿ ತಾಂ ಶೃಣು (೩vi ಕಥಾಶ್ರದ್ದಾ ನಾಮಗಾನಂ ಸ್ಮತಿರ್ಮೆ ಪಾದಸೇವನಮ್ | ಸದಾರ್ಚಾ ವನ್ದನಂ ದಾಸ್ಯಂ ಸಖ್ಯಂ ಶಕ್ಷತ್‌ ಸ್ಟವೇದನಮ್ ೩೯॥ ಮತ್ಕಥಾಶ್ರವಣೇ ಸಕ್ತಾಃ ಬ್ರಹ್ಮ ರುದ್ರಾದಯಃ ಸುರಾಃ || ವಾಲ್ಮೀಕಿರ್ನಾಮ್ಮಿ ನಿರತಃ ಮಾರೀಚಾದ್ಯಾಃ ಸ್ಮತ್ ಮನು [೪op ಮತ್ಪಾದಭಜನೇ ಸೀತಾಭರತಾದ್ಯಾಃ ಪ್ರಕೀರ್ತಿತಾಃ | ಮದರ್ಚನೇ ತು ಶಬರೀ ಸುತೀಕ್ಷಾದ್ಯಾಕ್ಷ ಸದ್ದಿಜಾಃ |80|| ಪೌಲಸ್ಕೋ ಮನ್ನವಾಸರೇ ಮದ್ದಾ ಮಾರುತಿಃ ಸ್ಮೃತಃ | ಸಖ್ಯಕರ್ಮಣಿ ಸುಗ್ರೀವಃ ಜಟಾಯುಃ ಸಕಲಾರ್ಪಣೇ ೪೨।

  • ಈ ಸಮಸ್ತವೂ ನನ್ನಿ೦ದಲೇ ( ರಾಮನಿಂದ) ಹುಟ್ಟಿತು ; ಇದೆಲ್ಲವೂ ನನ್ನಲ್ಲಿಯೇ ಇರು ವುದು ; ಎಲ್ಲವೂ ನಾನೇ; ಎಲ್ಲವೂ ನನ್ನಲ್ಲಿಯೇ ಐಕ್ಯ ಹೊಂದುವುದು ' ಎಂದು ತಿಳಿದುಕೊಂಡು ಯಾವನು ನನ್ನ ನ್ನು ಭಜಿಸುವನೋ, ಅವನ ಆ ಭಕ್ತಿಯು ಪ್ರಶಸ್ತವಾದ ಶುದ್ದ ಭಕ್ತಿಯೆನ್ನಿ ಸುವದು |೩೭||

ಕ್ರಿಯಾವಿಶ್ರವಾದ ಅಶುದ್ದಭಕ್ತಿಯಾದರೋ , ಆಯಾ ಕರಗಳ ಯೋಗಭೇದದಿಂದ ಒಂಭತ್ತು ಬಗೆಯಾಗಿರುವುದೆಂದು ಶಾಸ್ತ್ರಗಳಲ್ಲಿ ಹೇಳಲ್ಪಟ್ಟಿರುವುದು. ಅಯ್ಯಾ ! ಸುಮಂತ್ರ ! ನಾನು ಅದನ್ನು ನಿನಗೆ ಹೇಳುವೆನು,-ಕೇಳು ೦೩V ನನ್ನ ಕಥೆಯನ್ನು ಕೇಳುವುದರಲ್ಲಿ ಶ್ರದ್ದೆಯು, ನನ್ನ ನಾಮಸಂಕೀರನವು, ನನ್ನ ಸ್ಮರಣೆಯು, ನನ್ನ ಪಾದಸೇವನೆಯು, ಸತ್ವದಾ ನನ್ನ ಪೂಜೆಯು, ನನ್ನ ನಮಸ್ಕಾರವು, ನನ್ನಲ್ಲಿ ದಾಸ್ಯವು, ನನ್ನ ಮೈತ್ರಿಯು, ಪುನಃ ಪುನಃ ನನಗೆ ಆತ್ಮಸಮರ್ಪಣಯ;-ಹೀಗೆಂದು ಭಕ್ತಿಯು ನವವಿಧವಾಗಿರುವುದು ||೩೯॥ ನನ್ನ ಕಥಾಶ್ರವಣದಲ್ಲಿ, ಬರುವ ಮೊದಲಾದ ದೇವತೆಗಳು ಆಸಕ್ತರಾಗಿರುವರು; ವಾಲ್ಮೀಕಿಮುನಿಯು ನನ್ನ ನಾಮಕೀತ್ರನೆಯಲ್ಲಿ ನಿರತನಾದವನು ; ಮಾರೀಚ ಮೊದಲಾದವರು ನನ್ನ ಸ್ಮರಣೆಯಲ್ಲಿ ನಿರತರಾದವರು 11೪೦೦ ನನ್ನ ಪಾದಸೇವನೆಯಲ್ಲಿ ಸೀತೆ ಭರತ ಮುಂತಾದವರೆಲ್ಲರೂ ನಿರತರೆಂದು ಪ್ರಸಿದ್ಧರಾಗಿರು ವರು; ನನ್ನ ಪೂಜೆಯಲ್ಲಿ, ಶಬರಿಯ-ಸುಶೀಕ ಮೊದಲಾದ ಬ್ರಾಹ್ಮಣೋತ್ತಮರೂ ನಿರತ ರಾಗಿರುವರು ೧೪೧. ನನ್ನ ನಮಸ್ಕಾರದಲ್ಲಿ ವಿಭೀಷಣನು ನಿರತನಾದವನು; ನನ್ನ ದಾಸ್ಯದಲ್ಲಿ ಆಂಜನೇಯನು ಹೆಸರುಗೊಂಡಿರುವನು; ಸಖ್ಯದಲ್ಲಿ ಸುಗ್ರೀವನು ನಿರತನಾದವನು ; ಸರ್ವಸ್ವಸಹಿತವಾಗಿ ಆತ್ಮಾ ರ್ಪಣ ಮಾಡುವುದರಲ್ಲಿ ಜಟಾಯುವ ನಿರತನಾದವನು (೪೨