ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨] ಅಯೋಧ್ಯಾಕಾಂಡ ಏವಂ ಭಕ್ತಿ ಕ್ರಿಯಾವಿಶಾ ನವಧೀತ್ಯುದಿತು ಮಯಿ || ಏಪಾ ನವಪ್ರಕಾರ ಕನಾದ್ದ ವಿಮುಕ್ತಿದಾ ೪೩೦ ತ್ರಿವಿಧಾ ಗುಂಪಿಕಾಸಿ ಸಕೀ ಸೂತ ರಾಜನೀ || ತಾಮಸೀ ಚೇತಿ ಶಾಭೂಯಃ ಪ್ರತ್ಯೇಕಂ ತ್ರಿವಿಧಾಃ ಸ್ಮೃತಃ ||೪|| ಮದ್ಭಕ್ತಿ ಸಾತ್ವಿಕೀ ಶ್ರೀಧಾ ತಮೋಯುಕ್ತಾ ರಜೋತು || ಸತ್ವಯುಕ್ತಿ ಸೂತೋಕ್ತಾಃ ತಾಸಾಂ ಲಕ್ಷಮುಚ್ಯತೇ |೪| ಯುದ್ಧಕ್ಕಾ ಮಾಂ ವಿವಿತ್ಸನಿ ಸಾಕ್ಷಿ ಸರ್ವಸಾಧನೈಃ | ಮದೇಕನಿರತಾಃ ಪಶ್ಯತ್ ಸಂ ತು ಸಾತ್ವಿಕಸತ್ತಿಕೀ |8|| ಸರ್ವಭೂತೇಷ್ಯಹಮಿತಿ ಸ್ಥಿತಂ ಪ್ರತ್ಯಕ್ಷವತ್ ಸದಾ | ಪರೋಕ್ಷಂ ಭಜತೇ ಭಕ್ತ ಸಂ ತು ರಾಜಸಸಂಕೀ ೪೭| ಸರ್ವಭೂತೇಷು ಮಾಮೇಕಂ ಸಂಸ್ಥೆ ತಂ ತಾರತಮ್ಯತಃ | ಭಕ್ತಾ ಭಜತ್ಯಜಸ್ತಂ ಮಾಂ ಸಂ ಸ್ಯಾತ್ ತಾಮಸಸಾತ್ವಿಕೀ ತಿಳಿvre ಹೀಗೆ ನನ್ನಲ್ಲಿ ಕಿತ್ತಿಯಮಿತವಾದ ಭಕ್ತಿಯು ಒಂಬತ್ತು ಪ್ರಕಾರವಾಗಿರುವುದನ್ನು, ತೋರಿಸಿರುವೆನು. ಈ ಒಂಬತ್ತು ವಿಧವಾದ ಭಕ್ತಿಯ ಕ್ರಮವಾಗಿ ಮೋಕ್ಷವನ್ನು ಕೂಡ ತಕ್ಕುದಾಗಿರುವುದು ||೪೩|| ಅಯ್ಯಾ ! ಸಾರಥಿವರನಾದ ಸುಮಂತ್ರನ ! ಅಶುದ್ಧವಾದ ಭಕ್ತಿಯಲ್ಲಿ ಕ್ರಿಯಮಿತ ಎಂದೂ ಗುಣಮಿಶ್ರವೆಂದೂ ಎರಡುಬಗೆಯೆಂಬುದಾಗಿ ನಾನು ಮೊದಲು ನಿನಗೆ ಹೇಳಿರುವ ನಷ್ಟೆ ! ಅವುಗಳಲ್ಲಿ ಕ್ರಿಯಾವಿಶಭಕ್ತಿಯ ಭೇದಗಳೂ ಗೊತ್ತಾದುವಷ್ಟೆ! ಈಗ ಗುಣಮಿತ್ರ ವಾದ ಭಕ್ತಿಯ ಸ್ವರೂಪವನ್ನು ಹೇಳುವೆನು,ಕೇಳು, ಗುಣಮಿಶಭಕ್ತಿಯು, ಸಾತ್ವಿಕ ರಂಜಸ ತಾಮಸಗಳೆ೦ಬುದಾಗಿ ಮರುಭೇದಗಳುಳ್ಳು ದಾಗಿರುವುದು. ಈ ಮೂರು ಭೇದಗಳಲ್ಲಿಯ ಪುನಃ ಮೂರು ಭೇದಗಳುಂಟೆಂದು ಹೇಳಲ್ಪಟ್ಟಿರುವುದು ೪೪ ಇವುಗಳಲ್ಲಿ, ಸಾತ್ತಿ ಕಭಕ್ತಿಯು, ತಮೋಯುಕ್ತವೆಂದೂ ರಜೋಯುಕ್ತವೆಂದ ಸತ್ತ ಯುಕ್ತವೆಂದೂ ಮೂರು ಭೇದವುಳ್ಳು ದಂದು ಹೇಳಲ್ಪಟ್ಟಿರುವುದು. ಅಯ್ಯ ! ಸುಮಂತ್ರ! ಈಗ ಅವುಗಳ ಲಕ್ಷಣವನ್ನು ಹೇಳುವೆನು ೪೫ ಸತ್ವದಾ ನನ್ನಲ್ಲಿಯೇ ನಿರತರಾದ ನನ್ನ ಭಕ್ತರು, ಯಾವ ಭಕ್ತಿಯಿಂದ, ಸಕಲ ಸಾಧನ ವನ್ನೂ ಸಾತ್ನಿಕಗಳನ್ನಾಗಿಟ್ಟು ಕೊಂಡು, ಪದೇಪದೇ ನನ್ನ ಸ್ವರೂಪವನ್ನು ತಿಳಿಯಬೇಕೆಂದು ಅಪೇಕ್ಷಿಸುವರೋ, ಅದು ಸಾಕ್ಷಿ ಕಸಾತ್ವಿಕ ಭಕ್ತಿಯೆನ್ನಿಸುವುದು ೧೪LI ಪರೋಕ್ಷನಾಗಿರುವ ನನ್ನನ್ನು, ಸತ್ಯಭೂತಗಳಲ್ಲಿಯೂ ವ್ಯಾಪ್ತನಾಗಿರತಕ್ಕವನೆಂದು ತಿಳಿದು, ಸತ್ವದಾ ಪ್ರತ್ಯಕ್ಷನಾಗಿರುವಂತ ಯಾವ ಭಕ್ತಿಯಿಂದ ಭಜಿಸುವರೋ, ಅದು ರಾಭವ ಕಭಕ್ತಿಯೆನ್ನಿಸುವುದು ೪೭11 | ಸತ್ವ ಭೂತಗಳಲ್ಲಿಯೂ ಇರುವ ಅದ್ವಿತೀಯನಾದ ನನ್ನನ್ನು ಯಾವ ಭಕ್ತಿಯಿಂದ ತಾರತ ಮೈಕಲ್ಪನೆ ಮಾಡಿಕೊಂಡು ಭಜಿಸುವರೋ ಅದು ತಾಮಸ ನಿಕಭಕ್ತಿಯೆನ್ನಿಸುವುದು" 13