ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡಕಿ. ೨೭ ಸರ್ವಲೋಕಾಸ್ಪದೀಭೂತವಳತ್ರಯಯುತೋದರಮ್ || ಶ್ರೀವತ್ಸವಕ್ಷಸ ಭಾಜಸುಭಾಲಜ್ಞತೋರಸಮ್ [೧೨ ಆಜಾನುಬಾಹುಂ ಶ್ರೀರಾಮಂ ಪದ್ಯಗರ್ಭಾಭಪಾಣಿನಮ್ | ರತ್ನಕಬ್ಬಿಣಕೇಯರನುದಿಕಾರತ್ನ ಶೋಭಿತಮ್ |೧೩! ಧನುರ್ಬಾಣಧರಂ ದೇವಂ ಕಲ್ಬಚಕ್ರಗದಾಧರಮ್ | ಹಾರನಿಷ್ಠಾ ದಿಶೆಭಾಡ್ಯಂ ಸ್ವರ್ಣಯಜ್ಯೋಪವೀತಿನಮ್ |೧೪| ಮನ್ಯಾರವಾಲಾಗಿತತಂ ದಿವ್ಯಚನನಚರ್ಚಿತಮ್ || ಕುನ್ನಾಗ ಸುದತಂ ಶಾನ್ಯಂ ಸ್ಮಿತಪೂರ್ವಾಭಿಭಾಮಿಣಮ್ ||೧೫|| ಸುನಾಸಂ ಸುಭುವಂ ದೇವಂ ಸುಸ್ಮಿತಂ ಸ್ವಚ್ಛ ವಿಗ್ರಹಮ್ || ವಿಶಾಲಲೋಚನಂ ಭಾಜತ್ಕುಲಾಲತಾನನಮ್ ||೧೬|| ಬಿಂಕನ್ನು ಕಣ್ಣಂ ಚ ನೀತಾಲಿಬ್ ತವಿಗ್ರಹವಮ್ | ಕಸರೀತಿಲಕಾಶೋಭಿನೀಲಾಳಕವೃತಾನನಮ್ ||೧೭|| ಎ 6 ಸರ್ವಲೋಕಗಳಿಗೂ ಆಶಯಭೂತವಾದ ತ್ರಿವಳಿಗಳು ಅವನ ಉದರಪ್ರದೇಶದಲ್ಲಿ ದ್ದು ವು. ಇವನ ಎದೆಯಲ್ಲಿ, ಶ್ರೀವತ್ಸ ಎಂಬ ಚಿಹ್ನೆಯ ಕಸ್ತುಭವೆಂಬ ದಿವ್ಯರತ್ನವೂ ದೇದೀ ಪ್ಯಮಾನವಾಗಿದ್ದು ವು |೧೨| ಆಗ ಆ ಶ್ರೀರಾಮನು, ಆಜಾನುಬಾಹುವಾಗಿಯ-ಕಮಲದ ಮಧ್ಯದಂತೆ ಶೋಭಿಸುವ ಹಸ್ತತಲವುಳ್ಳವನಾಗಿಯೂ ಇದ್ದನು. ರತ್ನ ಮಯವಾದ ಕಂಕಣಗಳಿ೦ದಲೂ ಅಂಗದಗಳಿಂದಲೂ ಮುದಿಕೆಯಿಂದಲೂ ಶೋಭಿಸುತ್ತಿದ್ದನು ರಿ೧೩! ಕೈಯಲ್ಲಿ ಧನುಸ್ಸನ್ನೂ ಬಾಣವನ್ನೂ ಶಂಖಚಕಗಳನ್ನೂ ಧರಿಸಿದ್ದನು. ಎದೆಯಲ್ಲಿ ಮುಕ್ತಾಹಾರಗಳ ಕಾಂತಿಯ, ಕನಕಾಭರಣಗಳ ತೇಜಕ್ಕೂ ಪರಿಪೂರ್ಣವಾಗಿದ್ದು ವು. ಸುವರ್ಣ ಮಯವಾದ ಯಜ್ಯೋಪವೀತವನ್ನು ಹಾಕಿಕೊಂಡಿದ್ದನು ೧೪|| ದಿವ್ಯವಾದ ಮಂದಾರಪುಷ್ಪಮಾಲಿಕಯನ್ನು ಧರಿಸಿಕೊಂಡು, ಸತ್ಸವವಾದ ಗಂಧ ವನ್ನು ಲೇಪನಮಾಡಿಕೊಂಡಿದ್ದನು. ಅವನ ದಂತಗಳು, ಕುಂದಕೊರಕಗಳ ಆಗದಂತೆ ವಿರಾಜಿ ಸುತಿದ್ದುವು. ಅವನು ಶಾಂತನಾಗಿಯ ಮಂದಹಾಸವುರಸ್ಸರವಾಗಿ ಮಾತನಾಡುತ್ತಲೂ ಇದ್ದನು|| ಅವನ ನಾಸಿಕ ಹುಬ್ಬು ಮುಂತಾದ ಅವಯವಗಳೆಲ್ಲ ಸುಲಕ್ಷಣವಾಗಿದ್ದುವು; ಅವನ ಮಂದಹಾಸವು ಸರ್ವರಿಗೂ ಕೇವಸೂಚವಾಗಿಯೂ, ಶರೀರವು ಅತಿ ನಿರಲವಾಗಿಯ, ಕಣ್ಣು ಗಳು ವಿಶಾಲಗಳಾಗಿಯೂ, ಮುಖವು ಪ್ರಕಾಶಮಾನವಾದ ರತ್ನ ಕುಂಡಲಗಳಿಂದ ಅಲಂಕೃತವಾ ಗಿಯೂ ಇದ್ದು ವು ||೧೬|| ಅವನ ಓಷ್ಣವು ಬಿಂಬಫಲ (ತೊಂಡೆಯ ಹಣ್ಣು) ದಂತೆಯೂ, ಅವನ ಕಂಠವು ಶಂಖದಂತೆ ವರುಶವಾಗಿಯೂ ಶೋಭಿಸುತ್ತಿದ್ದುವು. ಶ್ರೀ ಸೀತಾದೇವಿಯು ಅವನನ್ನಾ ಲಂಗಿಸಿದ್ದಳು, ಕಪ್ಪ ಗಿರುವ ಮುಂಗುರುಳುಗಳಿಂದ ವ್ಯಾಪ್ತವಾದ ಅವನ ಮುಖವು, ಕಸ್ತೂರೀತಿಲಕದಿಂದ ಶೋಭಿ ಸುತಿದ್ದಿತು (೧೭॥