ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫) ಆಯೋಧ್ಯಾಕಾಂಡ ಸುಮನ ಬಹಿ ರಾಜಾನಂ ಶೋಕಸೆ ನ ತು ಮತ್ತೇ | ಸಂಕೇತದಧಿಕಂ ಸೌಖ್ಯಂ ವಿಏನೇಪಿ ಭವಿಷ್ಯತಿ |೬|| ಮಾತುರ್ಯ ವನ್ನನಂ ಹಿ ಶೋಕ ತ್ಯಜತು ಮತ್ತೇ | ಆಶ್ವಾಸಯತು ರಾಜಾನಂ ವೃದ್ಧಂ ಶೋಕಪರಿಪ್ಪತಮ್ |೬|| ಇತಿ ಸಂದಿಶ್ಯ ಮಾಂ ರಾಮೋ ಲಕ್ಷಣೇ ಶೃತಿ ಸೂಯಮ್ | ಗುಹೇನಾನೀತಾ ನಾವಾ ಜಾಹ್ನವೀಮತರಚ್ಚು ಭಾಮ್ !v! ಯಾವದ್ದ ಬ್ಲಾಂ ಸಮುರ್ಯ ಗತಾಸು ವದಹಂ ಸ್ಥಿತಃ | ತತೋ ದುಃಖೇನ ಮಹತಾ ಪುನರೇವಾಹವಾಗತಃ |F ಇತಿ ಸೂತವಚಃ ಶ್ರುತ್ತಾ ರುರೋದ ಶನರ್ಕೈಪಃ | ಕೌಸಲ್ಯಾಪಿ ಚ ದುಃಖಾರ್ತಾ ಪಳಪುಮುಪಚಕವ ||೧೦|| ಗಜರಾಜಗತಿರ್ವಿರೋ ಮಹಾಬಾಹುರ್ಧನುರ್ಧರಃ | ವನವಾವಿಶತೇ ನೂನಂ ಸಹಭಾರ್ಯಃ ಸಲಕ್ಷ್ಮಣಃ [೧೧] ವನೇ ತದೃಷ್ಟ ದುಖಾನಾಂ ಕೈಕೇಯ್ಯನುಮತೇ ತ್ವಯಾ | ತ್ಯಾನಾಂ ವನವಾಸಾಯ ಕಾನ್ಯವಸ್ಥಾ ಭವಿಷ್ಯತಿ ||೧೦|| ಅವನು ಹೇಳಿದುದೇನೆಂದರೆ:-ಅಯ್ಯಾ' ಸುಮಂತ್ರ ! ನನಗೋಸ್ಕರ ದುಃಖಪಡಕೂಡ ದೆಂದೂ, ನನಗೆ ಅರಣ್ಯದಲ್ಲಿಯೂ ಅಯೋಧ್ಯೆಗಿಂತ ಹೆಚ್ಚಾಗಿ ಸುಖವುಂಟಾಗುವುದೆಂದೂ, ನೀನು ನನ್ನ ತಂದೆಗೆ ವಿಜ್ಞಾಪಿಸು |೬|| ನನ್ನ ತಾಯಿಗೆ ನನ್ನ ನಮಸ್ಕಾರಗಳನ್ನು ತಿಳುಹಿಸು. ಅವಳು ನನಗೋಸ್ಕರ ದುಃಖಪ ಡದಂತೆ ಮಾಡು. ಆವಳು, ವೃದ್ಧನಾಗಿಯೂ ಶೋಕಪರಿವ್ರತನಾಗಿಯೂ ಇರುವ ಮಹಾರ ಜನನ್ನು ಸಮಾಧಾನಪಡಿಸಲಿ ||೭|| ಹೀಗೆಂದು ನನಗೆ ಹೇಳಿ, ಲಕ್ಷಣನು ಕೇಳುತ್ತಿರುವಾಗಲೇ, ಗುಹನಿಂದ ತರಿಸಲ್ಪಟ್ಟ ನಾವೆಯದ್ಯಾರಾ, ಆ ಶ್ರೀರಾಮನು ಶುಭತಮವಾದ ಗಂಗಾನದಿಯನ್ನು ದಾಟಿ ಹೊರಟು ಹೋದನು [vu ಅವರೆಲ್ಲರೂ ಗಂಗೆಯನ್ನು ದಾಟಿ ಹೋಗುವವರೆಗೂ ನಾನು ತೀರದಲ್ಲಿಯೇ ನಿಂತಿದ್ದನು. ಅವರೆಲ್ಲರೂ ಕಣ್ಣಿಗೆ ಕಾಣದಂತ ಹೊರಟುಹೋದಬಳಿಕ, ನಾನು ಮಹಾದುಃಖದಿಂದ ಶನಃ ಹಿಂದಿರುಗಿ ಇಲ್ಲಿಗೆ ಬಂದನು. (ಎಂದು ಸುಮಂತನು ಹೇಳಿದನು) ೧೯॥ ಹೀಗೆ ಹೇಳಿದ ಸುಮ೦ತನ ಮಾತನ್ನು ಕೇಳಿ, ದಶರಥನು ಮೆಲ್ಲಗೆ ರೋದನಮಾಡಿದನು. ಕೌಸಲೆಯೂ ಕೂಡ, ಮಹಾದುಃಖಪೀಡಿತಳಾಗಿ ಹೀಗ ಅಳುವುದಕ್ಕುಪಕ್ರಮಿಸಿದಳು Unel ಮತ್ತಗಜಗಾಮಿಯಾಗಿಯೂ ಮಹಾಬಾಹುವಾಗಿಯೂ ಧನುರ್ಧರನಾಗಿಯೂ ಇರುವ ಆ ಮಹಾವೀರನಾದ ರಾಮನು, ಹೆಂಡತಿಯೊಡನೆಯ ಲಕ್ಷಣನೊಡನೆಯೂ ಈಗ ನಿಶ್ಚಯ ವಾಗಿ ಅರಣ್ಯವನ್ನು ಪ್ರವೇಶಿಸುವನು ||೧೧||

  • ಎಲ್ ಕೈಕೇಯಿ ! ನಿನ್ನ ಇಷ್ಟಾನುಸಾರವಾಗಿ ಅರಣ್ಯವಾಸಕ್ಕೆ ಕಳುಹಿಸಲ್ಪಟ್ಟಿರುವ ಜನ್ಮಾರಭ್ಯ ದುಃಖವನ್ನು ಕಾಣದ ಆ ಸೀತಾರಾಮಲಕ್ಷ್ಮಣರಿಗೆ, ಅರಣ್ಯದಲ್ಲಿ ಎಂತಹ ಕಷ್ಟದ ಯುಂಟಾಗುವುದೂ ! ೧೨||