ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ ಶ್ರೀತತ್ವ ಸಂಗ್ರಹ ರಾಮಯಣಂ [ಸರ್ಗ ಅಥ ಶ್ರೀಮದಯೋಧ್ಯಾಕಾ ಏಕವಿಂಶಃ ಸರ್ಗ ಶೃಇನ್ನು ಮೇ ಪರಿಪದಃ ಶ್ರೇಯೋ ಮನ್ನಿಸ್ತಥಾ || ಆರ್ಯ೦ ಪರಮಧರ್ಮಜ್ಞ ನಾನುಆನಾಮಿ ರಾಘುವನು | ನ ಯಹೇ ಪಿತರಂ ರಾಜ್ಯಂ ನಾನುಶಾಸನವಿ ಮಾತರಮ್ fall ಯದಿ ತವಶ್ಯಂ ವಸ್ತವ್ಯಂ ಕರ್ತವ್ಯಂ ಚ ಪಿತುರ್ವಜಃ | ಅಹಮೇವ ಹಿ ವತ್ತು ಮಿ ಚತುರ್ದಶಸವಾವಸೇ |೨| ನ ಚೇಕ್ ಪ್ರಾಯೋಪವೇಶೇನ ತ್ಯಕ್ಷಾ ಮೈತತ್ ಕಳೇಬರವಮ್ | ಭರತಖ್ಯಾತಿನಿರ್ಬಸ್ಥಂ ದೃಪ್ಪಾ ರಾಮೋತಿವಿಸ್ಮಿತಃ || ನೇತ್ರಾನ್ನಸಂಜ್ಞಾಂ ಗುರವೇ ಚಕಾರ ರಘುನನ್ನನಃ ೪೫ ತತ್ಸಮ್ಮೇತಂ ಗುರುರ್ಜ್ಞಾತ್ರಾ ಗೃಹೀತಾನ್ಯತ ತ ಯ | ಏಕಾನೇ ಭರತಂ ಶಹ ವಸಿ ಜ್ಞನಿನಾಂ ವರಃ | ಅಯೋಧ್ಯಾಕಾಂಡದ ಹತ್ತೊಂಭತ್ತನೆಯ ಸರ್ಗವು. - -+++ ಆಗ ಭರತನು ಹೇಳಿದುದೇನಂದರೆ :- ನಾನು ಹೇಳುವ ಮಾತನ್ನು, ಸಮಸ್ಯೆ ಸಭಾಸದರೂ ಪೌರಮುಖರೂ ಮಂತ್ರಿವರರೂ ಕೇಳಬೇಕು. ಧರಜ್ಞರಲ್ಲಿ ಅಗ್ರಗಣ್ಯನಾಗಿರುವ ಪೂಜ್ಯನಾದ ಶ್ರೀರಾಮನು ಅರಣ್ಯವಾಸ ಮಾಡುವುದನ್ನು, ನಾನು ಸುತರಾಂ ಒಪ್ಪಿದವನಲ್ಲ; ನಮ್ಮ ತಂದೆಯನ್ನು ನನಗೆ ರಾಜ್ಯ ಕೊಡಬೇ ಇಂದು ಪ್ರಾರ್ಥಿಸಿದವನೂ ಅಲ್ಲ; ನಮ್ಮ ತಾಯಿಯನ್ನು ಇದಕ್ಕಾಗಿ ನಾನು ಪ್ರೇರಿಸಿಯ ಅಲ್ಲ ಹೀಗಿದ್ದರೂ, ಅರಣ್ಯವಾಸವನ್ನು ಅವಶ್ಯವಾಗಿ ಮಾಡಿಯೇ ತೀರಬೇಕಾಗಿದ್ದ ಪಕ್ಷದ ಲ್ಲಿಯೂ, ತಂದೆಯ ಮಾತನ್ನು ನಡಯಿಸಿಯೇ ತೀರಬೇಕಾಗಿದ್ದ ಪಕ್ಷದಲ್ಲಿಯೂ, ಈ ಹದಿನಾಲ್ಕು ವರ್ಷಕಾಲ ನಾನೇ ಅರಣ್ಯದಲ್ಲಿ ವಾಸಮಾಡಿಕೊಂಡಿರುವೆನು. ನಮ್ಮ ಅಣ್ಣನು ಅಯೋಧ್ಯೆಗೆ ಹೋಗಿ ರಾಜ್ಯಭಾರ ಮಾಡಿಕೊಂಡಿರಲಿ. ಇದಕ್ಕೆ ಸಮ್ಮತಿಸದಿದ್ದರೆ, ನಾನು ಅಲ್ಲಿಯೇ ಪ್ರಾಯೋ ಸವೇಶ(ಉಪವಸವಾಗಿ ಮಲಗುವುದು)ದಿಂದ ಈ ದೇಹವನ್ನು ಬಿಟ್ಟು ಬಿಡುವನು. (ಎಂದು ಭರತನು ಹೇಳಿದನು) -2 ಹೀಗೆ ಭರತನು ಅತಿಯಾಗಿ ನಿರ್ಬ೦ಧಮಾಡುತ್ತಿರುವುದನ್ನು ನೋಡಿ, ಅತಿಯಾಗಿ ಆಶ್ಚರ ಪಟ್ಟ ಶ್ರೀರಾಮಚಂದ್ರನು, ಗುರುವಾದ ವಸಿಷ್ಠ ಮಹರ್ಷಿಗೆ ಕರಗಣ್ಣಿನಿಂದ ಸನ್ನೆ ಮಾಡಿದನು | ಆಗ, ಜ್ಞಾನಿಗಳಲ್ಲೆಲ್ಲ ಪ್ರಶಸ್ತವಾದ ವಸಿಷ್ಠ ಮಹರ್ಷಿಯು, ಅದರ ಸಂಕೇತವನ್ನು ತಿಳಿದ ವನಾಗಿ, ಭರತನನ್ನು ಬೇರೆಕಡೆಗೆ ಕರೆದುಕೊಂಡು ಹೋದನು. ಅಲ್ಲಿ, ಏಕಾಂತವಾಗಿ ಭರತನಿಗೆ ಈರೀತಿಯಾಗಿ ಉಪದೇಶಮಾಡಿದನು ।।