ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡ, ತತೋ ನಾನೇವ ತತ್ತತಂ ಭಾತ್ಯರ್ಥಸ್ತು ವಿಚಾರತಃ || ಗಾಯತ್ರು ಕಂ ತು ಯತ ತತ್ತ್ವಂ ತದೇವಾಸ್ಕೃತಿ ನಿಂrಯಃ ||೧೧|| ಗುಪಯಊಚುಃ | ಸೂತಸೂತ ಮಹಾಪಜ್ಞ ತಾದೃಶಾನಾಂ ಮಹಾತ್ಮನಾವತ್ | ಕೃತ್ಯಂ ನ ವಿದ್ಯತೇ ಸ್ವಾರ್ಥ, ಲೋಕಾನುಗ್ರಹವನ್ತರಾ |೧೨|| ತಸ್ಮಾದ್ರಾಮಾಯಣ ಸೂತ ಮುನ್ನ ಬೀಜಾನಿ ಯಾನ್ಯಲಮ್ || ಕುತ್ರಕತ್ರ ಸ್ಥಾಪಿತಾನಿ ತಾನ್ಯಾಚಕ್ಷು ಯಥಾಕ್ರಮವಮ್ ||೧೩|| ಪದಶೋಕ್ಷರಶಸ್ಥಾರ್ಥ ಗಾಯತ್ರಾಹಿ ನೋ ಯಥಾ | ಶ್ರೀಮದ್ರಾಮಾಯಣೇ ಯೋರ್ಥಃ ಸ್ಸುರೇದರ್ಥಕ್ಷ ಗೋಪಿತಃ |೧೪| ಸೂತಉವಾಚ, ಗುಹ್ಯಮೇತದ್ಭವಂ ನ ವಾಚ್ಯಂ ಯಸ್ಯಕಸ್ಯಚಿತ್ | ತಥಾಪಿ ವಕ್ಷ ವಃ ಪ್ರೀತ್ಯಾ ಯಥಾಶ್ರುತಮಹಂ ದ್ವಿಜಾಃ |೧೫| ಗುಣಾಡ್ಯತ್ವಂ ಕಾರಣತ್ವಂ ಶರಣ್ಯಕ್ಷ ಪ್ರಕಾಶತಾ || ಪ್ರಕಾಶಿತ್ವಂ ಚ ನಿಖಿಲೈಃ ಧೈಯತ್ನಂ ಚ ನಿಯತಾ || ಏತೇ ಬ್ರಹ್ಮಗುಣಾನಿತ್ಯಾಃ ಗಾಯತ್ರಿಪದಬೋಧಿತಾಃ ||೧೬|| ಅದು ಕಾರಣ, ಇದರ ತತ್ವವ ನಾನಾವಿಧವಾಗಿರುವಂತೆ ತೋರುವುದು. ಆದರೆ, ವಿಚಾರ ಮಾಡಿ ನೋಡುವಾಗ, ಗಾಯತ್ರಿಯಿಂದ ಉಕ್ತವಾಗುವ ತತ್ವವಾವುದೋ-ಅದೇ ಈ ರಾಮಾ ಯಣದ ಅರ್ಥವೆಂದು ನಿಶ್ಚಯವ್ರಂಟಾಗುವುದು ೧೧ ಋಷಿಗಳು ಹೇಳುವರು : ಎಲೈ ಸೂತನೆ! ಮಹಾಪ್ರಾಜ್ಞನೆ ! ನಿಮ್ಮಂತಹ ಮಹಾತ್ಮರಿಗೆ, ಲೋಕಾನುಗ್ರಹವನ್ನು ಬಿಟ್ಟು-ಸ್ವಾರ್ಥವಾದ ಕಲಸವೊಂದೂ ಇರುವುದಿಲ್ಲ ೧೧೨೧ ಅದುಕಾರಣ, ರಾಮಾಯಣದೊಳಗೆ ಯಾವಯಾವ ಸ್ಥಳದಲ್ಲಿ ಯಾವಯಾವ ಮಂತ್ರ ಬೀಜಗಳು ಇಡಲ್ಪಟ್ಟಿರುವುವು ? ಅವುಗಳನ್ನು ಯಥಾಕ್ರಮವಾಗಿ ನಮಗೆ ಹೇಳುವವನಾಗು 1 ಗಾಯತ್ರಿಯ ಪದಪದಕ್ಕೂ ವರ್ಣವರ್ಣಕ್ಕೂ ಹೇಗೆ ಅರ್ಥವಿದೆಯೋ ಅದನ್ನೂ, ಶ್ರೀಮ ಪ್ರಾಮಾಯಣದಲ್ಲಿ ಯಾವ ಅರ್ಥವಿದೆಯೋ ಅದನ್ನೂ, ಅಲ್ಲಿರುವ ರಹಸ್ಯಾರ್ಥವನ್ನೂ ನಮಗೆ ಹೇಳುವವನಾಗು ೧೪| ಸೂತರು ಹೇಳುವರು:- ಅಯ್ಯಾ ! ಬಾಹ್ಮಣರಾ! ನೀವು ಕೇಳಿದ ಈ ಪ್ರಶ್ನೆಯು ಅತಿ ರಹಸ್ಯವಾದುದು; ಸಾಮಾ ನ್ಯವಾಗಿ ಯಾರೊಬ್ಬರಿಗೂ ಹೇಳಲ್ಪಡತಕ್ಕುದಲ್ಲ. ಆದರೂ, ನಿಮ್ಮ ವಿಷಯದಲ್ಲಿ ಪ್ರೀತಿಯಿರು ವುದರಿಂದ, ನಾನು ಹೇಗೆ ಕೇಳಿರುವೆನೋ ಹಾಗೆಯೇ ಹೇಳುವೆನು ೧೫ ಗುಣಾಡ್ಯತ್ವ, ಕಾರಣತ್ವ, ಶರಣ್ಯತ್ವ ಪ್ರಕಾಶಕತ್ವ, ಪ್ರಕಾಶಿತ್ವ, ಸಲ್ವೆಧೇಯತ್ವ, ನಿಯಾ ಮಕತ್ವ,-ಇವಿಷ್ಟೂ ಪರಬ್ರಹ್ಮನಲ್ಲಿರುವ ಗುಣಗಳು. ಇವುಗಳೆಲ್ಲವೂ ಗಾಯತ್ರಿಯ ಪದ ಗಳಿಂದ' ಬೋಧಿಸಲ್ಪಟ್ಟಿರುವುವು ೧೬೧