ಅಯೋಧ್ಯಾಕಾಂಡಃ ನಿರ್ದಯೋ ಧರ್ಮರಹಿತ ದೀರ್ಘಕಾಯೋ ದೀರ್ಘಬಾಹುಃ ಚೋರವೇಪಸಮನ್ವಿತಃ ೩೯॥ ಶನೈಶ್ಯನೈಃ ಸ ಕುಇನಾಂ ಪಾರ್ಶ್ವಭಾಗೇಭಿಸಣ್ಣ೯ || ಆಕಣ೯ಪೂರ್ಣಬಾಣ ಸಾಕ್ಷಾತ್ಯುರಿವಾಗತಃ |೪೦) ಉಜ್ಜಲಾಬ್ದಾಣ ಮಹಾಭಾರ್ಗಾ ಸೂಠ್ಯಪಾವಕವರ್ಚಸಃ | ಸಪ್ತರ್ಷಿ೯ ಸ ದದರ್ಕಾಿ ಧೃತಹಸ್ತಕ್ಷವಾಲಿರ್ಕಾ ||೪|| ದೃಷ್ಟೆದೃಶೋ ಮಹಾಭಾರ್ಗಾ ಆನನ್ನ ಪರಿಸ್ಮೃತಃ |೨| ಅರ್ತಾ ವಿಪ್ರವೇಷರ್ಸ್ಥ ಮಹಾದ ವ್ಯಾಪಹಾರಿಣಃ || ಮವು ಚಾಪಚ್ಯುತೈರ್ಬಾಃ ಹನಿಷ್ಮೆ ನೇಹ ಸಂಶಯಃ |೩| ದ್ರವ್ಯಂ ಬಹು ಸುಲಬ್ಬಂ ಮೇ ಕುಟುಷ್ಟುಭರಕ್ಷಮಮ್ || ಇತಿ ಬ್ರುರ್ವ ಪುಳಿನ್ನೋ ಹಿ ತೇಷಾಂ ದೃಷ್ಟಿ ಪಥಂ ಗತಃ |886 ಆ ಬೇಡನು, ಸುತರಾಂ ನಿರ್ದಯನಾಗಿದ್ದನು ; ಯಾವ ಧರವನ್ನೂ ಅವನು ಸ್ವಲ್ಪವೂ ಯೋಚಿಸುತ್ತಿರಲಿಲ್ಲ ; ಕೇವಲ ಹಿಂಸಾಪರನಾಗಿದ್ದನು ; ಯಾವುದನ್ನು ಕಂಡರೂ ಕತ್ತರಿಸುತಿ ದ್ದನು, ದೊಡ್ಡ ದೇಹವುಳ್ಳವನಾಗಿಯೂ, ದೀರ್ಘಬಾಹುವಾಗಿಯೂ ಇದ್ದನು; ಖಡ್ಗವನ್ನೂ ತೂಣೀರವನ್ನೂ ಧನುಸ್ಸನ್ನೂ ಧರಿಸಿದ್ದನು, ಪಿಂಗಳ(ಹೊಂಬಣ್ಣ) ನೇತ್ರನಾಗಿಯ, ಬಲು ಕೆಟ್ಟವನಾಗಿಯ, ಕರನಾಗಿಯೂ, ಚೋರರಿಗುಚಿತವಾದ ವೇಷವನ್ನು ಧರಿಸಿದವನಾಗಿಯೂ ಇದ್ದನು |೩೯ - ಇಂತಹ ಆ ವ್ಯಾಧನು, ಮೆಲ್ಲಮೆಲ್ಲಗೆ ಪೊದೆಗಳ ಮಗ್ಗುಲಿನಲ್ಲಿ ಸಂಚರಿಸುತ, ಕರ್ಣಪದ್ಯಂತ ವಾಗಿ ಬಾಣವನ್ನು ಸೆಳೆದು ಹಿಡಿದುಕೊಂಡು, ಸಾಕ್ಷಾತ್ತಾಗಿ ಮೃತ್ಯುದೇವತೆಯೋಪಾದಿಯಲ್ಲಿ ಅಲ್ಲಿಗೆ ಬಂದನು ||೪ol ಆಗ, ಮಹಾಪ್ರಕಾಶವಾದ ಶರೀರವುಳ್ಳವರಾಗಿಯೂ ಅಗ್ನಿ ಸರಸದೃಶವಾದ ತೇಜಸ್ಸು ಇವರಾಗಿಯ ಕೈಯಲ್ಲಿ ಜಪಸರವನ್ನು ಹಿಡಿದುಕೊಂಡಿರುವರಾಗಿಯೂ ಇದ್ದ ಮಹಾನುಭಾವ ರಾದ ಸಪ್ತರ್ಷಿಗಳನ್ನು ಕಂಡನು ೧೪೧|| ಇಂತಹ ಆ ಸಪ್ತರ್ಷಿಗಳನ್ನು ಕಂಡು, ಆ ವ್ಯಾಧನು, ಆನಂದಯುಕ್ತನಾಗಿ “ ಇವರು ಯಾರೋ ಬ್ರಾಹ್ಮಣವೇಷಹಾಕಿಕೊಂಡು ಹೆಚ್ಚಾಗಿ ಧನವನ್ನು ಅಪಹರಿಸಿಕೊಂಡು ಹೋಗುತಿ ರುವರು, ಇವರನ್ನು ಈಗ ನನ್ನ ಧನುಸ್ಸಿನಿಂದ ಬಾಣಗಳನ್ನು ಬಿಟ್ಟು ಹೊಡೆಯುವನು, ಇದ ರಲ್ಲಿ ಸ್ವಲ್ಪವೂ ಸಂಶಯವಿಲ್ಲ. ನನ್ನ ಕುಟುಂಬವನ್ನೆಲ್ಲ ಚೆನ್ನಾಗಿ ಕಾಪಾಡುವುದಕ್ಕೆ ಸಾಕಾದಷ್ಟು ಅಧಿಕವಾದ ದ್ರವ್ಯವು ಈಗ ನನಗೆ ಸಿಕ್ಕಿತು. ” ಎಂದು ಹೇಳುತ, ಆ ಸಪ್ತರ್ಷಿಗಳ ಕಣ್ಣೆದುರಿಗೆ ಹೋದನು ೧೪೨-೪೪||
ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೮೩
ಗೋಚರ