ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಗ್ರಹ ರಾಮಾಯಣಂ [ಸರ್ಗ {ಸರ್ಗ ಅಭೂತ ತತ್ ಕ್ರನು ಜಪ್ಪುಃ ನಾಹಂ ವಕ್ತುಂ ಫಲಂ ಕ್ಷಮಃ|೨೭|| ವಿಪ್ರೊ ಸರ್ವಾಣಿ ನಾಮಾನಿ ಕ್ರಮೊಕ್ಕಫಲದಾನ್ಯಲು | ರಾಮನಾವು ತು ಭಕ್ತಾನಾಂ ಕ್ರಮಾಕ್ರಮವಿಮುಕಿದನು ೨| ಸರ್ವನಾಮಾಮ ವಿಷ್ಣುಃ ಮುಖಮೇಕಂ ಫಲಂ ಪ್ರತಿ | ರಾಮನಾವು ತು ಜಣಾಂ ರಾಮವತ್ ಸರ್ವತೋಮುಖಮ್ |೨೯|| ವ್ಯತ್ಯಸ್ತಂ ವಾ ಸಮಸ್ತಂ ವಾ ರಾಮನಾಮ ಸ್ಮರೇತ ಯಃ | ತಜ್ಞನ್ಮನಃ ಫಲಂ ತತ್ ಸ್ಯಾತ್ ಅನ್ಯಥಾ ಪಶುರೇವ ಸಃ ॥೩೦ ಸರ್ವೇ ಶಬ್ಬಾವು ಮೋಕಾಃ ನಿರರ್ಥಾರಾಮನಾವು ತು | ಮಕ್ರಮೇಕಂ ವಾ ಫಲದಂ ಕ್ಷುದಣ್ಣವರ್ ೩೧|| ಅಕಾರಾಕಾರಯುಗಳ ಮುಕಾರೈರ್ಗುಣನರ್ತಯಃ | ಪ್ರೊ ರೇಫ ಬ್ರಹ್ಮ ಮರ್ತಿಕಾರಮುಚ್ಯತೇ |೩೦| ಕ್ರ ~ ನೀಚನಾದ ವ್ಯಾಧನ ಕೂಡ ಮುನಿಶ್ರೇಷ್ಠನಾದನು. ಹೀಗಿರುವಾಗ, ಅದನ್ನು ಕ್ರಮವಾಗಿ ಜಪಮಾಡಿದವರಿಗೆ ಉಂಟಾಗುವ ಫಲವನ್ನು ಹೇಳಲು ನಾನು ಸಮರ್ಥ ನಲ್ಲ |೨೭|| ಶಿಮಹಾ ವಿಷ್ಣುವಿನ ಸಕಲ ನಾಮಗಳೂ ಕ್ರಮವಾಗಿ ಉಚ್ಚರಿಸಲ್ಪಟ್ಟರೆ ಫಲವನ್ನು ಕೊಡುವವ, ಶ್ರೀರಾಮನಾಮವಾದರೆ, ಕ್ರಮವಾಗಿಯಾಗಲಿ-ಅಮವಾಗಿಯಾಗಲಿ ಹೇಗೆ ಜಪಿಸಲ್ಪಟ್ಟರೂ, ಮೋಕ್ಷವನ್ನು ಕೊಡತಕ್ಕುದಾಗಿರುವುದು " ೨೪|| ಹೀಗಿರುವುದರಿಂದ, ಸಮಸ್ತ ನಾಮಜಪಗಳಿಗೂ ಫಲವನ್ನು ಕೊಡುವ ವಿಷಯದಲ್ಲಿ ವಿಷ್ಣು ವೊಂದೇ ಮುಖವಿರುವುದು. ರಾಮನಾಮವಾದರೂ, ಜಪವಚತಕ್ಕವರಿಗೆ ರಾಮನಂತೆಯೇ ಸತ್ವತೋಮುಖವಾಗಿ ಫಲಪ್ರದವಾಗುವುದು |೨೯| ಯವನು ವ್ಯತ್ಯಸ್ತವಾಗಿಯಾದರೂ ಕ್ರಮವಾಗಿಯಾದರೂ ರಾಮನಾಮವನ್ನು ಸ್ಮರಿ ಸುವನೋ ಅವನ ಜನ್ಮಕ್ಕೆ ಅದೇ ಫಲವಾಗುವುದು; ಇಲ್ಲದಿದ್ದರೆ, ಅವನು ಪಶುಸಮಾನನೆಯೇ ॥ ಪ್ರಪಂಚದಲ್ಲಿ ಸಮಸ್ಯೆ ಶಬ್ದಗಳೂ ವ್ರುತ್ಯ ಮವಾಗಿ ಉಚ್ಚರಿಸಲ್ಪಟ್ಟರೆ ನಿಪ್ಪಲಗಳಾಗು ವುವು; ರಾಮನಾಮವಾದರೋ, ಕ್ರಮವಾಗಿ ಉಚ್ಚರಿಸಲ್ಪಟ್ಟ ರೂ ವ್ಯತ್ಯಸ್ತವಾಗಿ ಉಚ್ಚರಿಸಲ್ಪ ಟ್ಟರೂ, ಫಲವನ್ನು ಕೊಡುವುದು, ಕಬ್ಬನ್ನು ಕ್ರಮವಾಗಿ ತಿ೦ದರೂ, ತಲೆಕೆಳಗಾಗಿ ತಿಂದರೂ, ಅದರ ಮಧುರವೇಕರೀತಿಯಾಗಿರುವುದಲ್ಲವೆ ! ಇದರಂತೆಯೇ, ಈ ರಾಮನಾಮವೂ ಹೇಗೆ ಜಪಿ ಸಲ್ಪಟ್ಟ ರೂ ಮುಕ್ತಿಯನ್ನು ಕೊಡತಕ್ಕುದೆಂದು ತಿಳಿಯಬೇಕು ||೩೧|| ( ರಾಮ' ಎಂಬ ಶಬ್ದವನ್ನು ವ್ಯತ್ಯಸ್ತವಾಗಿ ( ಮರಾ' ಎಂದು ಉಚ್ಛರಿಸಿದರೆ, ಆಗ ಅದರಲ್ಲಿರುವ ಆಕಾರ ಆಕಾರ ಮಕಾರಗಳು ಬ್ರಹ್ಮ ವಿಷ್ಣು ಮಹೇಶ್ವರರೆಂಬ ತ್ರಿಮೂರ್ತಿಗಳನ್ನು ಹೇಳುವುವು. ರ” ಎಂಬ ಅಕ್ಷರದಿಂದ, ಈ ತ್ರಿಮೂರ್ತಿಗಳಿಗೂ ಕಾರಣಭೂತವಾದ ಪರಬ್ರ ಹೂವು ಹೇಳಲ್ಪಡುವುದು. ಅಂತು, ರಾಮನಾಮವು ತ್ರಿಮೂರ್ತಿಗಳನ್ನೂ ಪರಬ್ರಹ್ಮವನ್ನೂ ಹೇಳುವುದೆಂದು ಸ್ಪಷ್ಟವಾಯ್ತು ||೩೨|