ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩) ಅಯೋಧ್ಯಾಕಾಂಡ ಯದ್ಯದಿಭೂತಿಮರೂಪಂ ರಾಮಸ್ಯ ಪರಮಾತ್ಮನಃ | ತತ ದೂವಾನುರೂಪಂ ತಂ ತಸ್ಯತನ್ಯಾಸಿ ಭಾಮಿನಿ [೪೪] . ಪುಂರೂಪೋ ರಾಘವಃ ಶ್ರೀರ್ಮಾ ರೂಪ ತ್ವಂ ಚ ಜಾನಕಿ | ಪರಬ್ರಹ್ಮ ದ್ರೋಧಾಭೂತಂ ಪುಂಭೇದೇನ ವರ್ತತೇ ||೪| ರಾಮೋ ರಾವಣಹನಾ ತು ತಂ ಶತಾನನನಾಶಿನೀ || ತವ ರೂಪಂ ವಿಜಾನಾಸ್ತಿ ತ್ಯಮೇವ ಜನಕಾತ್ಮಜೇ [೪೬| ಇತಿ ಸಂಸ್ತುತ್ಯ ತಾಂ ಸೀತಾಂ ಅಬ್ದರಾಗಂ ಸುಖಂ ದದ್ || ಕಾಶ್ಮೀರಕುಲ್ಕುವೋಪೇತಂ ಚನ್ದನಂ ರಕ್ಕಚನ್ನಮ್ [೪೭) ಕೌಶೇಯುವಸನಂ ಚಾಪಿ ಭೂಷಣಾನ್ಯತುಲಾನಿ ಚ | ವಿಚಿತ್ರ ಪುಷ್ಪಮಾಲಾಶ್ಚ ಕಜ್ಜಲಂ ಕುಲ್ಕು ಮಂ ತಥಾ ||೪|| ಸದಾ ಪ್ರಕ್ಷಾಳಿತಾಬ್ದ ಮಾಲಿನ್ಯಪರಿವರ್ಜಿತಮ್ | ಕೇಶಬದ್ಧಗ್ಗತಾಂ ಚ ವಿಕಸತ್ಪಜಾನನಮ್ | ದದ ಪೀರಪಥೇನಾಭಂ ಕೂರ್ಮಾಸಂ ರತ್ನಗುಮೀತಮ್ |ರ್೪! ಸದಾಲಂಕಾರಸಂಯುಕಾ೦ ಸೀತಾಂ ಸುರಸುತೋಪನಾ | ಅನಸೂಯಾ ಚಕಾರೋಚ್ಛೆ ಪಾತಿವ್ರತ್ಯ ತಪೋಬಲಾತ್ ೫°| ಓ ಪರಮಾತ್ಮನಾದ ರಾಮನು, ಯಾವಯಾವ ವಿಭೂತಿಯುಕ್ತನಾದ ರೂಪವನ್ನು ಸ್ವೀಕರಿ ಸುವನೋ, ಆದದಕ್ಕೆ ಅನುಗುಣವಾಗಿ ನೀನು ರೂಪಗಳನ್ನು ಧರಿಸುವೆ ||೪೪| ಶ್ರೀ ರಾಘವನು ಪುರುಷರೂಪನು; ನೀನು ಸ್ತ್ರೀರೂಪಳು. ಹೀಗೆ ಪರಬ್ರಹ್ಮನೇ ಎರ ಡುವಿಧವಾಗಿ ಸ್ತ್ರೀಪುರುಷಭೇದದಿಂದ ಕಾಣಿಸಿಕೊಳ್ಳುತಿರುವನು ೪೫ ರಾಮನು ರಾವಣನ್ನು ಕೊಲ್ಲುವನು ; ನೀನು ಶತ ಕಂಧರ ರಾವಣನನ್ನು ಕೊಲ್ಲುವೆ. ಹೇ ಜನಕರಾಜನಂದಿನಿ ! ನಿನ್ನ ಸ್ವರೂಪವನ್ನು ನೀನೆ ಅರಿತವಳಾಗಿರುವೆ ೧೪೩|| ಹೀಗೆಂದು ಆ ಸೀತೆಯನ್ನು ಸ್ತೋತ್ರ ಮಾಡಿ, ಕೇಸರಾದಿಗಳಿಂದ ಪರಿಮಳಿತವಾಗಿರುವ ರಕ್ತಚಂದನವನ್ನು ಅಂಗಲೇಪನಕ್ಕಾಗಿ ಕೊಟ್ಟಳು ೪೭| ಮತ್ತು, ಕೌಶೀಯ ವಸ್ತ್ರವನ್ನೂ, ಅಸದೃಶವಾದ ದಿವ್ಯಭೂಷಣಗಳನ್ನೂ, ವಿಚಿತ್ರ ವಾದ ಪುಷ್ಪಮಾಲಿಕೆಗಳನ್ನೂ, ಕಾಡಿಗೆಯನ್ನೂ, ಕುಂಕುಮವನ್ನೂ, ಮೈಯಲ್ಲಿ ಕೊಳೆಯಿಲ್ಲದೆ ಸತ್ವದಾ ಸ್ನಾನಮಾಡಿದಂತೆ ಶುಭ್ರವಾಗಿರುವಿಕೆಯನ್ನೂ, ಕೇಶಬಂಧವು(ಜುಟ್ಟು ಗಂಟು) ಸತ್ವದ ಮಿರುಗುತಿರುವಿಕೆಯನ್ನೂ, ಮುಖದಲ್ಲಿ ಸದಾ ಅರಳಿದ ತಾವರೆಯಂತ ವಿಕಾಸವನ್ನೂ, ಅಮೃತದ ನೊರೆಯಂತೆ ಶುಭ್ರವಾಗಿರುವ ರತ್ನ ಖಚಿತವಾದ ಕುಪ್ಪಸವನ್ನೂ ಕೂಡ, ಅಹಲ್ಯಯು ಸೀತಾದೇವಿಗೆ ಅನುಗ್ರಹಿಸಿದಳು |೪v-೪೯H - ಹೀಗೆ ಆ ಅನಸೂಯೆಯು ದೇವತಾ ಸದೃಶೆಯಾದ ಸೀತೆಯನ್ನು ತನ್ನ ಪಾತಿವ್ರತ್ಯ ತಪೋಬಲದಿಂದ ಸತ್ವದ ಅಲಂಕಾರಯುಕ್ತಳನಾಗಿ ಮಾಡಿದಳು ೧೫೦