ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೦ mo. ಚ . ಶ್ರೀ ತತ್ವ ಸಂಗ್ರಹ ರಾಮಾಯಣ೦. ಸರ್ಗ ಪರತ್ಯುವಾಚ. ಭೂಯೋಪಿ ವದ ಮೇ ದೇವ ರಾಮತತ್ರ್ಯ ೦ ವಿಶೇಷತಃ || ಯಸ್ಯ ಶ್ರವಣಮಾತ್ರೇಣ ಭಕ್ತಿಃ ಸ್ಯಾದಾನುವೇ ಧೃಢಾ ||೨೦|| ಕೋ ರಾಮಸ್ತತ್ಕಥಾ ಕಿದೃಕ್ ತತ್ತ್ವರೂಪಂ ಚ ಕಿದೃಶಮ್ ! ಕಾ ನೀತಾ ಲಕ್ಷ್ಮಣ ಕೊ ವಾ ಶತ್ರುಸೆ ಭರತಕ್ಷ ಕಃ ||೨೧|| ಶಿಶಿವಉವಾಚ, ಧನ್ಯಾಸಿ ಭಕ್ತಾನಿ ಪರಾತ್ಮನ ಯಜ್ಞತುವಿ.ಚ್ಛಾ ತವ ರಾಮತತ್ತ್ವಮ್ | ಪುರಾ ನ ಕೇನಾಷ್ಯಭಿಚೋದಿತೋಹಂ ವಕ್ಷ್ಮ ರಹಸ್ಯಂ ಪರಮಂ ನಿಗೂಢವತ್ |೨೨|| ರಾಮಃ ಪರಾತ್ಮಾ ಪ್ರಕೃತೇರನಾದಿ: ಅನನ್ದ ಏಕಃ ಪುರುಷೋತ್ತವೆಪಿ | ಸ್ಪಮಾಯಯಾ ಸರ್ವಮಿದಂ ಚ ಸೃಷ್ಣಾ ನಭೋವದನ್ನರ್ಬರಾಸ್ಥಿ ತೇಜಃ ||೨೩|| ಸರ್ವಾನ್ನರವಿ ನಿಗೂಢಆತ್ಮಾ ಸಮಾಯಯಾ ಸರ್ವಮಿದಂ ವಿಚಷ್ಟೇ ! ಶ್ರೀವಾರ್ವತಿ ಹೇಳುವಳು :- ದೇವ! ಯಾವುದನ್ನು ಕೇಳಿದರೆ ಶ್ರೀರಾಮನಲ್ಲಿ ಭಕ್ತಿ ದೃಢವಾಗುವುದೊ, ಅ೦ತಹ ರಾಮ ಶತ್ವವನ್ನು ನನಗೆ ಮತ್ತೆ ವಿಶೇಷವಾಗಿ ಹೇಳಬೇಕು |೨೦|| ರಾಮನೆಂಬವನು ಯಾರು? ಅವನ ಕಥೆಯಂತಹುದು? ಅವನ ಸ್ವರೂಪವೆಂತಹುದು ? ಸೀತೆ ಯಾರು ? ಲಕ್ಷಣನು ಯಾರು ? ಶತ್ರುಘ್ನನು ಯಾರು ? ಭರತನೆಂಬವನೂ ಯಾರು ? |೨೧|| ಶ್ರೀ ಪರಮೇಶ್ವರನು ಉತ್ತರ ಹೇಳುವನು : - ಎಲ್‌ ಪಾರ್ವತಿ' ನೀನೇ ಧನ್ಯಳು ! ನೀನೇ ಪರಮಾತ್ಮಭಕಳು ! ಏತಕ್ಕೆಂದರೆ,-ಶಿರಾ ಮನ ತತ್ವವನ್ನು ತಿಳಿದುಕೊಳ್ಳಬೇಕೆಂದು ನಿನಗೆ ಇಚ್ಛೆ ಹುಟ್ಟಿರುವುದಲ್ಲವೆ! ಹಿಂದೆ ನಾನು ಈರೀತಿ ಯಾಗಿ ಯಾರಿಂದಲೂ ಪ್ರೇರಿತನಾಗಿರಲಿಲ್ಲ. ಈಗ ನಿನ್ನಿಂದ ಪ್ರೇರಿತನಾಗಿರುವ ಕಾರಣ, ಅತಿ ಗೂಢವಾದ ಈ ರಹಸ್ಯವನ್ನು ನಿನಗೆ ಹೇಳುವೆನು |೨೨| - ಶ್ರೀರಾಮನು, ಪ್ರಕೃತಿಗಿಂತ ಭಿನ್ನ ನಾದವನು ; ಆನಂದಸ್ವರೂಪನು ; ಅದ್ವಿತೀಯನಾದ ವನು ; ಪುರುಷೋತ್ತಮನಾದವನು. ಸ್ವರೂಪತಃ ಜನ್ಮರಹಿತನಾದ ಇವನು, ತನ್ನ ಮಾಯೆ ಯಿಂದ ಇದೆಲ್ಲವನ್ನೂ ಸೃಷ್ಟಿ ಮಾಡಿ, ಆಕಾಶದಂತೆ ಒಳಗೂ ಹೊರಗೂ ವ್ಯಾಪಿಸಿಕೊಂಡಿರು ವನು ||೨೩11 ಅವನು, ಸರ್ವಾ೦ತರಾಮಿಯಾಗಿ, ಪರಮರಹಸ್ಯಭೂತನಾಗಿ, ತನ್ನ ಮಯೆಯಿಂದ ಈ ಪ್ರಪಂಚವೆಲ್ಲವನ್ನೂ ವ್ಯಕ್ತಗೊಳ್ಳಿಸುವನು, ಸೂಜಿಗಲ್ಲಿನ ಹತ್ತಿರ ಕಬ್ಬುನವು ಸುತ್ತುವಂತ, ಅವನ ಹತ್ತಿರ ಸುತ್ತಲೂ ಅನೇಕ ಜಗತ್ತುಗಳು ಸುತ್ತು ತಿರುವುವು ||೨೪||