ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

v) | ಬಾಲಕಾಂಡ, ಅಥ ಶ್ರೀ ಬಾಲಕಾ ಅಮಃ ಸರ್ಗಃ, ಶ್ರೀಪಾರತ್ಯುವಾಚ. ಯದೇಕಂ ನಿಷ್ಕಳಂ ಬ್ರಹ್ಮ ಸರ್ವವ್ಯಾಪಕಮವ್ಯಯಮ್ | ಭೂಮಾವವತತಾರಾ ಕಿಮರ್ಥಂ ತಪ್ಪದಸ್ಯ ಮೇ ೧: ಅವತೀರ್ಣವಿ ಸತ್ಯಾದಿಲಕ್ಷಣೇ ನಿರ್ವಿಕಾರಿಣಿ | ರಾಮಾಯಣೇ ಪುರಾಣಾದ್‌ ಕಿಂ ನಾನಾತ್‌ನ ವರ್ಣಿತಮ್ ||೨|| ಕೃಜಿಜ್ಞಾ ವೋ ವಿಷ್ಣುಃ ಚಿರ್ತಿತ್ರಯಾತ್ ಪರಃ | ಕಚಿನ್ನೂರ್ತಿಯಾತ್ಸಾಯಂ ಕಚಿದ್ದರಿಹರಾತ್ಮಕಃ |೩|| ಇತ್ಯಾದಿ ನಾನಾರೂಪೇಣ ವಿರುದ್ದ ಮಿತಿ ವರ್ಣಿತಮ್ | ಮುಖಭಿರ್ಬಹುಧಾ ಚಾತ್ರ ಸಂಶಯೋ ಜಾಯತೇ ಮಮ 18| ತಾಮೃತೇ ಸಂಶಯಸ್ಯಾಸ್ಯ ಚೈತ್ರಾ ಲೋಕೇ ನ ವಿದ್ಯತೇ | ನುದೈನಂ ಸಂಶಯಂ ಶನ್ನೋ ವಿಷ್ಣುಭಕ್ತಿ ರಘಂ ಯಥಾ !>! ಎ ಬತಿ (

ಆ ಬಾಲಕಾಂಡದಲ್ಲಿ ಎಂಟನೆಯ ಸರ್ಗವು. ಶ್ರೀ ಪಾರ್ವತಿಯು ಶ್ರೀ ಪರಮೇಶ್ವರನನ್ನು ಕುರಿತು ಪ್ರಶ್ನೆ ಮಾಡುವಳು :- ಗ್ರಾರ್ಮಿ! ಪರಮೇಶ್ವರ ನಿರ್ವಿಕಲ್ಪವಾಗಿ ಸರ್ವವ್ಯಾಪಿಯಾಗಿ ಅವ್ಯಯವಾಗಿರುವ ಯಾವ ಬ್ರಹ್ಮವಸ್ತುವುಂಟೋ, ಅದು ಈ ಭೂಮಿಯಲ್ಲಿ ಏತಕ್ಕಾಗಿ ಅವತರಿಸಿತು ? ಅದನ್ನು ತಾವು ನನಗೆ ಅಪ್ಪಣೆ ಕೊಡಿಸಬೇಕು |೧|| ಸತ್ಯಜ್ಞಾನಾನಂದರೂಪವಾಗಿ ನಿರ್ವಿಕಾರವಾಗಿರುವ ಆ ಬ್ರಹ್ಮವು ಅವತರಿಸಿದಾಗ್ಯೂ, ರಾಮಾಯಣದಲ್ಲಿಯೂ ಪುರಾಣ ಮುಂತಾದುವುಗಳಲ್ಲಿಯೂ ಅದು ನಾನಾವಿಧವಾಗಿ ವರ್ಣಿಸಲ ಟ್ಟಿರುವುದಕ್ಕೆ ಕಾರಣವೇನು ? ||೨|| - ಒಂದುಕಡೆಯಲ್ಲಿ ಬ್ರಹ್ಮನೆಂದೂ, ಒಂದು ಕಡೆಯಲ್ಲಿ ಶಿವನೆಂದೂ, ಒಂದು ಕಡೆಯಲ್ಲಿ ವಿಷ್ಣು ವೆಂದೂ, ಕೆಲವು ಕಡೆಯಲ್ಲಿ ಮರಿತ್ರಯಾತೀತನೆಂದೂ, ಮತ್ತೆ ಕೆಲವು ಸ್ಥಳಗಳಲ್ಲಿ ಮೂರಿ, ತನುಸ್ವರೂಪನೆಂದೂ, ಇನ್ನು ಕೆಲವು ಕಡೆ ಹರಿಹರರೂಪನೆಂದೂ, ಶ್ರೀರಾಮನು ಹೇಳಲ್ಪಟ - ರುವನು ||೩|| ಇತ್ಯಾದಿ೦ತಿಯಾಗಿ, ಋಷಿಗಳು ಶ್ರೀರಾಮನನ್ನು ನಾನಾವಿಧವಾಗಿ ವರ್ಣಿಸಿರುವರು. ಇದು ಪರಸ್ಪರ ವಿರುದ್ಧವಾಗಿರುವಂತೆ ತೋರುವುದು. ಅದು ಕಾರಣ, ಈ ವಿಷಯದಲ್ಲಿ ನನಗೆ ಸಂಶಯವು ಹುಟ್ಟಿರುವುದು ||೪|| ಸ್ವಾಮಿ ? ತಮ್ಮನ್ನು ಬಿಟ್ಟರೆ, ಈ ಸಂಶಯವನ್ನು ಛೇದಿಸತಕ್ಕವರು ಪ್ರಪಂಚದಲ್ಲಿ ಯಾರೂ ಇಲ್ಲ. ಅದು ಕಾರಣ, ಹೇ ಶಂಭೋ ! ವಿಷ್ಣು ಭಕ್ತಿಯು ಪಾಪವನ್ನು ಹೋಗಲಾಡಿಸುವಂತೆ, ತಾವು ನನ್ನ ಈ ಸಂಶಯವನ್ನು ಹೋಗಲಾಡಿಸಬೇಕು ೧೫