ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿನ –೨ ೨ ಶ್ರೀ ತತ್ವ ಸಂಗ್ರಹ ರಾಮಾಯಣಂ, [ಸಗ೯ ರುದ್ರಾಕ್ಷಾತ್ಕಸಿದ್ಧ ರ್ಥ೦ ಅಸ್ಮಭಿಃ ಪೂರ್ವಸೇವಿತಃ |೧೨| ತವಾ ಪೂಜಾನಿರ್ಮಾಲ್ಯತುಲಸೀಮಾಲಯಾ ವಿಭೋ | ಸ್ಪರ್ಧತೇ ವಕ್ಷಸಿ ಪದಂ ಅಬ್ಬಾ ಪಿ ಶ್ರೀ ಸಪತ್ನಿ ವತ್ ||೧೩|| ಅತಸ್ಸತ್ಪಾದಭಕ್ಷೇಪು ತವ ಪ್ರೀತಿಃ ಶಿಯಧಿಕಾ | ಭಕ್ತಿಮೇವಾಭಿವಾನಿ ತ್ಯದ್ಭಕಃ ಸಾರನೇದಿನಃ |೧೪|| ಅತಸ ತಾದಕಮಲೇ ಭಕ್ತಿ ರೇವ ಸದಾಸು ಮೇ ! ಸಂಸಾರಾಮಯತಪಾನಾಂ ಭೇಷಜಂ ಭಕಿರೇವ ತೇ |೧೫|| ಇತಿ ಸುವತಿ ದೇವೇಶೇ ನಯಾ ಚ ಋಷಿಭಿಃ ಸಹ ! ತತಃ ಪಾದುರಭೂಜೆ ತಿಃ ದುರ್ನಿರೀಕ್ಷ ದುರಾಸದಮ್ [೧೬ || ತೇಜಸ್ಟ್‌ನ ತತರ್ಸ್ಸ ಕೋಟ್ಯರ್ಕಸಮವಿಗ್ರಹಃ | ಬ್ರಹ್ಮ ವಿಷ್ಣು ಮಹೇಶಾನಕಾರಣಾತ್ಮಾ ಪರಾತ್ಪರಃ ||೧೭| ನವನೀಲಾಷ್ಟುದಶ್ಯಾಮಃ ಸರ್ವಾಭರಣಭೂಷಿತಃ | ಕಿರೀಟಹಾರಕೇಯರರತ್ನಕುಲಮಣ್ಣಿತಃ | ಸನ್ನಪ್ಪಕಾ ನಪ್ರಖ್ಯಪೀತವಾಸೋಯುಗಾನ್ನಿತಃ [nvi ಸರ್ವದಾ ನನ್ನ ಹೃದಯದಲ್ಲಿ ಸ್ಪುರಿಸುತ್ತಿರುವುದು. ರುದ್ರನೇ ಮೊದಲಾಗಿರುವ ನಾವೆಲ್ಲರೂ ಆತ್ಮ ಜ್ಞಾನಸಿದ್ಧರ್ಧವಾಗಿ, ನಿನ್ನ ಈ ಪಾದಕಮಲವನ್ನು ಮೊದಲಿಂದಲೂ ಸೇವಿಸಿಕೊಂಡಿರುವೆವು || * ಎಲೈ ವಿಭುವೆ! ಜಗನ್ಮಾತೆಯಾದ ಆ ಮಹಾಲಕ್ಷ್ಮಿಯು, ನಿನ್ನ ಹೃದಯಕಮಲದಲ್ಲಿ ಆವಾ ಸವನ್ನು ಹೊಂದಿದವಳಾಗಿದ್ದರೂ, ನಿನ್ನ ಪಾದಪೂಜೆ ಮಾಡಿ ನಿಮ್ಮಾಲ್ಯವಾದ ತುಲಸೀಮಾಲಿಕೆ ಯೊಡನೆ ಸಪತ್ನಿ (ಸವತಿ)ಯಂತೆ ಸ್ಪರ್ಧೆ ಮಾಡುತಿರುವಳು. (ಆ ತುಳಸೀಮಾಲಿಕೆಯಷ್ಟು ಗೌರವವು ತನಗಿಲ್ಲದೆ ಹೋಯೆಂದು, ಅದಕ್ಕಾಗಿ ಹೋರಾಡುವಳೆ೦ದು ಭಾವವು) ೧೧೩|| ಅದುಕಾರಣ, ನಿನಗೆ ಲಕ್ಷ್ಮಿಯಲ್ಲಿರುವುದಕ್ಕಿಂತಲೂ ಹೆಚ್ಚಾಗಿ ನಿನ್ನ ಪಾದಭಕ್ತರಲ್ಲಿ ಪ್ರೀತಿ ಯಿರುವುದು. ಸಾರವನ್ನು ಚೆನ್ನಾಗಿ ತಿಳಿದುಕೊಂಡಿರುವ ನಿನ್ನ ಭಕ್ತರು, ನಿನ್ನಲ್ಲಿ ಭಕ್ತಿಯೊಂ ದನ್ನ ಅಪೇಕ್ಷಿಸುವರು ೧೪|| ಆದುದರಿಂದ, ನನಗೆ ಸರ್ವದಾ ನಿನ್ನ ಪಾದಕಮಲದಲ್ಲಿ ಭಕ್ತಿಯೊಂದೇ ಇರಲಿ, ಸಂಸಾ ರವೆಂಬ ರೋಗದಿಂದ ತಪ್ತರಾದವರಿಗೆ, ನಿನ್ನಲ್ಲಿ ಭಕ್ತಿಯೇ ಪರಮೌಷಧವಾಗುವುದು |೧೫| ಈರೀತಿಯಾಗಿ ಆ ಬ್ರಹ್ಮನು ನನ್ನೊಡನೆಯ ಋಷಿಗಳೊಡನೆಯ ಸೊತ್ರ ಮಾಡಿ ದಬಳಿಕ, ನೋಡುವುದಕ್ಕೂ ಹತ್ತಿರ ಹೋಗುವುದಕ್ಕೂ ಅಸಾಧ್ಯವಾದ ಒಂದಾನೊಂದು ತೇಜಸ್ಸು ಪಾದುರ್ಭವಿಸಿತು |೧೬|| ಅನಂತರ ಆ ತೇಜಸ್ಸಿನೊಳಗೆಯೇ, ಸೂರ ಕೂಟ ಸಮಶರೀರನಾಗಿಯ ಬ್ರಹ್ಮ ವಿಷ್ಣು ಮಹೇಶ್ವರರಿಗೆ ಕಾರಣಭೂತನಾಗಿಯೂ ಪರಾತ್ಪರನಾಗಿಯೂ ಇರುವ ಶ್ರೀಮನ್ನಾರಾಯಣನು ಆವಿರ್ಭವಿಸಿದನು |೧೭|| ಅವನು, ಹೊಸದಾದ ನೀಲಮೇಘದಂತೆ ಶ್ಯಾಮಲನಾಗಿಯೂ, ಸರ್ವಾಭರಣಭೂಷಿತನಾ ಗಯ, ಕಿರೀಟಿ ಹಾರ ಕೇಯೂರ ರತ್ನ ಕುಂಡಲಗಳಿಂದ ಅಲಂಕೃತನಾಗಿಯೂ, ಪುಟಹಾಕಿದ ಚಿನಕ್ಕೆ ಸಮಾನವಾಗಿ ಪ್ರಕಾಶಿಸುತ್ತಿರುವ ಪೀತಾಂಬರಯುಗದಿಂದ ಯುಕ್ರನಾಗಿಯೂ ಇದ್ದನು ||೧vi