ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ತತ್ವ ಸಂಗ್ರಹ ರಾಮಾಯಣಂ, [ಸರ್ಗ ಮೈರ್ಯಸ್ತದಃ ಕೃತಂ ಪೂರ್ವಂ ಬ್ರಹ್ಮಾಣ೦ ಮಾಂ ಚ ಕರಮ್ || ತ್ರಿಮೂರ್ತತೀತವಾತ್ಮಾನಂ ಯೇ ಧ್ಯಾಯ ನಿರನ್ನರವು ೫°!! ಸತತ ಪೋನುರೂಪೇಣ ತಾರಕಬ್ರಹ್ಮನಾಮಕಃ | ತೇಷಾಂ ಪ್ರದಾಸ್ಯೆ ಮುಕ್ತಿಂ ಚ ಶಾಸನೋಕ್ಷಂ ಚ ಶಾಪಿನಾಮ್ ||೧| ನಲ್ಲಿ ಕಾಪಾದ್ಧವನ್ನೊಪಿ ವಾನರತ್ನಮುಪಾಗತಾಃ || ಅವತೀರ್ಣಸ್ಯ ಭಿ ಕೆ ಮಾಯಯಾ ರಾಘವಾತ್ಮನಾ ! ಕುರುಧ್ವಂ ಮಮ ಸಾಹಯ್ಯ ಇತ್ಯು ಕ್ಯಾನರ್ದಧೆ ಹರಿಃ ॥೫೨ ಇತಿ ಬಾಲಕಾಣೆ- ದೇವಕೃತಸ್ತುತಿ ವಿಷ್ಣು ವರಪ್ರದಾನ ನಾನು ದ್ವಾದಶಃ ಸರ್ಗಃ, ವಳಿ

ಮತ್ತು, ಬ್ರಹ್ಮನನ್ನೂ ನನ್ನ ನ್ಯೂ ಈಶ್ವರನನ್ನೂ ಕುರಿತು ಪೂರ್ವದಲ್ಲಿ ಯಾರು ಯಾರು ತಪಸ್ಸು ಮಾಡಿರುವರೋ, ಯಾರು ಯಾರು ಮೂರ್ತಿ ತಯತೀತನಾದ ನನ್ನನ್ನು ನಿರಂತರವಾಗಿ ಧ್ಯಾನಮಾಡುತ್ತಿರುವರೋ, ಅವರವರ ತಪಸ್ಸಿಗೆ ಅನುಗುಣವಾಗಿರುವಂತೆ, ತಾರಕಓಹ್ಮನೆಂದು ಹೆಸರಿಟ್ಟುಕೊಂಡಿರುವ ನಾನು, ಅವರವರಿಗೆ ಮುಕ್ತಿಯನ್ನು ಕೊಡುವೆನು ; ಶಾಪಗ್ರಸ್ತರಾಗಿರ ತಕ್ಕವರಿಗೆ ಶಾಪವಿಮೋಚನೆಯನ್ನೂ ಮಾಡುವೆನು 11೫೦-೫೧|| ನೀವುಗಳೂ ಕೂಡ, ನಂದೀಶ್ವರನ ಶಾಪದಿಂದ ವಾನರಜನ್ಮವನ್ನು ಹೊ೦ದಿದವರಾಗಿ, ಭೂಮಿ ಯಲ್ಲಿ ಮಾಯೆಯಿಂದ ರಾಘವರೂಪನಾಗಿ ಜನಿಸುವ ನನಗೆ ಸಾಕ್ಯವನ್ನು ಮಾಡಿರಿ.ಎಲ್ ಪಾರ್ವತಿ! ಹೀಗೆಂದು ಹೇಳಿಬಿಟ್ಟು, ಆ ಶ್ರೀಹರಿಯು ಆ೦ತರ್ಧಾನಹೊ೦ದಿಬಿಟ್ಟನು 11೫೨| ಇದು ಬಾಲಕಾಂಡದಲ್ಲಿ ದೇವಕೃತಸ್ತುತಿ ವಿಷ್ಣು ವರದಾನಕಧನವೆ೦ಬ ಹನ್ನೆರಡನೆಯ ಸರ್ಗವು.