htd fಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ ಪ್ರಥಮಂ ನಿರ್ಭಯ ರಾಮಃ ಏಕವಿವ ಧನುರ್ಧರಃ | ಚತುರ್ದಶಸಹಸನ ತತೋಭೂದನುನನ್ನಃ || ೧೬ || ಪುನಃ ಸರ್ವಸ್ವರೂಪೋಭೂತ್ ಪುನರೇಕೀಪ್ಯದೃಶ್ಯತ || ೧೯|| ನಾದದಾನಂ ಶರ್ರಾ ಫೆರ್ರಾ ನ ಮುಳ್ಳಿನ ಶಿಲೀಮುರ್ಖಾ | ದಕೂರಾಘುವಂ ಸರ್ವೆ ರಾಕ್ಷಸಾಸ್ತು ನಿಪಾತಿತಾಃ || ೧೯ || ನಿಕಯ್ಯ ವಚನಂ ತಸ್ಯಾತಿ ಸಸೂರಾಕ್ಷಸಪುಜ್ಞ ವಃ | ಕ್ಷಣ: ನಿಶ್ಚಿಷ್ಟತಾಮಾಪ ಸಂಮೂರ್ಛತಇವಾತುರ ||೨೦|| ಪ್ರಹಸ್ತಪ್ರಮುಖಾವೀರಾಃ ಸರ್ವೆ ತಸ್ಯ ಸಭಾಸದಃ | ನಾಸಾಗೆ ನ್ಯಸಹಸಾ ಶಿರಃಕನ್ನಂ ಪ್ರಚಕ್ತಿರೇ |೨೧|| ಈಜಿತ ಸಭಾಸದಸ್ತಸ್ಯ ಸಮುತ್ತಾ ಯ ಧೃತಾಯುಧಾಃ ||೨೨|| ಆಜ್ಞಾಂ ದೇಹಿ ಮಹಾರಾಜ ಹನಿಪ್ಯಾಮೋದ್ಯ ತೇ ರಿಪ್ರವಮ್ | ಕಿಂ ಚಿನ್ಮಯಾ ಮಹಾರಾಜ ನರಮಾತಾತ ಕಥಂ ಭಯಮ್ | ಪಾತಾನ್ನಮಿವ ಭೋಕ್ಷಾಮೋ ನರಭೋಜನಕಾವಯಮ್ -೩|| ಕೂಡ, ಯುದ್ಧ ಮಾಡುವುದಕ್ಕಾಗಿ ರಾಕ್ಷಸರೊಡನೆ ರಾಮನ ಹತ್ತಿರಕ್ಕೆ ಬಂದು, ಒಂದು ಕ್ಷಣ ದೊಳಗಾಗಿಯೇ ಮಹಾಬಲಶಾಲಿಯಾದ ಆ ರಾಮನಿಂದ ಕೊಲ್ಲಲ್ಪಟ್ಟನು ||೧೬|| ಮೊದಲು ಒಬ್ಬನೇ ರಾಮನು ಧನುರ್ಧಾರಿಯಾಗಿ ಹೊರಳನ್ನು ಆಮೇಲೆ ಅವನು ಹದಿ ನಾಲ್ಕು ಸಾವಿರ ರಾಮರಾಗಿ ಕಾಣಿಸಿಕೊಂಡನು ಪುನಃ ಪುನಃ ವಿಶ್ವರೂಪವನ್ನು ಧರಿಸುತಿದ್ದನು. ಆಮೇಲೆ ಪುನಃ ಒಬ್ಬನಾಗಿಯೂ ಕಾಣಿಸಿಕೊಂಡನು ||೧೭-೧೮ || ಆಗ, ರಾಮನು ಬಾಣಗಳನ್ನು ತಗೆದು ಕೊಳ್ಳುತಿದ್ದುದೂ ಯಾರಿಗೂ ಕಾಣಿಸಲಿಲ್ಲ, ಅವನು ಬಾಣಬಿಡುತಿದ್ದುದೂ ಯಾರಿಗೂ ಕಾಣಿಸಲಿಲ್ಲ ರಾಕ್ಷಸರು ಮಾತ್ರ ಸಮಸ್ತರೂ ಹತ ರಾಗಿಬಿದ್ದರು (ಎಂದು ಶೂರ್ಪಣಖಿಯು ಹೇಳಿದಳು) ||೧೯|| ಹೀಗೆ ಹೇಳಿದ ತನ್ನ ತಂಗಿಯ ಮಾತನ್ನು ಕೇಳಿ, ಆ ರಾಕ್ಷಸರಾಜನು, ಮೂರ್ಛಿತನಾಗಿ ಬಿದ್ದ ರೋಗಿಯಂತೆ, ಒಂದು ಕ್ಷಣಕಾಲ ಸ್ತಬ್ಧ ನಾಗಿ ಕುಳಿತುಬಿಟ್ಟನು |೨೦|| ಆಗ, ಅವನ ಸಭೆಯಲ್ಲಿದ್ದ ಪ್ರಹಸ್ತ ಮೊದಲಾದ ಮಹಾವೀರರೆಲ್ಲ ರೂ, ಮಗಿನ ತುದಿ ಯಲ್ಲಿ ಬೆರಳಿಟ್ಟುಕೊಂಡು, ತಲೆಯನ್ನು ತೂಗಿದರು ||೨೧|| ಆ ಸಮಯದಲ್ಲಿ, ಕೆಲವುಮಂದಿ ಅವನ ಸಭಾಸದರು ಎದ್ದು ನಿಂತುಕೊಂಡು, ಕೈಯಲ್ಲಿ ಆಯುಧಗಳನ್ನು ಧರಿಸಿ, ರಾವಣನನ್ನು ಕುರಿತು “ ಮಹಾರಾಜ ! ನಮಗೆ ಆಪ್ಪಣೆಯಾಗಲಿ, ನಾವು ಈಗಲೇ ನಿಮ್ಮ ಶತ್ರುವನ್ನು ಕೊಂದುಬಿಡುವೆವು ಹೀಗೆ ಚಿಂತಿಸುವುದರಿಂದ ಫಲವೇನು? ಅತ್ಯಲ್ಪನಾದ ಮನುಷ್ಯಮಾತ್ರನಿಂದ ಇಷ್ಟು ಭಯವೇಕೆ ? ನಾವು ನರಮಾಂಸಭಕ್ಷಕರಲ್ಲವೆ !
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೧೧೪
ಗೋಚರ