ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

“ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ ಕಥಾಮೃತಂ ಪಾತು ಕರಯಂ ತೇ ಪಾದಾರವಿನ್ಯಾರ್ಚನಮೇವ ಕುರ್ಯಾತ್ | ತಿರಕ್ಷ ತೇ ಪಾದಯುಗಪ್ರಣಾಮಂ ಕರೋತು ನಿತ್ಯಂ ದುರಿತಕ್ಷಯಾವಹನ' ||೨೬|| ನಮಸ್ತುಭ್ಯಂ ಭಗವತೇ ವಿನಪ್ಪಾಜ್ಞಾನಮೂರ್ತಯೇ | ಆತ್ಮಾರಾಮಾಯ ರಾಮಾಯ ಸೀತಾರಾಮಾಯ ವೇಧಸೇ ||೧೭| ಪ್ರಸನ್ನಂ ಪಾಹಿ ಮಾಂ ದೇವ ರಾಮ ಯಾಸ್ಯಾಮ್ಯುನುಜ್ಞಯಾ | ದೇವಲೋಕಂ ರಘುಶ್ರೇಷ್ಠ ಮಾಯಾ ಮಾಂ ನಾವೃಣೋತು ತೇ |೨| ಇತಿ ವಿಜ್ಞಾವಿತಸೇನ ಪ್ರಸನ್ನೋ ರಘುನನ್ನನಃ | ವರಂ ದದ್ ತದ್ಮಾತೋ ವಿರಾಧಾಯ ಮಹಾಮತಿ |೨೯|| ಗಚ್ಛ ವಿದ್ಯಾಧರಿಷ್ಠ ಮಾಯಾದೋಷಗುಣಾಜಿತಾಃ | ತಯಾ ಮದ್ದರ್ಶನಾತ್ ಸದ್ಯ ಮುಕ್ಕೊ ಜ್ಞಾನವತಾಂ ವರ |೩೦|| ನಾಮಕೀತ್ರನೆಯನ್ನೇ ಮಾಡುತಿರಲಿ ನನ್ನ ಪ್ರೋತ್ರಪುಟವು, ನಿನ್ನ ಕಧೆಯೆಂಬ ಅಮೃತವನ್ನು ಪಾನಮಾಡಲಿ ನನ್ನ ಹಸ್ತಯುಗವು, ನಿನ್ನ ಪಾದಕಮಲದ ಪೂಜನೆಯನ್ನೇ ಮಾಡುತಿರಲಿ ನನ್ನ ಶಿರಸ್ಸು, ದುರಿತಕ್ಷಯಕಾರಿಯಾದ ನಿನ್ನ ಪಾದಯುಗಳನಮಸ್ಕಾರವನ್ನು ನಿತ್ಯವೂ ಮಾಡು ತಿರಲಿ ||೨೫-೨೬ || ಅಜ್ಞಾನಶೂನ್ಯಎಗ್ರಹನ >ಗಿಯ ಆತ್ಮಾರಾಮನಾಗಿಯೂ ಸೀತಾಪತಿಯಾಗಿಯ ಸತ್ಯ ಲೋಕವಿಧಾಯಕನಾಗಿಯೂ ಇರುವ ಸಾಕ್ಷಾದ್ಭಗವಂತನಾದ ನಿನಗೋಸ್ಕರ ನಮಸ್ಕಾರವು || - ದೇವ ! ಶ್ರೀರಾಮ ! ಶರಣಾಗತನಾದ ನನ್ನನ್ನು ಕಾಪಾಡು ಹೇ ರಘುಶ್ರೇಷ್ಠ ! ನಿನ್ನ ಅಪ್ಪಣೆಯಾದರೆ ನಾನು ದೇವಲೋಕಕ್ಕೆ ಹೋಗುವೆನು ನಿನ್ನ ಮಾಯೆಯು ಪುನಃ ನನ್ನನ್ನು ಆವರಿಸಿಕೊಳ್ಳದಂತೆ ಅನುಗ್ರಹಿಸುವನಾಗು ( ಎಂದು ಆ ವಿದ್ಯಾಧರನು ಸ್ತುತಿಸಿದನು ) |೨೮|| ಈ ರೀತಿಯಾಗಿ ಅವನಿಂದ ವಿಜ್ಞಾಪಿಸಲ್ಪಟ್ಟು ಪ್ರಸನ್ನ ನಾದ ಮಹಾಮತಿಯಾದ ರಘುನಂ ದನನು, ಆಗ ಮಹಾಪ್ರೀತಿಸಮನ್ವಿತನಾಗಿ ವಿರಾಧನಿಗ ವರವನ್ನು ಕೊಟ್ಟನು ||೨೯|| ಎಲೈ ವಿದ್ಯಾಧರಶ್ರೇಷ್ಠನೆ ! ನೀನು ಯಥೇಚ್ಚವಾಗಿ ಹೋಗಬಹುದು. ನೀನು ನನ್ನ ದರ್ಶನಮಾಡಿದುದರಿಂದಲೇ ಮಾಯಾಸಂಒಂಧವಾದ ದೋಷಗಳನ್ನೂ ಗುಣಗಳನ್ನೂ ಗೆದ್ದಿರುವೆ ಜ್ಞಾನಿಗಳಲ್ಲೆಲ್ಲ ಶ್ರೇಷ್ಠನಾದವನೆ ! ನೀನು ಈಗಲೇ ಜೀವನ್ಮುಕ್ತನಾಗುವೆ ||೩೦||