ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಣ್ಯಕಾಂಡಳಿ ಮದ್ದಕ್ಕಿರ್ದುಭಾ ಲೋಕೇ ಜಾತಾ ಚೇನ್ನು ಕಿದಾಯಿನೀ || ಭಕ್ಕೆ ಯಥಾ ಪ್ರಸನ್ನಃ ಸ್ಯಾಂ ತಥಾ ನಾನ್ಯನ ಕೇನಜಿತ್ |೩೧|| ಇತಿ ದತ್ತಾ ವರಂ ತಸ್ಯ ಪ್ರಸನ್ನಾಯ ರಘೋತ್ತಮಃ | ವಿರಾಧಂ ಪೋಷಯಾಮಾಸ ಭೂಯಃ ಸ್ವರ್ಗ ಸುಖಾಸ್ಪದವು ||೩|| ಹತ್ಯಾ ತು ತಂ ಭೀಮಬಲಂ ವಿರಾಧಂ ರಾಕ್ಷಸಂ ವನೇ | ತತಃ ಸೀತಂ ಸಮಾಶ್ಚಾಸ್ಯ ರಾಮೋ ಲಕ್ಷ್ಮಣಸಂಯುತಃ ||೩೩|| ಶರಭಜ್ಞ ಕಮಂ ಗತಾ ರಾಘವಃ ಸಪರಿಚ್ಚದ | ಅಗ್ನಿಹೋತ್ರಮುಖಾಸೀನಂ ಶರಭಜ್ಞ ಮುಖಾಗಮತ್ ||೩೪| ತಸ್ಯ ಪದೌ ಚ ಸಂಗೃಹ್ಯ ರಾಮಃ ಸೀತಾ ಚ ಲಕ್ಷ್ಯತಿ || ನಿಷೇದುಃ ಸಮನುಜ್ಞಾತಾಃ ಅಬ್ಬಾವಾಸಾನಿಮನ್ನಿತಾಃ ||೩೫I ಆತಿಥ್ಯಮಕರೋತ್ ತೇಪಾಂ ಕನ್ಗ ಮೂಲಫಲಾದಿಭಿಃ | ಪ್ರತ್ಯಾಹ ಹರಭಜಪಿ ರಾಮಂ ಭಕ್ತ ಪರಾಯಣಮ್ |೩೩|| ಅಹಂ ಜ್ಞಾತ್ವಾ ನರವ್ಯಾಧು) ವರ್ತಮಾನಮಯೂರತಃ | ಬ್ರಹ್ಮಲೋಕಂ ನ ಗಚ್ಛಾಮಿ ತಾಮದೃಷ್ಟಾ ಪ್ರಿಯಾತಿಥಿವಮ್ |೩೭|| ಲೋಕದಲ್ಲಿ ನನ್ನ ಭಕ್ತಿಯು ಸುತರಾಂ ದುರ್ಲಭವಾದುದು ಅದು ಉಂಟಾದ ಪಕ್ಷ ದಲ್ಲಿ, ಮುಕ್ತಿಯನ್ನೇ ಕಡತಕ್ಕುದು ನಾನು ಭಕ್ತಿಯಿಂದ ಹೇಗೆ ಪ್ರಸನ್ನನಾಗುವೆನೋ, ಹಾಗೆ ಮತ್ತಾವುದರಿಂದಲೂ ಪ್ರಸನ್ನ ನಾಗಲಾರೆನು || ೩೧ ಹೀಗೆಂದು ಆ ರಘೋತ್ತಮನು ಶರಣಾಗತನಾದ ಎರಾಧನಿಗೆ ವರವನ್ನು ಕೊಟ್ಟು, ಪುನಃ ಸುಖಾಶ್ರಯವಾದ ಸ್ವರ್ಗಲೋಕಕ್ಕೆ ಅವನನ್ನು ಕಳುಹಿಸಿಕೊಟ್ಟ ಸು ||೩೨|| ಎಲ್‌ ಪಾಶ್ವತಿ! ಆ ವನದಲ್ಲಿ ವಿರಾಧನಾಮನಾದ ಮಹಾಭೀಮ ಪರಾಕ್ರಮನಾದ ರಾಕ್ಷ ಸನನ್ನು ಕೊಂದು, ಬಳಿಕ ಸೀತೆಯನ್ನು ಆಶ್ವಾಸನೆಮಾಡಿ, ರಘುಕುಲ ತಿಲಕನಾದ ಶ್ರೀರಾ ಮನು, ಲಕ್ಷ್ಮಣನೊಡನೆಯೂ ತನ್ನ ಪರಿವಾರದೊಡನೆಯ ಶರಭಂಗಮುನಿಯ ಆಶ್ರಮಕ್ಕೆ ಬಂದು, ಅಗ್ನಿಹೋತ್ರ ಮಾಡುತಿರುವ ಆ ಮುನಿಯ ಸಮೀಪವನ್ನು ಸೇರಿದನು || ೩೩-೭೪|| ಬಳಿಕ ಸೀತಾ ರಾಮ ಲಕ್ಷ್ಮಣರು ಆ ಶರಭಂಗನ ಪಾದಗಳಿಗೆ ನಮಸ್ಕರಿಸಿ, ಅವನ ಅನು ಜ್ಞೆಯನ್ನು ಪಡೆದು, ಅವನಿಂದ ಆಮಂತ್ರಿತರಾಗಿ, ಅಲ್ಲಿಯೇ ವಾಸಸ್ಥಾನವನ್ನು ಹೊಂದಿ ಕುಳಿ ತುಕೊಂಡರು ||೩೫|| ಅನಂತರ ಆ ಶರಭಂಗನು ಅವರಿಗೆ ಕಂದ ಮಲ ಫಲಾದಿಗಳಿಂದ ಆತಿಧ್ಯವನ್ನು ಮಾಡಿ, ಭಕ್ತ ಪರಾಯಣನಾದ ರಾಮನನ್ನು ಕುರಿತು ಪ್ರೀತಿಯಿಂದ ಹೀಗೆ ಹೇಳಿದನು ||೩೬H ಹೇ ಪುರುಷೋತ್ತಮ! ನೀನು ಸಾಪದಲ್ಲಿಯೇ ಬರುತಿದ್ದುದನ್ನು ತಿಳಿದು, ಪ್ರಿಯಾವಿಧಿ ಯಾದ ನಿನ್ನನ್ನು ಕಾಣದೆ ಹೋಗಬಾರದೆಂದು ನಾನು ಇನ್ನೂ ಬ್ರಹ್ಮಲೋಕಕ್ಕೆ ಹೋಗದಿರು ವೆನು ||೩೭||