೧೨೬ oಗ್ರಹ ರಾಮಾಯಣಂ [ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ [ಸರ್ಗ ಅಧ ಶ್ರೀಮದರಂಕಾ ತ್ರಯೋದಕಃ ಸರ್ಗಃ, -Yಇ@ರ್@- ಶಿಶಿವಉವಾಚ ಇತಿ ತಪ್ಪಚನಂ ಶ ತ್ಸಾಂ ರಾವತಿ ಕಾಲಚೋದಿತಃ | ಕೋಶಾತ್ ಖಡ್ಗಂ ಸಮುದೃತ್ಯ ಹನುಂ ಸಮುಪಚಕಮೇ | Pi ತಸ್ಯಾವಸ್ಲಾಂ ಪರಿಜ್ಞಾಯ ಮಾರೀಚೋ ಬುದ್ಧಿಮತ್ತರಃ || ಚಿನ್ನ ಯಾಮಾಸ ಮನಸಿ ಹಿತಂ ಪಥ್ಯಂ ನಿಜಾತ್ಮನಃ ||೨|| ರಾಕ್ಷಸಾನಾಂ ಪಿಶಾಚೇನ ಹತೋ ಯದಿ ಪಿಶಾಚತಾ | ರಾಮ- ನಿಹತಃ ಪಾ ಪ್ಪೆ ಮುಕ್ತಿಂ ಮುನಿಸುದುರ್ಲಬ್ರಮ್ |೩|| ಇತಿ ಸಂಜನ್ಯ ಮನಸಾ ಸಹಾಯಾಯ ಮನೋ ದಧೇ | ಸಮಯೇ ಸಮನುಪ್ರಾಸ್ತೇ ನ ಸೀದ ಮನೀಷಿಣಃ | ಅರಣ್ಯಕಾಂಡದಲ್ಲಿ ಹದಿಮೂರನೆಯ ಸರ್ಗವು. ಶ್ರೀಪರಮೇಶ್ವರನು ಮತ್ತೆ ಪಾಶ್ವತಿಯನ್ನು ಕುರಿತು ಹೇಳುವನು -- ಎಲ್ ಪತಿ | ಪೂರೋಕ್ತ ರೀತಿಯಾಗಿ ತನಗೆ ಹಿತೋಪದೇಶಮಾಡಿದ ಮಾರೀಚನ ಮಾತನ್ನು ಕೇಳಿ, ಕಾಲಚೋದಿತನಾದ ರಾವಣನ್ನು ಒರೆಯಿಂದ ಕತ್ತಿಯನ್ನು ಹಿಡಿದು ಅವನನ್ನು ಕೊಲ್ಲಲುದ್ಯುಕ್ತನಾದನು ||೧|| - ಹೀಗೆ ತನ್ನನ್ನು ಕೊಲ್ಲಲೆಳಸುತಿರುವ ರಾವಣನ ಸ್ಥಿತಿಯನ್ನು ತಿಳಿದುಕೊಂಡು, ಅತಿ ಬುದ್ದಿ ಶಾಲಿಯಾದ ಮಾರೀಚನು, ತನಗೆ ಹಿತವಾಗಿಯ ಪಧ್ಯವಾಗಿಯೇ ಇರುವಂತೆ ತನ್ನ ಮನಸ್ಸಿ ನಲ್ಲಿ ಹೀಗೆ ಯೋಚಿಸಿದನು ||೨|| ರಾಕ್ಷಸರಲ್ಲೆಲ್ಲ ಪಿಶಾಚ ಸ್ವರೂಪನಾಗಿರುವ ಈ ರಾವಣನಿಂದ ನಾನು ಹತನಾದಪಕ್ಷ ದಲ್ಲಿ, ನನಗೆ ಪಿಶಾಚಜನ್ನವೇ ಸಿದ್ದ ವಾಗುವುದು ಅದು ಕಾರಣ, ನಾನು ರಾಮನಿಂದ ಹತನಾಗಿ, ಮುನಿಗಳಿಗೂ ಅತಿ ದುರ್ಲಭವಾಗಿರುವ ಮುಕ್ತಿಯನ್ನು ಪಡೆಯುವೆನು ||೩|| ಹೀಗೆಂದು ಮನಸ್ಸಿನಲ್ಲಿ ನಿರ್ಧರಿಸಿಕೊಂಡು, ಮಾರೀಚನು ರಾವಣನಿಗೆ ಸಾಹಾಯ್ಯಮಾ ಡುವುದಕ್ಕೆ ಮನಸ್ಸು ಮಾಡಿದನು. ಎಂತಹ ಸಮಯವೊದಗಿದರೂ, ಬುದ್ದಿವಂತರಾದವರು ತೊಂದರೆಗೊಳಗಾಗುವುದಿಲ್ಲವಲ್ಲವೆ ! ||೪||
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೧೩೦
ಗೋಚರ