t೨೯ ಅರಣ್ಯಕಾಂಡಃ ಸಂವತ್ಸರೋವಶಿಷ್ಟೋ ಮೇ ರಾವಣಸ್ಯ ವಧಾರ್ಥಿನಃ | ಸಬನ್ಸೂರತಿವೃತಸ್ಯ ಸನಿಮಿತ್ತವಧೋ ಭವೇತ್ ||೧೭|| ಸೀತಾಹರಣಕಾಮೇನ ರಾವಣೇನ ದುರಾನಾ || ಮಮಾಶ್ರಮಮಿದಂ ಪಾಪಂ ಅವಶಿಷ್ಟೇನ ಮಣಾ ||೧|| ಏತೇನೈವ ನಿಮಿತ್ತೇನ ಹನ್ನು, ಶಕ್ರೋ ಮಯಾಸುರಃ | ಅವಶಿಷ್ಟವಧಾರ್ಥಾಯ ಪುನರ್ಜನ್ಮ ಭವೇನ್ಮಮ || ೧೯ | ನ ಕೃತ, ಸೇತುಬನ್ನೊಪಿ ಬ್ರಹ್ಮಹತ್ಯಾ ನಿವಾರಕಃ | ಸೇತುಂ ದೃಷ್ಟಾ ಸಮುದಸ್ಯ ಬ್ರಹ್ಮಹತ್ಯಾಂ ವ್ಯಪೋಹತಿ |-೨೦|| ರಾವಣಂ ಪಾಪಕರ್ಮಾನಿ೦ ಹತ್ಸಾ ಲಂಕಾಪುರೀ೦ ಕ್ಷಣೇ | ಆಚನಾ ರ್ಕಂ ಮಹಾಖ್ಯಾತಿಃ ಪಾವನೀ ಸಂಭವಿಷ್ಯತಿ | ರಾಮಾಯಣ ಕಥಾ ಚಾಪಿ ಭವಿಷ್ಯತಿ ಸುಪಾವನಿ (೨೧| ನಾನು ರಾವಣನ ವಧಾರ್ಧಿಯಾಗಿಯೇ ಇರುವೆನು. ಅವನನ್ನು ಕೊಲ್ಲುವುದಕ್ಕೆ ನನಗೆ ಇನ್ನೊಂದು ವರ್ಷಕಾಲ ಅವಶಿಷ್ಟವಾಗಿರುವುದು. ಅತಿದುರ್ವತ್ರನಾಗಿರುವ ಅವನನ್ನು ಯಾವು ದಾದರೊಂದು ನಿಮಿತ್ತ ಮಾಡಿಕೊಂಡು ಒಂಧುಸಹಿತನಾಗಿ ಕೊಲ್ಲಬೇಕಾಗಿರುವುದು ||೧೭|| ಆ ದುರಾತ್ಮನಾದ ರಾವಣನೂ ಕೂಡ, ಸೀತೆಯನ್ನು ಅಪಹರಿಸಬೇಕೆಂಬ ಇಚ್ಛೆ ಯಿಂದ ಹಿಂದೆ ವಿಶ್ವಾಮಿತ್ರಯಜ್ಞ ಕಾಲದಲ್ಲಿ ನನ್ನಿಂದ ಹತಶೇಷನಾದ ಮಂತ್ರಿಯಾದ ಮಾರೀಚನೊಡನೆ ನನ್ನ ಆಶ್ರಮಕ್ಕೆ ಬಂದಿರುವನು ||೧೮|| ಇದನ್ನೇ ನಿಮಿತ್ತ ಮಾಡಿಕೊಂಡು ನಾನು ಆ ರಾವಣನನ್ನು ಕೊಲ್ಲಬಹುದಾಗಿರುವುದು. ಆದರೆ, ಇಲ್ಲಿಯೇ ಅವನನ್ನು ಕೊಂದುಬಿಟ್ಟರೆ, ಮಿಕ್ಕ ರಾಕ್ಷಸರನ್ನೆಲ್ಲ ಕೊಲ್ಲುವುದಕ್ಕಾಗಿ ನಾನು ಪುನಃ ಅವತಾರಮಾಡಬೇಕಾಗುವುದು ||೧೯|| ಇದೂ ಅಲ್ಲದೆ, ಸತ್ವ ಜನರಿಗೂ ಬ್ರಹ್ಮಹತ್ಯಾ ನಿವಾರಕವಾದ ಸೇತುವೂ ನನ್ನಿಂದ ಇನ್ನೂ ಮಾಡಲ್ಪಡಲಿಲ್ಲ. ನಾನು ಮಾಡುವ ಸಮುದ್ರಸೇತುವಿನ ದರ್ಶನಮಾತ್ರದಿಂದಲೇ ಮನುಷ್ಯನು ಬ್ರಹ್ಮಹತ್ಯೆಯನ್ನು ಕಳೆದುಕೊಳ್ಳುವನು ||೨೦|| ಪಾಪಕರನಾದ ರಾವಣನನ್ನೂ ಅವನ ರಾಜಧಾನಿಯಾದ ಲಂಕಾಪಟ್ಟಣವನ್ನೂ ಒಂದು ಕ್ಷಣ ಕಾಲದೊಳಗಾಗಿ ನಾಶಮಾಡಿಬಿಟ್ಟರೆ, ಆಗ ನನಗೆ ಆಚಂದ್ರಾರ್ಕವಾಗಿ ಪವಿತ್ರವಾದ ಮಹಾಖ್ಯಾತಿಯು ಉಂಟಾಗುವುದು, ಅತಿಪಾವನವಾದ ರಾಮಾಯಣಕಥೆಯ ಪ್ರಚುರವಾಗು ಪುದು ||೨೧||
ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೧೩೩
ಗೋಚರ